Home ಬೆಂಗಳೂರು ನಗರ Bangalore Airport | ಏರ್ಪೋರ್ಟ್ ನಲ್ಲಿ ಪ್ರಯಾಣಿಕರನ್ನ ಪಿಕಪ್ ಮಾಡಲು ಪ್ರವೇಶ ದರ 07 ನಿಮಿಷಕ್ಕೆ...

Bangalore Airport | ಏರ್ಪೋರ್ಟ್ ನಲ್ಲಿ ಪ್ರಯಾಣಿಕರನ್ನ ಪಿಕಪ್ ಮಾಡಲು ಪ್ರವೇಶ ದರ 07 ನಿಮಿಷಕ್ಕೆ 150 ರೂ. ಪಾವತಿಸಬೇಕು

12
0
passengers pick up at Bangalore airport will cost Rs 150

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಮತ್ತು ಟ್ಯಾಕ್ಸಿಗಳಿಗೆ ಪ್ರವೇಶ ದರ ನಿಗದಿ ಮಾಡಿದೆ. ಏರ್‌ಪೋರ್ಟ್ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಹೌದು. ಪ್ರಯಾಣಿಕರನ್ನ ಪಿಕಪ್ ಮಾಡಲು ಪ್ರವೇಶ ದರ 07 ನಿಮಿಷಕ್ಕೆ 150 ರೂ. ಪಾವತಿಸಬೇಕು.

ಇನ್ನು 07 ನಿಮಿಷಕ್ಕಿಂತ ಹೆಚ್ಚು ಕಾಲ ನಿಂತರೆ 300 ರೂ. ಪಾವತಿ ಮಾಡಬೇಕು. ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಕಳೆದ ಭಾನುವಾರ ಈ ಹೊಸ ನಿಯಮವನ್ನ ಜಾರಿ ಮಾಡಿತ್ತು. ಆಡಳಿತ ಮಂಡಳಿಯ ದರ ನಿಗದಿ ಕ್ರಮಕ್ಕೆ ಯಲ್ಲೋ ಹಾಗೂ ವೈಟ್ ಬೋರ್ಡ್ ಚಾಲಕರು ಕಂಗಾಲಾಗಿದ್ದರು.

ಅಲ್ಲದೇ ದರ ನಿಗದಿ ವಿರೋಧಿಸಿ ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರು ಸೋಮವಾರ ಪ್ರತಿಭಟನೆ ಮಾಡುವ ಮೂಲಕ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಟ್ತಾಕ್ಸಿ ಮತ್ತು ಕ್ಯಾಬ್ ಚಾಲಕರು ನಿನ್ನೆ ಪ್ರತಿಭಟನೆ ಮಾಡಿದ್ದ ಪರಿಣಾಮ ದರ ನಿಗದಿ ಸಂಗ್ರಹಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.

ಇತ್ತ ಸದ್ಯಕ್ಕೆ ಬ್ರೇಕ್ ಹಾಕಿರುವ ಆಡಳಿತ ಮಂಡಳಿಯವರು ಮತ್ತೆ ಶುರು ಮಾಡುತ್ತಾರೆ ಎಂದು ಏರ್‌ಪೋರ್ಟ್ ಟ್ಯಾಕ್ಸಿ ಚಾಲಕರು ಇಂದು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನ ಭೇಟಿ ಮಾಡಲು ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here