ಬಾಗಲಕೋಟೆ:
ಇನ್ಪೋಸಿಸ್ ಫೌಂಡೇಸನ್‍ದ ಅಧ್ಯಕ್ಷರಾದ ಡಾ.ಸುಧಾ ಮೂರ್ತಿಯವರು ಜಮಖಂಡಿ ತಾಲೂಕಿನ ಸರಕಾರಿ ಶಾಲೆಯ ವಿದ್ಯಾರ್ಥಿಗೆ ಕಂಪ್ಯೂಟರ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ 400 ಕಂಪ್ಯೂಟರಗಳನ್ನು ನೀಡುವ ಮೂಲಕ ಮಾತೃ ಹೃದಯಿ ಮಹಿಳೆಯಾಗಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದರು.
ಜಮಖಂಡಿಯ ಹುಲ್ಯಾಳ ಕ್ರಾಸ್‍ನಲ್ಲಿರುವ ರಾನಡೆ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿಂದು ಇನ್ಪೋಸಿಸ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಸರಕಾರ ಶಾಲೆಗಳಿಗೆ 400 ಕಂಪ್ಯೂಟರ ಮತ್ತು 100 ಶಾಲೆಗಳಿಗೆ ಗ್ರಂಥಾಲಯದ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಪಾರಿವಾಳ ಹಾರಿ ಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ವಿದೇಶಗಳಲ್ಲಿ ತಮ್ಮ ಪ್ರತಿಭೆ ತೋರಿ ಪ್ರಸಿದ್ದರಾದ ಅನೇಕ ಜನ ಸರಕಾರಿ ಶಾಲೆಗಳಲ್ಲಿಯೇ ಕಲಿತ ವಿದ್ಯಾರ್ಥಿಯಾಗಿದ್ದಾರೆ. ಸರಕಾರ ಹಾಗೂ ಸುಧಾ ಮೂರ್ತಿಯವರಂತಹ ಸಹಕಾರ ನಿರಂತರವಾಗಿದ್ದಲ್ಲಿ ಸರಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಹಿಂದೆ ಬೀಳಲಾರವು. ಪಾಲಕರು ಮುಂದೊಂದು ದಿನ ಸರಕಾರಿ ಶಾಲೆಗೆ ಪ್ರವೇಶ ಪಡೆಯಬೇಕಾದರೆ ಸರದಿ ಸಾಲಿನಲ್ಲಿ ನಿಲ್ಲುವ ಸಮಯ ಸನ್ನಿತವಾಗಿದೆ ಎಂದರು.
ಇನ್ಫೋಸಿಸ್ ಫೌಂಡೇಶನ್ ಅನುಷ್ಠಾನ ಗೊಳಿಸುತ್ತಿರುವ ಜಮಖಂಡಿ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಸಂಪೂರ್ಣ ಗಣಕಯಂತ್ರ ತಾಲ್ಲೂಕನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ 400 ಕಂಪ್ಯೂಟರ್ ಗಳು ಹಾಗೂ 100 ಶಾಲೆಗಳ ಗ್ರಂಥಾಲಯಗಳ ಪುಸ್ತಕಗಳ ವಿತರಣೆ ಸಮಾರಂಭದಲ್ಲಿ , ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಪಾಲ್ಗೊಂಡಿದ್ದೆವು 1/2. pic.twitter.com/xwBzcLfmuG
— Deputy Chief Minister (@GovindKarjol) January 23, 2021
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ ಜಮಖಂಡಿಯ ನೆಲ, ಜಲದ ಮಹಿಮೆ ಬಹಳ ಹಿಂದಿನಿಂದ ಗಮನಿಸಿದಾಗ ಬಿ.ಡಿ.ಜತ್ತಿಯಂತಹ ಮಹಾನ್ ವ್ಯಕ್ತಿಯನ್ನು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಯನ್ನಾಗಿ ನೋಡಿದ್ದೇವೆ. ಇಂದು ಈ ನೆಲ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿಯಂತಹ ಅಗ್ರಗಣ್ಯರ ತಾಣವಾಗಿದೆ. ಇನ್ಪೋಸಿಸ್ ಸಂಸ್ಥೆ ಪ್ರಾರಂಭಿಸಿ ದೇಶ ವಿದೇಶಗಳಲ್ಲಿ ಹೆಸರು ಮಾಡಿ ಜಮಖಂಡಿಯನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸುವ ಕಾರ್ಯ ಮಾಡಿದನ್ನು ಗಮನಿಸಿದರೆ ಇವರ ಕಾರ್ಯ 12ನೇ ಶತಮಾನದ ಶರಣರ ಬದುಕನ್ನು ನೆನಪಿಸುತ್ತಿದೆ ಎಂದರು.
ಸರಕಾರಿ ಶಾಲೆಗಳು ಉತ್ತಮಗೊಳ್ಳಬೇಕಾದರೆ ಶಾಸಕರು, ಸದಸ್ಯರು, ಐಪಿಎಸ್ ಅಧಿಕಾರಿಗಳು ಇನ್ನುಳಿದ ಅಧಿಕಾರಿಗಳ ಮಕ್ಕಳು ಸರಕಾರಿ ಶಾಲೆಗಳಿಗೆ ಬಂದಲ್ಲಿ ಶಿಕ್ಷಕರು ಕೂಡಾ ಜಾಗೃತರಾಗಿ ಎಚ್ಚರಿಕೆಯಿಂದ ಒಳ್ಳೆಯ ಶಿಕ್ಷಣ ನೀಡಲು ಮುಂದಾಗುತ್ತಾರೆ. ರಾಜ್ಯದ ಪ್ರತಿಯೊಂದು ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂಬ ಉದ್ದೇಶದ ಕಾರ್ಯವನ್ನು ಜಾರಿಗೆ ತಂದ ಗೋವಿಂದಗೌಡರನ್ನು ನಾವು ಇಂದು ಸ್ಮರಿಸಬೇಕಾಗಿದೆ ಎಂದರು.
ಇನ್ಪೋಸಿಸ್ ಫೌಂಡೇಶನ್ ನ ಸಮಾಜ ಸೇವೆ ಶ್ಲಾಘನೀಯವಾದುದು. ಸಂಸ್ಥೆಯ ಮುಖ್ಯಸ್ಥರಿಗೆ ಸರ್ಕಾರದ ಪರವಾಗಿ ಅವರು ಅಭಿನಂದಿಸಿದೆ.
— Deputy Chief Minister (@GovindKarjol) January 23, 2021
ಶ್ರೀ ಸ್ವಾಮಿ ಜಪಾನಂದಜಿ ಮಹಾರಾಜ್ ಅವರು ಸಾನಿಧ್ಯವಹಿಸಿದ್ದರು.
ಶಾಸಕರಾದ ಶ್ರೀ ಆನಂದ ನ್ಯಾಮಗೌಡ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. 2/2 pic.twitter.com/Mc7wcRSHzL
ಸಾನಿಧ್ಯ ವಹಿಸಿದ್ದ ಜಪಾನಂದ ಸ್ವಾಮಿಜಿಯವರು ಮಾತನಾಡಿ ಸುಧಾ ಮೂರ್ತಿಗಳು ಕೇವಲ ಜಮಖಂಡಿಗೆ ಅವರ ಕಾರ್ಯ ಸೀಮಿತವಾಗಿಲ್ಲ. ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸೀಮಿತವಾಗಿರದೇ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡುಗಳಲ್ಲಿ ಪ್ರವಾಹ ಸಂದರ್ಭದಲ್ಲಿಯೂ ಕೂಡಾ ನೆರವಿನ ಹಸ್ತ ನೀಡಿದ್ದಾರೆ. ಅನೇಕ ಕಡುಬಡವರಿಗೆ, ರೋಗಿಗಳಿಗೆ, ಅಶಕ್ತರಿಗೆ, ಅಂಗವಿಕಲರಿಗೆ ದಾರಿದೀಪವಾಗಿದ್ದಾರೆ ಎಂದು ತಿಳಿಸಿದರು. ಧಾರವಾಡ ವಿಭಾಗದ ಶಿಕ್ಷಣ ಇಲಾಖೆಯ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿದರು. ಇನ್ಪೋಸಿಸ್‍ನ ಸಂಚಾಲಕ ಎನ್.ಆರ್.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಉತ್ತಮ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ನಗದು ಪ್ರೋತ್ಸಾಹಧನದ ಚೆಕ್‍ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷರು ಆಗಿರುವ ತೇರದಾಳ ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಇನ್ಪೋಸಿಸ್‍ನ ರಾಘವೇಂದ್ರ ಕುಲಕರ್ಣಿ, ಜಿ.ಪಂ ಸಿಇಓ ಟಿ.ಭೂಬಾಲನ್, ಉಪವಿಭಾಗಾಧಿಕಾರಿ ಸಿದ್ದು ಹುಳ್ಳೊಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.