Home Uncategorized Parameshwar: ಸಿಲಿಕಾನ್ ಸಿಟಿಯಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ – ಡಾ ಜಿ ಪರಮೇಶ್ವರ್

Parameshwar: ಸಿಲಿಕಾನ್ ಸಿಟಿಯಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ – ಡಾ ಜಿ ಪರಮೇಶ್ವರ್

1
0

ಬೆಂಗಳೂರು;- ಬೆಂಗಳೂರು ನಗರದಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ ನಡೆಸಲಾಗಿದೆ ಎಂದು ಗೃಹಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,ಪಟಾಕಿ ದುರಂತ ರಾಜ್ಯಕ್ಕೊಂದು ಪಾಠ, ಇದರಿಂದ 17 ಮಂದಿ ಈ ವರೆಗೆ ಸಾವಿಗೀಡಾಗಿದ್ದಾರೆ. ಅವರಿಗೆ ದೇವರು ಸದ್ಗತಿ‌ ಒದಗಿಸಲಿ ಎಂದು‌ ಸಂತಾಪ ಸೂಚಿಸಿದರು. ಹೆಚ್ಚುತ್ತಿರುವ ಪಟಾಕಿ ಹಾಗೂ ಅಗ್ನಿ ದುರಂತಗಳಿಗೆ ಕಡಿವಾಣ ಹಾಕಲು ರಾಜ್ಯಾದ್ಯಂತ ಅನ್ವಯಿಸುವಂತೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಿ ಕಾಯಿದೆಗಳಿಗೆ ಮಾರ್ಪಾಡು ಮಾಡಿ ಕಠಿಣ ಕ್ರಮಗಳಿಗಾಗಿ ಯೋಜಿಸಲಾಗುತ್ತಿದೆ ಎಂದರು.

ದೀಪಾವಳಿ ಸಮೀಪಿಸುತ್ತಿರುವುದರಿಂದ ಪಟಾಕಿ ನಿಷೇಧಕ್ಕೆ ಸಾಧಕ ಬಾಧಕ ಕುರಿತು ಯೋಚಿಸಲಾಗುತ್ತಿದೆ.‌ ಮೊದಲ ಬಾರಿಗೆ ಬೆಂಗಳೂರಿನಲ್ಲಿ‌ ಪಟಾಕಿ ನಿಷೇಧ ಪ್ರಾಯೋಗಿಕ ಜಾರಿಗೊಳಿಸಿ ಯಶಸ್ವಿಯಾದರೆ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು. ಈಗಾಗಲೇ ದೆಹಲಿಯಲ್ಲಿ ಪಟಾಕಿ ನಿಷೇಧಿಸಲಾಗಿದೆ. ಸರ್ಕಾರ ಆದೇಶಿಸಿರುವಂತೆ ಯಾವುದೇ ಪಕ್ಷದ ಕಾರ್ಯಕ್ರಮಗಳಿಗೆ ಪಟಾಕಿ ನಿಷೇಧಿಸಲಾಗಿದೆ. ಇನ್ನು ಹಬ್ಬಗಳ ಪಟಾಕಿ – ಸ್ಪೋಟಕ ಅಗ್ನಿ ದುರಂತಗಳಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಇಂತಹ ದುರಂತಗಳು ಮತ್ತೆ ಮರುಕಳಿಸಬಾರದು ಎಂದು ಸೂಚಿಸಿದರು.

The post Parameshwar: ಸಿಲಿಕಾನ್ ಸಿಟಿಯಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ – ಡಾ ಜಿ ಪರಮೇಶ್ವರ್ appeared first on Ain Live News.

LEAVE A REPLY

Please enter your comment!
Please enter your name here