Home ಕರ್ನಾಟಕ ಕೋಲಾರ, ಬೀದರ್ ಡ್ರಗ್ಸ್ ತಯಾರಿಕಾ ಅಡ್ಡೆಗಳ ಮೇಲೆ ಎನ್​ಸಿಬಿ ದಾಳಿ

ಕೋಲಾರ, ಬೀದರ್ ಡ್ರಗ್ಸ್ ತಯಾರಿಕಾ ಅಡ್ಡೆಗಳ ಮೇಲೆ ಎನ್​ಸಿಬಿ ದಾಳಿ

68
0

62 ಲಕ್ಷ ನಗದು, 91 ಕೆ.ಜಿ ಆಲ್ಪಾಜೋಲಮ್ ವಶಕ್ಕೆ

ಬೆಂಗಳೂರು:

ಎನ್​ಸಿಬಿ ಅಧಿಕಾರಿಗಳು ಕೋಲಾರ ಇಂಡಸ್ಟ್ರಿಯಲ್ ಏರಿಯಾ ಹಾಗೂ ಬೀದರ್​ನ ‘ಇಂದು ಡ್ರಗ್ ಪ್ರೈವೇಟ್ ಲಿ.’ ಮೇಲೆ ದಾಳಿ ನಡೆಸಿ, ಎನ್​ಸಿಬಿ ತಂಡ ಸುಮಾರು 62 ಲಕ್ಷ ನಗದು ಮತ್ತು 91 ಕೆ.ಜಿ ಆಲ್ಪಾಜೋಲಮ್ ವಶಕ್ಕೆ ಪಡೆದಿದೆ.

ಹೈದರಾಬಾದ್​ನ ಎನ್.ವಿ ರೆಡ್ಡಿ ಎಂಬಾತನಿಗೆ ಸೇರಿದ್ದ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆ. ಆಲ್ಪಾಜೋಲಮ್ ಪೌಡರ್​ ತಯಾರಿಸಿ ಕೋಲಾರ, ಬೀದರ್, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು.

NCB seizes 91.5 kg of Alprazolam in Kolar

ಎನ್​ಸಿಬಿ ವಲಯಾಧಿಕಾರಿ ಅಮಿತ್ ಗವಾಟೆ ನೇತೃತ್ವದಲ್ಲಿ ದಾಳಿ ನಡೆದಿದೆ. ಆಲ್ಪಾಜೋಲಮ್ ನಿಷೇಧಿತ ಮಾದಕ ವಸ್ತು. ಆದರೆ ಬೀದರ್​ನ ಇಂದು ಡ್ರಗ್ಸ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಯಲ್ಲಿ ಡ್ರಗ್ ಉತ್ಪಾದನೆಯಾಗುತ್ತಿತ್ತು.

ಎಸ್.ಭಾಸ್ಕರ್ ಹಾಗೂ ಎನ್.ವಿ.ರೆಡ್ಡಿ ಇಂದು ಡ್ರಗ್ಸ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಯಲ್ಲಿ ಆಲ್ಪಾಜೋಲಮ್ ಡ್ರಗ್ ಮ್ಯಾನುಫ್ಯಾಕ್ಟರ್ ಮಾಡುತ್ತಿದ್ದರು. ಈ ಪ್ರಕರಣ ಸಂಬಂಧ ವೈ.ವಿ ರೆಡ್ಡಿ. ಎಸ್.ಮೆನನ್, ಎನ್.ವಿ.ರೆಡ್ಡಿ, ಅಮೃತ್ ಹಾಗೂ ಭಾಸ್ಕರ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here