Home ಬೆಂಗಳೂರು ನಗರ ವಿಶ್ವನಾಯಕರಾಗಿ ಹೊರಹೊಮ್ಮಿದ ಶ್ರೀ ನರೇಂದ್ರ ಮೋದಿ

ವಿಶ್ವನಾಯಕರಾಗಿ ಹೊರಹೊಮ್ಮಿದ ಶ್ರೀ ನರೇಂದ್ರ ಮೋದಿ

68
0

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್

ಬೆಂಗಳೂರು:

ಕ್ರಿಸ್ತ ಪೂರ್ವ, ಕ್ರಿಸ್ತ ಶಕ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಎಂಬ ಪರಿಕಲ್ಪನೆಯ ಮಾದರಿಯಲ್ಲೇ ಮುಂದೆ ದೇಶದಲ್ಲಿ ಶ್ರೀ ನರೇಂದ್ರ ಮೋದಿ ಪೂರ್ವ ಮತ್ತು ಮೋದಿ ಆಡಳಿತದ ನಂತರ ಎಂಬ ಪರಿಕಲ್ಪನೆ ಬರಲಿದೆ. ಜನಪರ ಆಡಳಿತಗಾರರು ಹಾಗೂ ನಮ್ಮ ನೆಚ್ಚಿನ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು, ತಮ್ಮ ಅದ್ಭುತ ಕಾರ್ಯವೈಖರಿ ಮೂಲಕ ದೇಶ ಮತ್ತು ವಿಶ್ವದಲ್ಲಿ ಜನಪ್ರಿಯತೆ ಪಡೆದಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.

ಬಿಜೆಪಿ ಮಾಧ್ಯಮ ವಿಭಾಗ, ಕರ್ನಾಟಕದ ವತಿಯಿಂದ ಶನಿವಾರ ಬೆಂಗಳೂರಿನ ಪ್ಯಾಲೇಸ್ ರಸ್ತೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ “ಮಾಧ್ಯಮ ಮಂಥನ 2021” ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಶ್ರೀ ಮೋದಿ ಅವರು ಪ್ರಸಿದ್ಧಿಯ ಹಿಂದೆ ಹೋಗಲಿಲ್ಲ. ಪ್ರಸಿದ್ಧಿ ಅವರ ಹಿಂದೆ ಬಂದಿದೆ. ಮಾಧ್ಯಮಗಳ ಜೊತೆ ಅತಿ ಕಡಿಮೆ ಮಾತನಾಡಿದರೂ ಉತ್ತಮ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಕಾರ್ಯ, ನಡೆ ನುಡಿಯಲ್ಲಿ ಏಕಾಗ್ರತೆ ಸಾಧನೆ ಅವರ ವಿಶಿಷ್ಟತೆ ಎಂದು ಮೆಚ್ಚುಗೆ ಸೂಚಿಸಿದರು.

ರಾಜಕೀಯದಲ್ಲೂ ಪರಿವರ್ತನೆ ತಂದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು, ಅತ್ಯುತ್ತಮ ಆಡಳಿತಕ್ಕೆ ನಾಂದಿ ಹಾಡಿದ್ದು, ಜನಪರ ಆಡಳಿತ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಜನರ ಮಾನಸಿಕತೆಯಲ್ಲೂ ಪರಿವರ್ತನೆ ಆಗಿದೆ. ಬಿಜೆಪಿ ನಾಯಕರು ಅಧ್ಯಯನ ಮಾಡಿ ವಿಚಾರವನ್ನು ಜನರ ಮುಂದಿಡುತ್ತಾರೆ ಎಂದು ವಿಶ್ಲೇಷಿಸಿದರು.

ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆರು ವರ್ಷ ಕಾಲ ಭ್ರಷ್ಟಾಚಾರಹಿತ ಆಡಳಿತ ನೀಡಿದ್ದೇವೆ. ಯಾವುದೇ ಗಲಭೆಗಳಿಲ್ಲದೆ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯ ನೆರವೇರಿದೆ. 370ನೇ ವಿಧಿ ರದ್ದತಿ ನಂತರ ಗಲಭೆ ಆಗಬಹುದೆಂಬ ಮಾತುಗಳಿದ್ದರೂ ಅಂಥದ್ದೇನೂ ಆಗಲಿಲ್ಲ. ತ್ರಿವಳಿ ತಲಾಖ್ ರದ್ದತಿಯೂ ಜಾರಿಯಾಗಿದೆ. ಯುವಜನರು ರಾಜಕೀಯಕ್ಕೆ ಬರಲು ಮುಂದಾಗುತ್ತಿದ್ದಾರೆ. ರಾಷ್ಟ್ರಪ್ರೇಮದ ಜಾಗೃತಿ ಉಂಟಾಗಿದೆ ಎಂದರು.

ಅಧ್ಯಯನಶೀಲತೆಗೆ ಚಿಂತನ ಮಂಥನ ಅತ್ಯಗತ್ಯ. ಅಂಥ ಚಿಂತನ ಮಂಥನ ಇಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲೂ ಚಿಂತನ ಮಂಥನ ನಡೆಯಲಿ ಎಂದು ಅವರು ಆಶಿಸಿದರು.

ರಾಜಕೀಯವು ಇತರ ಎಲ್ಲಾ ವಿಭಾಗಕ್ಕಿಂತ ಮುಂದಿರುವ ಕಾರಣ ನಮ್ಮ ಒಂದೊಂದು ಶಬ್ದ, ಮಾತುಗಳನ್ನು ಮಾಧ್ಯಮ ಹಾಗೂ ಸಮಾಜ ಅವಲೋಕನ ಮಾಡುತ್ತಿರುತ್ತದೆ. ನಾವು ಪ್ರಸಿದ್ಧಿಯ ಹಿಂದೆ ಹೋಗಬಾರದು. ನಮ್ಮ ಹಿಂದೆ ಪ್ರಸಿದ್ಧಿ ಬರುವಂತಾಗಬೇಕು. ಮಾತು ನಮ್ಮ ವಿಚಾರ ಹಾಗೂ ಸಿದ್ಧಾಂತವನ್ನು ತಿಳಿಸುತ್ತದೆ. ವಿಷಯ ಮಂಡನೆ, ಚರ್ಚೆಗಳಲ್ಲಿ ಪಾಲ್ಗೊಳ್ಳುವುದು, ಪಕ್ಷಕ್ಕೆ ಲಾಭ ಆಗುವ ರೀತಿಯಲ್ಲಿ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.

ವಿಶಿಷ್ಟ ಸನ್ನಿವೇಶದಲ್ಲಿ ನಾವಿದ್ದೇವೆ. ಇಂದು ಸುಭಾಷ್‍ಚಂದ್ರ ಬೋಸ್ ಅವರ ಜನ್ಮದಿನ ಎಂದು ನೆನಪಿಸಿದ ಅವರು, ಅವರ ಆದರ್ಶಗಳನ್ನು ಅನುಸರಿಸಲು ಮನವಿ ಮಾಡಿದರು. ಇಂದು ಮಾಧ್ಯಮಗಳೇ ಸವಾಲು ಎದುರಿಸುತ್ತಿವೆ. ನಿಮಿಷ ನಿಮಿಷಗಳ ವಿಚಾರ ಸಂಗ್ರಹಕ್ಕೆ ವಿಸ್ತøತ ಜಾಲ ಅಗತ್ಯವಿದೆ. ಮಾಧ್ಯಮ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ನಮ್ಮಲ್ಲಿ ಮಾಧ್ಯಮದಲ್ಲಿ ಕೆಲಸ ಮಾಡುವವರಂತೆ ಅಧ್ಯಯನಶೀಲತೆ, ವಿಚಾರ ಸಂಗ್ರಹ ಸಾಮಥ್ರ್ಯ ಮತ್ತು ಜಾಣ್ಮೆ ಇರಬೇಕು ಎಂದು ತಿಳಿಸಿದರು.

ಪಕ್ಷದ ರಾಷ್ಟ್ರೀಯ ವಕ್ತಾರರು ಮತ್ತು ರಾಜ್ಯಸಭಾ ಸದಸ್ಯರಾದ ಶ್ರೀ ರಾಜೀವ್ ಚಂದ್ರಶೇಖರ್, ರಾಷ್ಟ್ರೀಯ ವಕ್ತಾರರಾದ ಕು.ನೂಪುರ್ ಶರ್ಮ, ಉಪ ಮುಖ್ಯಮಂತ್ರಿಗಳಾದ ಡಾ.ಅಶ್ವತ್ಥನಾರಾಯಣ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಶ್ವತ್ಥನಾರಾಯಣ, ಶ್ರೀ ಸಿದ್ದರಾಜು, ರಾಜ್ಯ ಉಪಾಧ್ಯಕ್ಷರಾದ ಶ್ರೀ ನಿರ್ಮಲ್‍ಕುಮಾರ್ ಸುರಾಣ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ರಾಜ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಸ್ವಾಗತಿಸಿ ಪರಿಚಯ ಮಾಡಿದರು. ಮಾಧ್ಯಮ ವಿಭಾಗದ ರಾಜ್ಯ ಸಂಚಾಲಕರಾದ ಶ್ರೀ ಕರುಣಾಕರ್ ಖಾಸಲೆ ಅವರು ವಂದಿಸಿದರು.

LEAVE A REPLY

Please enter your comment!
Please enter your name here