Home ಬೆಂಗಳೂರು ನಗರ ಮುಷ್ಕರದಲ್ಲಿ ರಾಜಕೀಯ ಬೇಡ : ಡಿಸಿಎಂ ಸವದಿ

ಮುಷ್ಕರದಲ್ಲಿ ರಾಜಕೀಯ ಬೇಡ : ಡಿಸಿಎಂ ಸವದಿ

24
0

ಬೆಂಗಳೂರು:

ಮುಷ್ಕರನಿರತ ಸಾರಿಗೆ ನೌಕರರಿಗೆ ತಿಳಿವಳಿಕೆ ನೀಡಿ ಅವರನ್ನು ತಕ್ಷಣ ಕರ್ತವ್ಯಕ್ಕೆ ಮರಳುವಂತೆಮನವೊಲಿಸುವುದನ್ನು ಬಿಟ್ಟು ಇಂತಹ ಸಂಕಷ್ಟದ ಸಂದರ್ಭದಲ್ಲಿಯೂ ಕಾಂಗ್ರೆಸ್‍ಮುಖಂಡರು ನಮ್ಮ ಸರ್ಕಾರದ ಮೇಲೆಯೇ ಗೂಬೆ ಕೂರಿಸುತ್ತಾ ರಾಜಕೀಯಲಾಭಗಳಿಸಿಕೊಳ್ಳುವ ಹುನ್ನಾರ ನಡೆಸುತ್ತಿರುವುದು ದುರ್ದೈವದ ಬೆಳವಣಿಗೆ ಎಂದುಉಪಮುಖ್ಯಂತ್ರಿಗಳು ಮತ್ತು ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿಯವರುವಿಷಾದಿಸಿದ್ದಾರೆ.

6ನೇವೇತನದ ಆಯೋಗದ ಶಿಫಾರಸ್ಸುಗಳನ್ನು ಸಾರಿಗೆ ನೌಕರರಿಗೆ ಅನ್ವಯಿಸಬೇಕು ಎಂದು ಈಗಮೊಸಳೆ ಕಣ್ಣೀರು ಸುರಿಸುವ ವಿರೋಧ ಪಕ್ಷಗಳು, ಹಿಂದೆ ತಾವೇ ಅಧಿಕಾರದಲ್ಲಿದ್ದಾಗವೇತನ ಆಯೋಗದ ಶಿಫಾರಸ್ಸುಗಳಂತೆ ಎಂದಾದರೂ ನಮ್ಮ ಸಾರಿಗೆ ನೌಕರರಿಗೆವೇತನಗಳನ್ನು ನೀಡಿದ ಇತಿಹಾಸವಿದೆಯೇ? ಹಿಂದೆ ಹಲವು ದಶಕಗಳ ಕಾಲ ಆಡಳಿತ ನಡೆಸಿದಇದೇ ವಿರೋಧ ಪಕ್ಷಗಳು ಎಂದಾದರೂ ಸಾರಿಗೆ ನಿಗಮಗಳ ನೌಕರರಿಗೆ ವೇತನಆಯೋಗದ ಶಿಫಾರಸ್ಸುಗಳ ಪ್ರಕಾರ ಸಂಬಳ ನೀಡಿದ ದಾಖಲೆ ಇದೆಯೇ ಎಂದು ಶ್ರೀಸವದಿಯವರು ಪ್ರಶ್ನಿಸಿದ್ದಾರೆ.

ಕೋವಿಡ್-ಲಾಕ್‍ಡೌನ್‍ಸಂಕಷ್ಟದಿಂದಾಗಿ ಸಾರಿಗೆ ನೌಕರರಿಗೆ ಸಂಬಳ ನೀಡುವುದಕ್ಕೂ ಕಷ್ಟವಾದಾಗ ನಮ್ಮ ಸನ್ಮಾನ್ಯಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ಸುಮಾರು 2 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಮೊತ್ತವನ್ನು ಸರ್ಕಾರದಿಂದ ನಾಲ್ಕೂ ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಿದ್ದು ಒಂದು ದಾಖಲೆಯಾಗಿದೆ.ಕೇವಲ ಒಂದೇ ವರ್ಷದಲ್ಲಿ ಇಷ್ಟೊಂದು ಬೃಹತ್ ಮೊತ್ತವನ್ನು ಹಿಂದೆ ಯಾವುದೇ ಸರ್ಕಾರವೂ ಸಾರಿಗೆ ನಿಗಮಗಳಿಗೆ ನೀಡಿದ ನಿದರ್ಶನಗಳಿಲ್ಲ. ಈ ಬಗ್ಗೆ ವಿರೋಧ ಪಕ್ಷದವರೇ ಅತ್ಮಾವಲೋಕನ ಮಾಡಿಕೊಂಡು ಮಾತನಾಡಿದರೆ ಒಳ್ಳೆಯದು. ಸಾರಿಗೆಯಂತಹ ಸಾರ್ವಜನಿಕಹಿತದೃಷ್ಟಿಯ ವಿಷಯಗಳಲ್ಲಿ ಯಾರೂ ರಾಜಕೀಯ ಬೆರೆಸಬಾರದು ಎಂದು ಶ್ರೀಸವದಿಯವರು ಅಭಿಪ್ರಾಯಪಟ್ಟಿದ್ದಾರೆ.

ನಮ್ಮಸರ್ಕಾರ ಸಾರಿಗೆ ನೌಕರರ ಬಹುತೇಕ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದರೂ ಕೆಲವುಹೊರಗಿನ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ನಮ್ಮ ಸಾರಿಗೆ ನೌಕರ ಬಾಂಧವರುಮುಷ್ಕರದ ತಪ್ಪು ಹೆಜ್ಜೆ ಇಟ್ಟಿದ್ದಾರೆ. ಈ ಮುಷ್ಕರವನ್ನು ತಪ್ಪಿಸಲು ಸಾರಿಗೆ ನೌಕರಮುಖಂಡರ ಜೊತೆ ಹಲವು ಸುತ್ತಿನ ಮಾತುಕತೆಗಳನ್ನು ನಾವು ನಡೆಸಿದ್ದರೂ ಸಹ ಈ “ಕೈ”ವಾಡದಿಂದಮುಷ್ಕರ ನಡೆದು ಅಮಾಯಕ ಜನರು ತೀವ್ರ ತೊಂದರೆ ಎದುರಿಸುವಂತಾಯಿತು. ಇಂತಹ ದುರಿತದ ಕಾಲದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸರಿದಾರಿಗೆ ತರಲು ನಮ್ಮ ಸರ್ಕಾರನಡೆಸುತ್ತಿರುವ ಪ್ರಯತ್ನಗಳಿಗೆ ವಿರೋಧ ಪಕ್ಷಗಳು ಕೈಜೋಡಿಸುವುದನ್ನು ಬಿಟ್ಟುವಿನಾಕಾರಣ ರಾಜಕೀಯ ಪ್ರಚೋದನೆ ನೀಡುವ ಹೇಳಿಕೆಯಲ್ಲೇ ಕಾಲಕಳೆಯುತ್ತಿರುವುದುಬೇಸರದ ಸಂಗತಿ. ಈ ಎಲ್ಲಾ ವಿದ್ಯಮಾನಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರುವಸಾರ್ವಜನಿಕರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬುದು ನನ್ನ ನಂಬಿಕೆಯಾಗಿದೆ ಎಂದು ಶ್ರೀ ಸವದಿಯವರು ಟೀಕಿಸಿದ್ದಾರೆ.

ಬೆಂಕಿ ಬಿದ್ದು ಜನ ಕಂಗಾಲಾಗಿರುವಾಗ ಬೆಂಕಿಯನ್ನು ಶಮನ ಮಾಡಬೇಕೇ ಹೊರತು ಇದೇ ಬೆಂಕಿಯಲ್ಲಿಒಲೆ ಹಚ್ಚಿ ಅಡುಗೆ ಮಾಡುವುದಲ್ಲ. ಆದರೆ ಕೆಲವು ಕಾಂಗ್ರೆಸ್ ಮುಖಂಡರ ವರ್ತನೆಯನ್ನು ನೋಡಿದರೆ ಅವರು ಕೋಡಿಹಳ್ಳಿಯಂತವರ ಜೊತೆ ಶಾಮೀಲಾಗಿ ಅಡುಗೆತಯಾರಿಸಲು ಹವಣಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಆದರೆ ಇಂತಹ ರಾಜಕೀಯಪ್ರೇರಿತ ದಾಳಗಳನ್ನು ನಮ್ಮ ಸಾರಿಗೆ ಸಿಬ್ಬಂದಿಗಳು ಅರ್ಥಮಾಡಿಕೊಳ್ಳಬೇಕು.ಹಿಂದೆ ಮಹಾರಾಷ್ಟ್ರದಲ್ಲಿ ಜವಳಿ ಕಾರ್ಮಿಕರ ಚಳವಳಿಯಲ್ಲಿ ಹೊರಗಿನ ಶಕ್ತಿಗಳು ಪಾಲ್ಗೊಂಡು ಕಾರ್ಮಿಕರ ಹಿತಾಸಕ್ತಿ ಮಣ್ಣುಪಾಲಾಗಿ ಇಡೀ ಜವಳಿ ಉದ್ಯಮಗಳೇ ವಿನಾಶದ ಅಂಚಿಗೆ ತಲುಪಿದಂತಹ ಕಹಿ ಘಟನೆಯಿಂದ ನಮ್ಮ ಸಾರಿಗೆ ನೌಕರರು ಪಾಠ ಕಲಿತುಕೊಳ್ಳದಿದ್ದರೆ ಅವರಿಗೂ ಅಪಾಯ ಮತ್ತು ಅವರನ್ನು ಸಲಹುತ್ತಿರುವ ನಿಗಮಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನುಅರಿತುಕೊಳ್ಳಬೇಕು ಎಂದು ಶ್ರೀ ಸವದಿಯವರು ಕಿವಿಮಾತು ಹೇಳಿದರು.

ಈ ಮುಷ್ಕರದಿಂದಾಗಿ ಸಾರ್ವಜನಿಕರು ಸಾರಿಗೆ ನೌಕರರ ಹಠಮಾರಿ ಧೋರಣೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಅನೇಕ ಚಾಲಕರು ಮತ್ತು ನಿರ್ವಾಹಕರು ತಾವು ಕೆಲಸಕ್ಕೆ ಮರಳಲು ಸಿದ್ಧರಿದ್ದರೂ ಕೆಲವು ಕಾರ್ಮಿಕ ಮುಖಂಡರು ತಮಗೆ ಬೆದರಿಕೆವೊಡ್ಡಿ ಅಡೆತಡೆಮಾಡುತ್ತಿದ್ದಾರೆ ಎಂದು ನಮ್ಮಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಂತಹ ಸಂದಿಗ್ಧಪರಿಸ್ಥಿತಿಯಲ್ಲಿ “ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಖುಷಿಪಡುವ” ಪಟ್ಟಭದ್ರರನ್ನುಬಂಧಿಸುವುದು ಅನಿವಾರ್ಯವಾಗಿತ್ತು. ಕಾನೂನು, ಶಿಸ್ತುಪಾಲನೆಗಾಗಿ ಮತ್ತು ಶಾಂತಿಸುವ್ಯವಸ್ಥೆಗಾಗಿ ಪೊಲೀಸರು ಕೈಗೊಂಡ ಈ ಕ್ರಮ ಅತ್ಯಂತ ಸಮರ್ಪಕವಾಗಿದೆ. ಕಾನೂನಿನಎದುರು ಎಲ್ಲರೂ ಸಮಾನರು. ಕಳೆದ ಮೂರು ದಿನಗಳಿಂದ ಮುಷ್ಕರನಡೆಯುತ್ತಿದ್ದರೂ ಅತ್ಯಂತ ಸಹನೆಯಿಂದ ಸರ್ಕಾರ ಹೆಜ್ಜೆ ಇಟ್ಟಿದ್ದರೂ ಸಹ ಮುಷ್ಕರನಿರತರು ಇದನ್ನು ಅರ್ಥಮಾಡಿಕೊಳ್ಳದೆ ಒಣಪ್ರತಿಷ್ಠೆಗೆ ಇಳಿದಿದ್ದರಿಂದ ಈಗ ಪರಿತಪಿಸುವಂತಾಗಿದೆಎಂದು ಶ್ರೀ ಸವದಿಯವರು ತಿಳಿಸಿದ್ದಾರೆ.

ಹಲವುಪ್ರತಿರೋಧಗಳ ನಡುವೆಯೂ ನಮ್ಮ ನಿರೀಕ್ಷೆಯಂತೆ ಇಂದು 1,400ಕ್ಕೂ ಹೆಚ್ಚು(ಮಧ್ಯಾಹ್ನದ ಹೊತ್ತಿಗೆ) ಬಸ್ಸುಗಳು ಸಂಚಾರಕ್ಕೆ ಇಳಿದಿದ್ದವು. ಸಾರ್ವಜನಿಕರಹಿತದೃಷ್ಟಿಯಿಂದ ಮುಂದೆಬಂದು ಹೀಗೆ ಸೇವೆ ಸಲ್ಲಿಸಿದ ಸಾರಿಗೆ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆಅವರು ಅಭಿನಂದಿಸಿದ್ದಾರೆ. ಈ ಹಬ್ಬದ ಸಂದರ್ಭದಲ್ಲಿ ನಮ್ಮ ಮನವಿಗೆ ಸ್ಪಂದಿಸಿ ಹೆಚ್ಚಿನಬಸ್ಸು ಮತ್ತಿತರ ವಾಹನಗಳನ್ನು ಸೇವೆಗೆ ಒದಗಿಸಿ ಸಂಚಾರ ವ್ಯವಸ್ಥೆಯನ್ನುಸುಗಮಗೊಳಿಸಲು ಸಹಕರಿಸಿದ ಖಾಸಗಿ ವಾಹನ ಮಾಲೀಕರಿಗೂ ಶ್ರೀ ಸವದಿಯವರು ತಮ್ಮಧನ್ಯವಾದಗಳನ್ನು ಅರ್ಪಿಸಿದ್ದಾರೆ.

LEAVE A REPLY

Please enter your comment!
Please enter your name here