Home ಅಪರಾಧ ನಮ್ಮ ಮೆಟ್ರೋ: 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್

ನಮ್ಮ ಮೆಟ್ರೋ: 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್

70
0
Namma Metro: crane Falls from 40 feet in Bengaluru

ಕರ್ತವ್ಯನಿರತ ನೂರಾರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು:

ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ ಸಂಭವಿಸಿದೆ.

ನಮ್ಮ ಮೆಟ್ರೋ ಫೇಸ್-2 ಕಾಮಗಾರಿ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಕ್ರೇನ್ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದೆ. ಮೆಟ್ರೋ ಸೆಗ್ಮೆಂಟ್ಸ್ ಜೋಡಿಸುವ ಮಷೀನ್ ಅರ್ಧಕ್ಕೆ ಕಟ್ ಆಗಿದೆ. ಕರ್ತವ್ಯನಿರತ ನೂರಾರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Namma Metro: crane Falls from 40 feet in Bengaluru

ಸಿಲ್ಕ್ ಬೋರ್ಡ್ ಬಳಿ ಜೋಡಣೆ ವೇಳೆ ಈ ಘಟನೆ ಸಂಭವಿಸಿದ್ದು ಬೆಳಗ್ಗೆ 6.30ರ ಸುಮಾರಿಗೆ ಕ್ರೇನ್ ಕೆಳಗೆ ಬಿದ್ದಿದೆ.

ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ಮಾರ್ಗವಾಗಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ವೇಳೆ ಅಸಂಬಲ್ ಜೋಡಿಸುವಾಗ ಲಾಂಚಿಂಗ್ ಗಾರ್ಡ್ ಎಂಬ ಬೃಹತ್ ಮಷೀನ್ ದಿಢೀರ್ ಕುಸಿದು ಕೆಳಗೆಬಿದ್ದಿದೆ.

Namma Metro: crane Falls from 40 feet in Bengaluru

ಇನ್ನು ಘಟನೆ ಸಂಬಂಧ ನಮ್ಮ ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಫೇಸ್ 2ರಲ್ಲಿ ಇಂಥ ಘಟನೆ ಮೊದಲ ಬಾರಿಗೆ ನಡೆದಿದೆ. ನಾಲ್ಕು ಲಾಂಚರ್​ಗಳ ಮೂಲಕ ಕಾಮಗಾರಿ ನಡೆಯುತ್ತಿತ್ತು. ಘಟನೆ ಕುರಿತಂತೆ ತನಿಖೆಗೆ ಸೂಚನೆಯನ್ನು ನೀಡಲಾಗಿದೆ. ಕಟ್ ಆಗಿರುವ ಲಾಂಚರ್ ಮತ್ತೆ ಬಳಸುವುದಕ್ಕೆ ಸಾಧ್ಯವಿಲ್ಲ. ಈ ಘಟನೆಯಿಂದ ಕಾಮಗಾರಿ 15-25 ದಿನ ವಿಳಂಬ ಸಾಧ್ಯತೆ. ನಿಗದಿಯಾದ ಸಮಯಕ್ಕೆ ಕಾಮಗಾರಿ ಪೂರ್ಣ ಮಾಡುತ್ತೇವೆ ಎಂದಿದ್ದಾರೆ.

Also Read: Lucky escape for Bengaluru Metro workers as crane falls 40 feet

LEAVE A REPLY

Please enter your comment!
Please enter your name here