ಬೆಂಗಳೂರು:
ಕೋವಿಡ್ ಪೀಡಿತರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ ದೂರವಾಣಿ ಕರೆಮಾಡಿ ಆರೋಗ್ಯವನ್ನು ವಿಚಾರಿಸಿದರು.
ಸಂಜೆ 4:30ಕ್ಕೆ ದೂರವಾಣಿ ಮೂಲಕ ಪ್ರಧಾನಿ ನರೇಂದ್ರ ಮೋದಿ, ಸಿಎಂ ಗೆ ಕರೆಮಾಡಿ ಸೂಕ್ತ ಚಿಕಿತ್ಸೆ ಪಡೆಯಿರಿ ಎಂಬ ಸಲಹೆ ನೀಡಿ ಬೊಮ್ಮಾಯಿ ಜತೆ ಸುಮಾರು ಐದು ನಿಮಿಷಗಳ ಕಾಲ ಮಾತನಾಡಿದರು.
Big Breaking@PMOIndia @narendramodi calls @CMofKarnataka @BSBommai and inquires about his health as he is currently quarantine.
— Thebengalurulive/ಬೆಂಗಳೂರು ಲೈವ್ (@bengalurulive_) January 11, 2022
“आपका स्वास्थ्य और आपके राज्य का स्वास्थ्य दोनों आपको देखना है,” Modi said to Bommai#Bangalore #Bengaluru #Karnataka #COVID19 #coronavirus @DHFWKA pic.twitter.com/U5CZ9K2pqR
ತಮ್ಮ ಜತೆಗೆ ಕುಟುಂಬದ ಇಬ್ಬರು ಸದಸ್ಯರಿಗೂ ಕೋವಿಡ್ ತಗುಲಿದ ಬಗ್ಗೆ ಪ್ರಧಾನಿಯವರಿಗೆ ಬೊಮ್ಮಾಯಿ ವಿವರಣೆ ನೀಡಿದರು. ಎಲ್ಲರೂ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆಯೂ ಪ್ರಧಾನಿ ಸಲಹೆ ನೀಡಿದರು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಹೇಳಿವೆ.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯ ಬಗ್ಗೆಯೂ ಪ್ರಧಾನಿಯವರಿಗೆ ಮಾಹಿತಿ ನೀಡಿದ ಅವರು ರಾಜ್ಯದಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಲಾಗಿದೆ. ತಜ್ಞರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಬೊಮ್ಮಾಯಿ ಹೇಳಿದರು.
Also Read: PM calls Covid-positive Karnataka CM, urges him to take appropriate medical treatment