Home ಆರೋಗ್ಯ ಇನ್ನೊಂದು ತಿಂಗಳಲ್ಲಿ ಲಸಿಕೆ ವಿತರಣೆಗೆ ಸಜ್ಜಾಗಿ: ಕರ್ನಾಟಕಕ್ಕೆ ಮೋದಿ ಸೂಚನೆ

ಇನ್ನೊಂದು ತಿಂಗಳಲ್ಲಿ ಲಸಿಕೆ ವಿತರಣೆಗೆ ಸಜ್ಜಾಗಿ: ಕರ್ನಾಟಕಕ್ಕೆ ಮೋದಿ ಸೂಚನೆ

45
0

ಬೆಂಗಳೂರು:

ಕೊರೋನಾ ಸೋಂಕಿಗೆ ಲಸಿಕೆ ಒಂದು ಅತಿ ದೊಡ್ಡ ಪ್ರಕ್ರಿಯೆಯಾಗಿದ್ದು, ಇನ್ನೊಂದು ತಿಂಗಳಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಪ್ರಧಾನಿ ನರೇದ್ರ ಮೊದಿ ಹೇಳಿದ್ದಾರೆ.

ಲಸಿಕೆ ವಿತರಣೆಗೆ ಚುನಾವಣೆ ಮಾದರಿಯಲ್ಲಿ ಸಜ್ಜಾಗಬೇಕು ಎಂದು ಪ್ರಧಾನಿ ಕರ್ನಾಟಕ ಸೇರಿದಂತೆ ಕೊರೋನಾ ಸೋಂಕು ಹೆಚ್ಚುತ್ತಿರುವ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.

ಕೊರೋನಾ ಸೋಂಕು ಅಧಿಕಗೊಂಡಿರುವ 8 ರಾಜ್ಯಗಳ ಪೈಕಿ ಕರ್ನಾಟಕವೂ ಕೂಡ ಒಂದಾಗಿದ್ದು, ಸೋಂಕು ಹೆಚ್ಚುತ್ತಿರುವ ರಾಜ್ಯಗಳ ಜೊತೆ ಪ್ರಧಾನಿ ಮೋದಿ ಇಂದು ವಿಡಿಯೋ ಸಂವಾದ ನಡೆಸಿ ಲಸಿಕೆ ಕುರಿತು ಮಾಹಿತಿ ನೀಡಿದರು. ಕೊರೋನಾ ಸೋಂಕು ಕರ್ನಾಟಕದಲ್ಲಿ ಹೆಚ್ಚುತ್ತಿದ್ದು, ಕೊರೋನಾ ಲಸಿಕೆ ವಿತರಣೆಗೆ ಕರ್ನಾಟಕ ಯಾವ ರೀತಿ ಸಿದ್ಧತೆ ಮಾಡಿಕೊಂಡಿದೆ, ಪ್ರಸಕ್ತ ರಾಜ್ಯದ ಕೊರೋನಾ ಸ್ಥಿತಿಗತಿ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.

ಅಲ್ಲದೇ ಲಸಿಕೆ ಬರುವವರೆಗೂ ಯಾವುದೇ ರೀತಿಯಲ್ಲಿ ಕೊರೋನಾ ಕುರಿತು ನಿರ್ಲಕ್ಷ್ಯ ಮಾಡಬಾರದು. ಬಳಿಕ ಲಸಿಕೆ ವಿತರಣೆಗೆ ಅಗತ್ಯ ತಯಾರಿ ಮಾಡಿಕೊಳ್ಳಬೇಕು. ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ವಿತರಣೆ ನಿಯಮ ಪ್ರಕಾರ ತಯಾರಿಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ಲಸಿಕೆಯಿಂದ ಸಾವಿನ ಪ್ರಮಾಣವನ್ನು ಇನ್ನಷ್ಟು ಕಡಿಮೆಗೊಳಿಸಬಹುದು. ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೋದಿ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.

ಮೈಸೂರಿನಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ಇನ್ನು ನಾಲ್ಕು ವಾರಗಳಲ್ಲಿ ಕೊರೋನಾಗೆ ಲಸಿಕೆ ದೊರೆಯುವ ನಿರೀಕ್ಷೆ ಇದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದ್ದಾರೆ ಎಂದರು.

ಕೊರೋನಾ ಲಸಿಕೆ ವಿಚಾರವಾಗಿ ಮೋದಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ್ದು, ಲಸಿಕೆ ವಿತರಿಸಲು ರಾಜ್ಯ ಸರ್ಕಾರದಿಂದ ಅಗತ್ಯ ತಯಾರಿ ನಡೆಯುತ್ತಿದೆ ಎಂದರು.

LEAVE A REPLY

Please enter your comment!
Please enter your name here