Home ಆರೋಗ್ಯ ಲಸಿಕೆ ಪಡೆದಿದ್ದ ಮೈಸೂರು ಮೇಯರ್, ಅವರ ಪತಿಗೆ ಕೊರೋನಾ ಸೋಂಕು!

ಲಸಿಕೆ ಪಡೆದಿದ್ದ ಮೈಸೂರು ಮೇಯರ್, ಅವರ ಪತಿಗೆ ಕೊರೋನಾ ಸೋಂಕು!

85
0

ಮೈಸೂರು:

ಕೊರೋನಾ ಲಸಿಕೆ ಪಡೆದಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯತ್ ರುಕ್ಮಿಣಿ ಮಾದೇಗೌಡ ಅವರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಅವರ ಪತಿ ಮಾದೇಗೌಡ ಅವರಿಗೆ ಸಹ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಪ್ರಸ್ತುತ ದಂಪತಿಗಳು ಇಬ್ಬರೂ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮೈಸೂರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಅಮರ್ನಾಥ್ ಇಬ್ಬರೂ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಡಿಸಿದ್ದಾರೆ ಆದರೆ ಅವರ ಆರೋಗ್ಯ ಸ್ಥಿತಿ ಸ್ಥಿರ ವಾಗಿದೆ ಮತ್ತು ಚಿಂತೆ ಮಾಡಲು ಏನೂ ಇಲ್ಲ, ಎಂದರು.

ಮಾರ್ಚ್ 13ರಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡ ಕೋವಿಡ್ ಲಸಿಕೆ ಪಡೆದಿದ್ದರು.

ಮೇಯರ್ ನಗರದ ಹಲವೆಡೆ ಸಂಚರಿಸಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದೀಗ ಮೇಯರ್ ಅವರಿಗೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆ ಅವರೊಂದಿಗೆ ಸಂಪರ್ಕಕ್ಕೆ ಬಂದವರಲ್ಲಿ ಆತಂಕಕ್ಕೆ ಕಾರಣವಾಗಿದೆ.

“ನೀವು ವ್ಯಾಕ್ಸಿನೇಷನ್ ಪಡೆದರೆ ಕೋವಿಡ್ -19 ವೈರಸ್ ದಾಳಿ ಮಾಡುವುದಿಲ್ಲ ಎಂದು ಯಾರೂ ಹೇಳಿಲ್ಲ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕನಿಷ್ಠ 45 ದಿನಗಳು ಬೇಕಾಗುತ್ತದೆ. ಮೇಯರ್ ಮತ್ತು ಅವರ ಪತಿ ಇಬ್ಬರೂ ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಮತ್ತು ಪ್ರಸ್ತುತ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ” ಎಂದು ಡಾ.ಅಮಮರ್ನಾಥ್ ದಿಬೆಂಗಳೂರುಲೈವ್ ಜೊತೆ ಮಾತನಾಡುತ್ತಾ ಹೇಳಿದರು.”

LEAVE A REPLY

Please enter your comment!
Please enter your name here