Home Uncategorized Pathaan: ಬೇಷರಂ​ ರಂಗ್ ವಿವಾದದ ಮಧ್ಯೆ ಶಾರುಖ್​ ಖಾನ್ ಟ್ವೀಟ್​: ಪಠಾಣ್ ಕೂಡ ದೇಶಭಕ್ತಿ ಸಾರುವ...

Pathaan: ಬೇಷರಂ​ ರಂಗ್ ವಿವಾದದ ಮಧ್ಯೆ ಶಾರುಖ್​ ಖಾನ್ ಟ್ವೀಟ್​: ಪಠಾಣ್ ಕೂಡ ದೇಶಭಕ್ತಿ ಸಾರುವ ಚಿತ್ರ ಎಂದ ಬಾದ್‌ಷಾ

2
0
Advertisement
bengaluru

ನಟ ಶಾರುಖ್​ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathaan) ಚಿತ್ರ ಸದ್ಯ ದೇಶಾದ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಹಿಂದಿ ಚಿತ್ರವಾಗಿದೆ. ಶಾರುಖ್​ ಖಾನ್ ಸತತ 4 ವರ್ಷಗಳ ಬಳಿಕ ಕಮ್​ ಬ್ಯಾಕ್​ ಮಾಡುತ್ತಿರುವ ಒಂದು ಕಾರಣಕ್ಕಾದರೆ, ಇನ್ನೊಂದು ಇತ್ತೀಚೆಗೆ ಬಿಡುಗಡೆಯಾದ ‘ಬೇಷರಂ​ ರಂಗ್​..’ (Besharam Rang Song) ಹಾಡಿಗಾಗಿ. ಈ ಹಾಡು ಕೆಲ ವರ್ಗದ ಜನರನ್ನು ಕೆರಳಿಸಿದೆ ಎಂದೇ ಹೇಳಬಹುದು. ಡಿ. 12ರಂದು ‘ಪಠಾಣ್’​ ಚಿತ್ರತಂಡ ಮೊದಲ ಹಾಡಾದ ‘ಬೇಷರಂ​ ರಂಗ್’​ನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಕೆಲವರು ಶಾರುಖ್​ ಖಾನ್ ಮತ್ತು ದೀಪಿಕಾ ಪಡುಕೋಣೆಯ ಕೆಮಿಸ್ಟ್ರಿ ಇಷ್ಟಪಟ್ಟರೆ, ಮತ್ತೆ ಕೆಲವರು ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಣ್ಣದ ಬಿಕಿನಿಗೆ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವಿಚಾರಕ್ಕೆ ನಿನ್ನೆ(ಡಿ. 16) ಸ್ಯಾಂಡಲ್​ವುಡ್​ ಕ್ವೀನ್​ ನಟಿ ರಮ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದು, ದೀಪಿಕಾ ಪಡುಕೋಣೆ ಪರ ಬ್ಯಾಟಿಂಗ್​ ಮಾಡಿದ್ದರು. ಸದ್ಯ ಇದೆಲ್ಲಾ ವಿವಾದದ ನಡುವೆ ನಟ ಶಾರುಖ್​ ಖಾನ್ ಟ್ವೀಟ್​ ಮಾಡಿದ್ದು, ‘ಪಠಾಣ್​ ಕೂಡ ತುಂಬಾ ದೇಶಭಕ್ತ’ ಎಂದು ಬರೆದುಕೊಂಡಿದ್ದಾರೆ.

ಶನಿವಾರ ಟ್ವಿಟರ್‌ನಲ್ಲಿ ನಡೆದ ‘ಆಸ್ಕ್ ಮಿ ಎನಿಥಿಂಗ್’​ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಮುಂಬರುವ ಚಿತ್ರ ದೇಶಭಕ್ತಿಯಿಂದ ಕೂಡಿದೆ ಎಂದರು. ಚಿತ್ರವು ದೇಶಭಕ್ತಿಯದ್ದಾಗಿದೆಯೇ ಎಂದು ಫ್ಯಾನ್ಸ್​ ಒಬ್ಬರು ಪ್ರಶ್ನಿಸಿದ್ದು, ‘ಪಠಾಣ್ ಕೂಡ ತುಂಬಾ ದೇಶಪ್ರೇಮಿ, ಆದರೆ ಆಕ್ಷನ್ ರೀತಿಯಲ್ಲಿ’ ಎಂದು ಶಾರುಖ್ ಖಾನ್ ಮರು ಉತ್ತರ ನೀಡಿದ್ದಾರೆ.

#Pathaan is also very patriotic..but in an action way https://t.co/DIhZaEb1hN

— Shah Rukh Khan (@iamsrk) December 17, 2022

bengaluru bengaluru

ಶಾರುಖ್ ಖಾನ್​ ಇದಕ್ಕೂ ಮೊದಲು ಅಂದರೆ ಡಿ.15ರಂದು 28ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಚಿತ್ರದ ಹೆಸರು ಎತ್ತದೆ ವಿವಾದದ ಕುರಿತಾಗಿ ತಿರುಗೇಟು ನೀಡಿದ್ದರು. ‘ಜಗತ್ತು ಸಹಜ ಸ್ಥಿತಿಗೆ ಬಂದಿದೆ. ನಾವೆಲ್ಲರೂ ಖುಷಿಯಾಗಿದ್ದೇವೆ. ನಾನು ಹೆಚ್ಚು ಖುಷಿಯಾಗಿದ್ದೇನೆ. ಜಗತ್ತು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು, ನೀವು ಮತ್ತು ಪಾಸಿಟಿವ್​ ಮನಸ್ಥಿತಿ ಇರುವ ಎಲ್ಲ ಜನರು ಜೀವಂತವಾಗಿದ್ದೇವೆ ಅಂತ ಹೇಳಲು ನನಗೆ ಯಾವುದೇ ಅಡೆತಡೆ ಇಲ್ಲ’ ಎಂದು ಶಾರುಖ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ: Pathaan vs Gandhi Godse – Ek Yudh: ಚಿತ್ರಗಳ ಮಧ್ಯೆ ನಡೆಯುತ್ತಾ ಬಾಕ್ಸ್​ ಆಫೀಸ್ ವಾರ್?

2023ರ ಜನವರಿ 25ರಂದು ‘ಪಠಾಣ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಜಾನ್​ ಅಬ್ರಾಹಂ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದು, ಯಶ್​ ರಾಜ್​ ಫಿಲ್ಮ್ಸ್​ ಬ್ಯಾನರ್​ ಮೂಲಕ ನಿರ್ಮಾಣ ಆಗಿದೆ. ವಿರೋಧದ ನಡುವೆಯೂ ಈ ಚಿತ್ರದ ‘ಬೇಷರಂ ರಂಗ್​..’ ಹಾಡು ಧೂಳೆಬ್ಬಿಸುತ್ತಿದೆ. 5 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡು ಸದ್ದು ಮಾಡುತ್ತಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.   


bengaluru

LEAVE A REPLY

Please enter your comment!
Please enter your name here