ಬೆಂಗಳೂರು:
ರಾಜ್ಯದ ಎನ್.ಸಿ.ಬಿ. ತಂಡ ಭಾರಿ ಕಾರ್ಯಾಚರಣೆ ನಡೆಸಿದೆ. ಇದರಿಂದ ಎರಡು ಪ್ರತ್ಯೇಕ ಮಾದಕ ವಸ್ತು ಪ್ರಕರಣ ಪತ್ತೆಯಾಗಿವೆ.
ಲಕ್ಷಾಂತರ ರೂ.ಮೌಲ್ಯದ ೩ ಕಜಿ ಸಿಡೊಫಿಡ್ರೈನ್ ಡ್ರಗ್ ಜಪ್ತಿ ಮಾಡಲಾಗಿದೆ. ಬೆಂಗಳೂರು ಮೂಲದ ವ್ಯಕ್ತಿಯಿಂದ ಮಾದಕವಸ್ತು ಸರಬರಾಜು ಆಗುತ್ತಿತ್ತು. ಇದು ಹೈದ್ರಾಬಾದ್ ಪಬ್ ಹಾಗೂ ಪಾರ್ಟಿಗಳಲ್ಲಿ ಮಾರಾಟವಾಗುತ್ತಿತ್ತು. ಇಲ್ಲಿಂದಲೇ ಆಸ್ಟ್ರೇಲಿಯಾಕ್ಕೆ ಕಳ್ಳಸಾಗಣೆಯಾಗುತ್ತಿತ್ತು.. ಪೊಲೀಸರಿಂದ ತಪ್ಪಿಸಿಕೊಳ್ಳಲು ಲೆಹೆಂಗಾದದಲ್ಲಿ ಹೈ ಎಂಡ್ ಡ್ರಗ್ ಸಾಗಾಟ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಡ್ರಗ್ ಮರೆಮಾಚಲು ಲೆಹೆಂಗಾದ ಫಾಲ್ಸ್ ಲೈನ್ ಭಾಗದಲ್ಲಿ ಸ್ಟಿಚ್ ಮಾಡಿ ಒಳಗಡೆ ಡ್ರಗ್ ಇಡಲಾಗಿತ್ತು. ನಕಲಿ ವಿಳಾಸದ ದಾಖಲಾತಿ ನೀಡಿ,ಡ್ರಗ್ ಸಾಗಾಟವಾಗುತ್ತಿತ್ತು. ಈ ಕೇಸ್ ಸಂಬಂಧ ಓರ್ವ ಆರೋಪಿ ಬಂಧನವಾಗಿದೆ. ಈ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.
ದೇವನಹಳ್ಳಿ ಟೋಲ್ ಬಳಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಆಂಧ್ರ ಪ್ರದೇಶ ನೋಂದಣಿ ಸಂಖ್ಯೆಯ ಶಿಪ್ಟ್ ಕಾರಿನಲ್ಲಿ ಮಾದಕ ವಸ್ತು ಸಾಗಣೆಯಾಗುತ್ತಿತ್ತು. ಈ ಸಂಬಂಧ ನಾಲ್ವರು ಆರೋಪಿಗಳ ಬಂಧನವಾಗಿದೆ. ಪ್ರಮುಖ ಆರೋಪಿ ವಿಶಾಖಪಟ್ಟಣ ಮೂಲದವನು. ಉಳಿದ ಮೂವರು ಆಂಧ್ರ ಮತ್ತು ಬಿಹಾರ ಮೂಲದವರು.
ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಎಂಡಿಎಂ ಪಿಲ್ಸ್,ಮಿಥಾಫಿಟಮೈನ್ & ಮಿಥಾಕೋಲೋನ್ ಜಪ್ತಿ ಮಾಡಲಾಗಿದೆ. ಬಂಧಿತರು ನೀಡಿದ ಸುಳಿವಿನ ಜಾಡು ಹಿಡಿದ ಅಧಿಕಾರಿಗಳು ವಿಶಾಖಪಟ್ಟಣ ಮೂಲದ ಆರೋಪಿ ಮನೆ ಶೋಧಿಸಿದಾಗ ಗಾಂಜಾ ಪತ್ತೆಯಾಗಿದೆ.ಈತ ಬೆಂಗಳೂರು ಮೂಲದ ಡ್ರಗ್ ಪೆಡ್ಲರ್ ಮೂಲಕ ವಿವಿಧ ಬಗೆಯ ಮಾದಕ ವಸ್ತು ತರಿಸಿಕೊಳ್ಳುತ್ತಿದ್ದ. ಿದನ್ನು ಹೈದ್ರಾಬಾದ್ ನಗರದಲ್ಲಿ ಜರುಗುವ ಪಾರ್ಟಿಗಳು, ಪಬ್ ಗಳು, ಇನ್ನಿತರ ಇವೆಂಟ್ ಸಂದರ್ಭಗಳಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
NCB Bangalore team on 23.10.2021 seized commercial quantity of MDMA pills, Methamphetamine and Methaqualone and apprehended 5 persons.
— NCB Bangalore Zonal Unit (@NCBBangalore) October 23, 2021
NCB Hyderabad team seized 3 kg Pseudoephedrine from a parcel booked to Australia and apprehended 1 person. pic.twitter.com/edrv7c2Ndf
— NCB Bangalore Zonal Unit (@NCBBangalore) October 23, 2021
ಈ ಎರಡು ಪ್ರಕರಣಗಳ ಸಂಬಂಧ ಮೊಕದ್ದಮೆ ದಾಖಲಾಗಿದೆ. ಬೆಂಗಳೂರು ವಲಯದ ಎನ್.ಸಿ.ಬಿ. ಅಧಿಕಾರಿಗಳು ಪ್ರಕರಣಗಳ ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.
Also Read: NCB busts drug syndicates in Hyderabad and Bengaluru