ಬೆಂಗಳೂರು: ಮೈಸೂರು–ಬೆಳಗಾವಿ ಹಾಗೂ ಯಶವಂತಪುರ–ತಿರುವನಂತಪುರಂ ಎಕ್ಸ್ಪ್ರೆಸ್ ಸೇರಿದಂತೆ ಆರು ರೈಲುಗಳ ಸಂಖ್ಯೆಯನ್ನು ಜನವರಿ 2027ರಿಂದ ಬದಲಾಯಿಸಲಾಗುವುದು ಎಂದು ನೈಋತ್ಯ ರೈಲ್ವೆ ಮಂಗಳವಾರ ತಿಳಿಸಿದೆ. ಎಲ್ಲ ರೈಲುಗಳ ನಿಲುಗಡೆ ಮತ್ತು ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ.
ಹೊಸ ರೈಲು ಸಂಖ್ಯೆಗಳು
- 20676 ಮೈಸೂರು–ಬೆಳಗಾವಿ ಎಕ್ಸ್ಪ್ರೆಸ್ 2027ರ ಜನವರಿ 1ರಿಂದ 16275 ಆಗಲಿದೆ.
- 20675 ಬೆಳಗಾವಿ–ಮೈಸೂರು ಎಕ್ಸ್ಪ್ರೆಸ್ 2027ರ ಜನವರಿ 1ರಿಂದ 16276 ಆಗಲಿದೆ.
- 12257 ಯಶವಂತಪುರ–ತಿರುವನಂತಪುರಂ ಎಕ್ಸ್ಪ್ರೆಸ್ 2027ರ ಜನವರಿ 3ರಿಂದ 16537 ಯಶವಂತಪುರ–ತಿರುವನಂತಪುರಂ ನಾರ್ತ್ ಎಕ್ಸ್ಪ್ರೆಸ್ ಆಗಲಿದೆ.
- 12258 ತಿರುವನಂತಪುರಂ ನಾರ್ತ್–ಯಶವಂತಪುರ ಎಕ್ಸ್ಪ್ರೆಸ್ 2027ರ ಜನವರಿ 4ರಿಂದ 16538 ಆಗಲಿದೆ.
- 12779 ವಾಸ್ಕೋ ಡ ಗಾಮ–ಹಜರತ್ ನಿಜಾಮುದ್ದೀನ್ ಎಕ್ಸ್ಪ್ರೆಸ್ 2027ರ ಜನವರಿ 1ರಿಂದ 17379 ಆಗಲಿದೆ.
- 12780 ಹಜರತ್ ನಿಜಾಮುದ್ದೀನ್–ವಾಸ್ಕೋ ಡ ಗಾಮ ಎಕ್ಸ್ಪ್ರೆಸ್ 2027ರ ಜನವರಿ 1ರಿಂದ 17380 ಆಗಲಿದೆ.
ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಈ ವಿವರಗಳನ್ನು ನೀಡಿದ್ದಾರೆ.
