Home ನಗರ ಬಿಎಂಟಿಸಿ ದರ ಏರಿಕೆ ಸದ್ಯಕ್ಕೆ ಇಲ್ಲ:ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟನೆ

ಬಿಎಂಟಿಸಿ ದರ ಏರಿಕೆ ಸದ್ಯಕ್ಕೆ ಇಲ್ಲ:ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟನೆ

52
0
ಪ್ರಾತಿನಿಧ್ಯ ಚಿತ್ರ

ಬೆಂಗಳೂರು:

ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಸಾರಿಗೆ ಇಲಾಖೆ ನಷ್ಟ ಭರಿಸಲು ಬಿಎಂಟಿಸಿ ಬಸ್ ಟಿಕೇಟ್ ದರ ಏರಿಸಲಿದೆ ಎಂಬಪ್ರಯಾಣಿಕರ ಆತಂಕಕ್ಕೆ ಉಪಮುಖ್ಯಮಂತ್ರಿಗಳೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತೆರೆ ಎಳೆದಿದ್ದು,ಬಿಎಂಟಿಸಿ ದರ ಹೆಚ್ಚಳವಿಲ್ಲವೆಂಬುದನ್ನು ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧ ದರ ಏರಿಗೆ ಕುರಿತು ಮಂಗಳವಾರ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಲಕ್ಷ್ಮಣ್ ಸವದಿ, ಬಿಎಂಟಿಸಿ ದರ ಹೆಚ್ಚಾಗಲಿದೆ ಎಂಬ ಸುದ್ದಿ ಹರಡುತ್ತಿದೆ.ಇಲಾಖೆಯಲ್ಲಿ ಬಿಎಂಟಿಸಿ, ಕೆ ಎಸ್ ಆರ್ ಟಿಸಿ ಸೇರಿದಂತೆ ಒಟ್ಟು ನಾಲ್ಕು ನಿಗಮಗಳಿವೆ.ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಿಗೆ ಮಾಡುವುದಿಲ್ಲ.ಈಗಾಗಲೇ ಬಡವರು‌ ಮೊದಲೇ ಬಿಎಂಟಿಸಿಯಲ್ಲಿ ಕಷ್ಟದಿಂದ ಸಂಚರಿಸುತ್ತಿದ್ದಾರೆ‌.ಇಂತಹ ಸಂದರ್ಭದಲ್ಲಿ ಅವರಿಗೆ ಮತ್ತೆ ಕಷ್ಟ ಕೊಡಲು ಹೋಗುವುದಿಲ್ಲ.ಅಧಿಕಾರಿಗಳು ಪ್ರಸ್ತಾವನೆ ಕೊಟ್ಟಿದ್ದಾರೆ.

ಮುಂದೆ ನೋಡೋಣ ಎಂದು ಮಾರ್ಮಿಕವಾಗಿ ಹೇಳಿದರು.

ಜೂನ್14 ರ ನಂತರ ಲಾಕ್ಡೌನ್ ಸಡಿಲ ಮಾಡಿದರೆ ಹಂತಹಂತವಾಗಿ ಸಾರಿಗೆ ಪ್ರಾರಂಭ ಮಾಡುತ್ತೇವೆ.ಪ್ರಯಾಣಿಕರ ಅಂತರ ಕಾಯ್ದುಕೊಂಡು, ಅವರಿಗೆ ಸ್ಯಾನಿಟೈಸರ್, ಮಾಸ್ಕ್ ಎಲ್ಲವನ್ನು ನೀಡುತ್ತೇವೆ.ಕೋವಿಡ್ ಎರಡೂ ಡೋಸ್ ಆಗುವವರೆಗೂ ನಮ್ಮ ನೌಕರರಿಗೆ ಒತ್ತಡ ಹೇರುವುದಿಲ್ಲ.ಎರಡನೇ ಡೋಸ್ ತೆಗೆದುಕೊಂಡವರಿಗೆ ಅವರಿಗೆ ರಕ್ಷಣೆ ಕೊಟ್ಟು ಪ್ರಾರಂಭ ಮಾಡುತ್ತೇವೆ ಎಂದು ಸವದಿ ತಿಳಿಸಿದರು.

LEAVE A REPLY

Please enter your comment!
Please enter your name here