Home ಬೆಂಗಳೂರು ನಗರ Isha Foundation: ಕರ್ನಾಟಕ ಸರ್ಕಾರದಿಂದ ಯಾವುದೇ ಹಣ, ಜಮೀನು ಪಡೆದಿಲ್ಲ: ಇಶಾ ಫೌಂಡೇಶನ್ ಸ್ಪಷ್ಟನೆ

Isha Foundation: ಕರ್ನಾಟಕ ಸರ್ಕಾರದಿಂದ ಯಾವುದೇ ಹಣ, ಜಮೀನು ಪಡೆದಿಲ್ಲ: ಇಶಾ ಫೌಂಡೇಶನ್ ಸ್ಪಷ್ಟನೆ

26
0
Sadhaguru Isha Foundation
bengaluru

ಬೆಂಗಳೂರು:

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತನ್ನ ಯೋಜನೆಗಾಗಿ ಕರ್ನಾಟಕ ಸರ್ಕಾರದಿಂದ ಯಾವುದೇ ಹಣ ಅಥವಾ ಭೂಮಿಯನ್ನು ಪಡೆದಿಲ್ಲ ಎಂದು ಇಶಾ ಫೌಂಡೇಶನ್ ಸೋಮವಾರ ಸ್ಪಷ್ಟಪಡಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅರಣ್ಯ ಇಲಾಖೆಗೆ ಮಣ್ಣಿನ ಸಂರಕ್ಷಣೆಗೆ ಒತ್ತು ನೀಡಿ ರಾಜ್ಯ ಪರಿಸರ ಚಟುವಟಿಕೆಗಳಿಗೆ 100 ಕೋಟಿ ರೂ. ಮೀಸಲಿಟ್ಟಿರುವುದಾಗಿ ಘೋಷಿಸಿದ್ದರು. ಇದನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿದ್ದು, ಇಶಾ ಫೌಂಡೇಶನ್ ಅಥವಾ ಸದ್ಗುರು ಯಾವುದೇ ಹಣ ಪಡೆದಿಲ್ಲ ಎಂದು ಹೇಳಿದೆ.

“ಈಶಾ ಫೌಂಡೇಶನ್ ಅಥವಾ ಸದ್ಗುರುಗಳು ಈಗಿನ ಸರ್ಕಾರದಿಂದ ಅಥವಾ ಕರ್ನಾಟಕದ ಹಿಂದಿನ ಸರ್ಕಾರಗಳಿಂದ ಯಾವುದೇ ಹಣವನ್ನು ಪಡೆದಿಲ್ಲ. ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ಅವರು ಸ್ಥಾಪಿಸಿದ ಇಶಾ ಫೌಂಡೇಶನ್ ರಾಜ್ಯ ಸರ್ಕಾರದೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಹಣಕಾಸಿನ ವಹಿವಾಟುಗಳಲ್ಲಿ ಭಾಗಿಯಾಗಿಲ್ಲ ಎಂದು ಇಶಾ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.

“ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿರುವ ಎಲ್ಲಾ ಜಮೀನನ್ನು ಮೂಲ ಮಾಲೀಕರಿಂದ ಮಾರುಕಟ್ಟೆ ಮೌಲ್ಯ ನೀಡಿ ಖರೀದಿಸಲಾಗಿದೆ” ಎಂದು ಇಶಾ ಫೌಂಡೇಶನ್ ಹೇಳಿದೆ.

LEAVE A REPLY

Please enter your comment!
Please enter your name here