Home ರಾಜಕೀಯ ಸಿದ್ದು-ಮುನಿರತ್ನ ಮುಕ್ತ ಮಾತುಕತೆ

ಸಿದ್ದು-ಮುನಿರತ್ನ ಮುಕ್ತ ಮಾತುಕತೆ

101
0

ನೀನು ಮಂತ್ರಿ ಆಗ್ತಿಯಾ: ಸಿದ್ದರಾಮಯ್ಯ

ಬೆಂಗಳೂರು:

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ರಾಜಾರಾಜೇಶ್ಬರಿ ನಗರ ಶಾಸಕ ಮುನಿರತ್ನ ವಿಧಾನಸಭೆಯ ಮೊಗಸಾಲೆಯಲ್ಲಿ ಭೇಟಿಯಾಗಿ ಲೋಕಾಭಿರಾಮವಾಗಿ ಸಮಾಲೋಚಿಸಿದರು.

ಮಧ್ಯಾಹ್ನ ಭೋಜನ ವಿರಾಮದ ವೇಳೆ ಮೊಗಸಾಲೆಯಲ್ಲಿ ಮೀಸಲಿರಿಸಿರುವ ಸ್ಥಳದಲ್ಲಿ ಇಬ್ಬರೂ ಮುಕ್ತವಾಗಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಏನಯ್ಯ ಮುನಿರತ್ನ? ಬೈ ಎಲೆಕ್ಷನ್ ನಲ್ಲಿ ಅಷ್ಟು ಲೀಡ್ ಹೇಗೆ ಬಂತು ನಿಂಗೆ?.

ಮುನಿರತ್ನ – ನೀವೇ ಹೇಳಬೇಕು ಸರ್

SIDDARAMAIAH and MUNIRATHNA ...

ಸಿದ್ದರಾಮಯ್ಯ- ನಿಂಗೆ ನಾನು ಸಿಎಂ ಆಗಿದ್ದಾಗ ಕೊಟ್ಟ ಅನುದಾನದಿಂದಲೇ ನೀನು ಗೆದ್ದಿದಿಯಾ. ಕೇಳಿದಾಗಲೆಲ್ಲಾ ಕ್ಷೇತ್ರಕ್ಕೆ ಅನುದಾನ ಕೊಟ್ಟಿದಿನಿ. ನಿನ್ನ ಎಲೆಕ್ಷನ್ ಸಂದರ್ಭದಲ್ಲಿ ಅದ್ನೇ ಹೇಳಿದ್ನಲ್ಲವಾ ? ನಾನು ಕೊಟ್ಟ ಅನುದಾನದಲ್ಲೇ ಆರ್ ಆರ್ ನಗರ ಅಭಿವೃದ್ಧಿ ಆಗಿದೆ ಅಂತ‌.

ಮುನಿರತ್ನ – ಯಾಕೆ ನಿಮ್ ಕ್ಯಾಂಡಿಡೇಟ್ ಗೆಲ್ಲಲಿಲ್ಲ ಹಾಗಾದರೆ?

‌ಸಿದ್ದರಾಮಯ್ಯ- ಹೋಗಲಿ ಬಿಡು, ಮುಗೀತಲ್ಲಾ ಮಂತ್ರಿ ಆಗ್ತಿಯಾ ಕಣಯ್ಯ ನೀನು ,ಅವರಿಬ್ಬರೂ [ ಸೋಮಶೇಖರ, ಬೈರತಿ ಬಸವರಾಜ್] ಮಂತ್ರಿಯಾಗಿದ್ದಾರೆ. ನೀನೂ ಆಗ್ತೀಯಾ ಬಿಡು.

ಮುನಿರತ್ನ – ನೋಡೋಣ ಸರ್. ಯಾವಾಗ ಮಂತ್ರಿ ಮಾಡ್ತಾರೋ ಮಾಡಲಿ ಎಂದರು. ಇಬ್ಬರೂ ಆತ್ಮೀಯರಂತೆ ಮಾತುಕತೆ ನಡೆಸಿದರು.

LEAVE A REPLY

Please enter your comment!
Please enter your name here