Home Uncategorized Overnight Millionaire : ಬಿಕ್ಷೆ ಬೇಡುತ್ತಿದ್ದ ಪುಟ್ಟ ಹುಡುಗ ಒಂದೇ ದಿನದಲ್ಲಿ ಕೋಟ್ಯಾಧಿಪತಿ

Overnight Millionaire : ಬಿಕ್ಷೆ ಬೇಡುತ್ತಿದ್ದ ಪುಟ್ಟ ಹುಡುಗ ಒಂದೇ ದಿನದಲ್ಲಿ ಕೋಟ್ಯಾಧಿಪತಿ

1
0
bengaluru

ಕೋವಿಡ್ 19(Covid-19) ಸಾಂಕ್ರಾಮಿಕ ರೋಗದಿಂದ ತಾಯಿಯನ್ನು ಕಳೆದುಕೊಂಡಿದ್ದ 10 ವರ್ಷದ ಪುಟ್ಟ ಪೋರ. ತನ್ನ ಒಂದು ಹೊತ್ತಿನ ಊಟಕ್ಕಾಗಿ ಭಿಕ್ಷಾಟಣೆಯಲ್ಲಿ ತೊಡಗಿಸಿಕೊಂಡಿದ್ದ. ಆದರೆ ಒಂದೇ ರಾತ್ರಿಯಲ್ಲಿ ಕೋಟಿ ಮೌಲ್ಯದ ಆಸ್ತಿಗೆ ಅಧಿಪತಿಯಾಗಿದ್ದಾನೆ. ಈ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಇತನ ಹೆಸರು ಷಹಜೇಬ್‌. ಇತನ ತಾಯಿ ಇಮ್ರಾನಾ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಪಾಂಡೋಲಿ ಗ್ರಾಮದಲ್ಲಿ ವಾಸಿಸುತ್ತಿದ್ದರು. 2009ರಲ್ಲಿ ತನ್ನ ಗಂಡನ ಮರಣದ ನಂತರ ತನ್ನ ಅತ್ತೆ ಮನೆಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ನಂತರ ತನ್ನ ಮಗ ಷಹಜೇಬ್‌ನೊಂದಿಗೆ ತನ್ನ ತವರು ಮನೆಗೆ ಹೋಗಿದ್ದಳು. ಬಳಿಕ ತನ್ನ ಮಗನೊಂದಿಗೆ ಕಾಲಿಯಾರ್ ನಲ್ಲಿ ವಾಸಿಸುತ್ತಿದ್ದರು.

2019 ರ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ತಾಯಿ ಮೃತ ಪಟ್ಟ ಕಾರಣ ಈ ಪುಟ್ಟ ಅನಾಥನಾಗಿದ್ದಾನೆ. ಆದ್ದರಿಂದ ಹೊಟ್ಟೆ ಹಸಿವಿಗೆ ಕಲಿಯಾರ್ ಬೀದಿಯಲ್ಲಿ ಭಿಕ್ಷಾಟಣೆಯಲ್ಲಿ ತೊಡಗಿಸಿಕೊಂಡಿದ್ದ. ಆದರೆ ಈ ಮಗುವಿನ ಜೀವನದ ಹಾದಿಯೇ ಬದಲಾದ ಘಟನೆ ನಡೆದಿದೆ. ಒಂದು ಹೊತ್ತಿನ ಊಟಕ್ಕಾಗಿ ಪೇಚಾಡುತ್ತಿದ್ದ ಈತನ ಬಾಳಲ್ಲಿ ಈತನ ತಾತ ಬೆಳಕಾಗಿ ಬಂದಿದ್ದಾರೆ. ಹೌದು ಅವನ ಅಜ್ಜ ಸಾಯುವ ಮೊದಲು ತನ್ನ ಅರ್ಧದಷ್ಟು ಆಸ್ತಿಯನ್ನು ಈತನ ಹೆಸರಿಗೆ ಬರೆದಿಟ್ಟಿದ್ದಾರೆ.

ಇದನ್ನು ಓದಿ: ಚಲಿಸುತ್ತಿದ್ದ ಟ್ರಕ್ಕೊಂದರಿಂದ ನೇತಾಡುತ್ತಿದ್ದ ಹಗ್ಗ ಬೈಕ್ ಸವಾರನ ಕುತ್ತಿಗೆಗೆ ಸುತ್ತಿಕೊಂಡು ನೆಲಕ್ಕೆ ಬೀಳಿಸಿದರೂ ಸವಾರ ಅಪಾಯದಿಂದ ಪಾರು!

ಈ ವಿಷಯ ತಿಳಿಯುತ್ತಿದ್ದಂತೆ ಆತನ ಸಂಬಂಧಿಗಳು ಆತನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಜೊತೆಗೆ ಹುಡುಕಿಕೊಟ್ಟವರಿಗೆ ಬಹುಮಾನವನ್ನು ಘೋಷಿಸಿದ್ದಾರೆ. ಕಲಿಯಾರ್ ಬೀದಿಯಲ್ಲಿ ತಿರುಗಾಡುತ್ತಿರುವುದನ್ನು ಮೋಬಿನ್ ಎಂಬ ವ್ಯಕ್ತಿಯು ಗಮನಿಸಿದ್ದು ಅವರ ಸಂಬಂಧಿಕರಿಗೆ ಮಾಹಿತಿ ನೀಡಿ, ಗುರುವಾರ ಸಹರಾನ್‌ಪುರದ ಸಂಬಂಧಿಕರ ಬಳಿ ಬಿಟ್ಟು ಬಂದಿದ್ದಾರೆ. ಇದೀಗಾ ಈ ಘಟನೆ ಸಾಕಷ್ಟು ಸುದ್ದಿಯಾಗಿದೆ.

bengaluru

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:

bengaluru

LEAVE A REPLY

Please enter your comment!
Please enter your name here