ಬೆಂಗಳೂರು:
ಮೆಟ್ರೋ ನೇರಳೆ ಮಾರ್ಗದಲ್ಲಿ ವಿಸ್ತರಿತ ಸಂಚಾರದ ಕಾಮಗಾರಿಗಾಗಿ ಮೈಸೂರು ರಸ್ತೆಯಿಂದ ಕೆಂಗೇರಿಯವರೆಗೆ ನಾಳೆ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ವಿಸ್ತರಿತ ಮಾರ್ಗಲ್ಲಿ ಸಿಗ್ನಲಿಂಗ್ ಮತ್ತಿತರ ಕಾಮಗಾರಿಗಳು ನಡೆಯುತ್ತಿರುವುದರಿಂದ ಈ ವ್ಯತ್ಯಯವಾಗಲಿದೆ. ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಬೆಳಗ್ಗೆ 5.00 ರಿಂದ ರಾತ್ರಿ 11.00 ರವರೆಗೆ ರೈಲು ಸೇವೆಗಳು ಲಭ್ಯವಿರುತ್ತದೆ.

ಆಗಸ್ಟ್ 23 ಮತ್ತು 24 ರಂದು ಬೆಳಗ್ಗೆ 5 ರಿಂದ ಬೆಳಗ್ಗೆ 7ರವರೆಗೂ ಇದೇ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಇರುವುದಿಲ್ಲ. ಬೆಳಗ್ಗೆ 7 ರ ನಂತರ ಎಂದಿನಂತೆ ಸಂಚಾರ ಇರಲಿದೆ.
ಆಗಸ್ಟ್ 20 ರಿಂದ 29ರವೆರೆಗೆ ಇದೇ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ- ಬೈಯಪ್ಪನಹಳ್ಳಿ – ಕೆಆರ್ ಪುರ-ವೈಟ್ ಫೀಲ್ಡ್ ನಡುವೆ ಬೆಳಿಗ್ಗೆ 5 ರಿಂದ 7ರವರೆಗೆ ರೈಲು ಸಂಚಾರ ಇರುವುದಿಲ್ಲ. ಹಸಿರು ಮಾರ್ಗದಲ್ಲಿ ಯಾವುದೇಬದಲಾವಣೆಗಳು ಇರುವುದಿಲ್ಲ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.