Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಆರೋಗ್ಯ
  • ಆಮ್ಲಜನಕ ಮತ್ತು ರೆಮ್ ಡಿಸಿವರ್ ಹೆಚ್ಚುವರಿ ಪೂರೈಕೆ: ಪ್ರಧಾನಿ ಭರವಸೆ
  • ಆರೋಗ್ಯ
  • ಬೆಂಗಳೂರು ನಗರ

ಆಮ್ಲಜನಕ ಮತ್ತು ರೆಮ್ ಡಿಸಿವರ್ ಹೆಚ್ಚುವರಿ ಪೂರೈಕೆ: ಪ್ರಧಾನಿ ಭರವಸೆ

The Bengaluru Live April 23, 2021 3:00 PM 1 minute read
ಆಮ್ಲಜನಕ ಮತ್ತು ರೆಮ್ ಡಿಸಿವರ್ ಹೆಚ್ಚುವರಿ ಪೂರೈಕೆ: ಪ್ರಧಾನಿ ಭರವಸೆ

ಆಮ್ಲಜನಕ ಮತ್ತು ರೆಮ್ ಡಿಸಿವರ್ ಹೆಚ್ಚುವರಿ ಪೂರೈಕೆ: ಪ್ರಧಾನಿ ಭರವಸೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ ಹಾಗೂ ರೆಮ್ ಡಿಸಿವಿರ್ ಹೆಚ್ಚುವರಿ ಉತ್ಪಾದನೆ ಹಾಗೂ ಪೂರೈಕೆಗೆ ಕೇಂದ್ರ ಸರ್ಕಾರ ಸಿದ್ಧವಿದ್ದು, ರಾಜ್ಯ ಸರ್ಕಾರಗಳೂ ಪರಸ್ಪರ ಸಹಕರಿಸುವ ಮೂಲಕ ಸವಾಲನ್ನು ಸಮರ್ಥವಾಗಿ ಎದುರಿಸುವಂತೆ ಪ್ರಧಾನಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿದರು.

ಅವರು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ವಿಷಯ ತಿಳಿಸಿದರು. ಈಗ ಎದುರಾಗಿರುವ ವಿಪತ್ತನ್ನು ಎದುರಿಸಲು ಆರೋಗ್ಯ ಸೇವಾ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡುವುದು, ಮುನ್ನೆಚ್ಚರಿಕೆಯ ಕ್ರಮಗಳ ಕಟ್ಟುನಿಟ್ಟಿನ ಪಾಲನೆ, ಅನಗತ್ಯ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುವುದು ಹಾಗೂ ಆಮ್ಲಜನಕದ ಸಮರ್ಪಕ ಹಾಗೂ ಮಿತಬಳಕೆಗೆ ಆದ್ಯತೆ ನೀಡುವುದು ಹಾಗೂ ಜನರಲ್ಲಿ ವಿಶ್ವಾಸ ಮೂಡಿಸುವುದು ಅತಿ ಅಗತ್ಯ ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು.

CM VC with PM

ಆಮ್ಲಜನಕದ ದುರ್ಬಳಕೆ ಯಾಗದಂತೆ ಎಲ್ಲ ರಾಜ್ಯಗಳಲ್ಲೂ ಆಕ್ಸಿಜನ್ ಆಡಿಟ್ ಮಾಡಿಸುವಂತೆ ಪ್ರಧಾನ ಮಂತ್ರಿಯವರು ಸಲಹೆ ನೀಡಿದರು. ಜೊತೆಗೆ ಆಮ್ಲಜನಕದ ಟ್ಯಾಂಕರು ಗಳ ಸುಗಮ ಸಂಚಾರಕ್ಕೆ ರಾಜ್ಯ ಸರ್ಕಾರಗಳು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: ಪಿಎಂ ಮೋದಿ ಅವರಿಂದ  ಕರ್ನಾಟಕದ ಕೋವಿಡ್ ಪರಿಸ್ಥಿತಿಯ ಪರಿಶೀಲನೆ https://kannada.thebengalurulive.com/pm-modi-reviews-covid-19-situation-in-karnataka/

ಆಮ್ಲಜನಕ ಮತ್ತು ರೆಮ್ ಡಿಸಿವಿರ್ ಸದ್ಬಳಕೆಯಾಗುವ ನಿಟ್ಟಿನಲ್ಲಿ ಆತಂಕದ ಕೊಳ್ಳುವಿಕೆಯನ್ನು ನಿಯಂತ್ರಿಸುವಂತೆ ಅವರು ಸಲಹೆ ಮಾಡಿದರು. ಹೆಚ್ಚುತ್ತಿರುವ ಪ್ರಕರಗಳಿಂದಾಗ ಮಾನವ ಸಂಪನ್ಮೂಲ ಅಗತ್ಯತೆಯೂ ಹೆಚ್ಚುತ್ತಿದ್ದು, ಇತ್ತೀಚೆಗೆ ನಿವೃತ್ತರಾದ ಸಿಬ್ಬಂದಿಯ ಸೇವೆ ಬಳಕೆ ಮಾಡಿಕೊಳ್ಳಿ ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು.

ಆಮ್ಲಜನಕ ಪೂರೈಕೆಗೆ ಮನವಿ:

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ರಾಜ್ಯದ ವಸ್ತುಸ್ಥಿತಿಯನ್ನು ವಿವರಿಸಿದರು.

ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ರಾಜ್ಯಕ್ಕೆ ದಿನಕ್ಕೆ 1471 ಟನ್ ಆಮ್ಲಜನಕ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.

ರಾಜ್ಯದಲ್ಲಿ ಆಮ್ಲಜನಕದ ಬಳಕೆ ದಿನೇ ದಿನೇ ಹೆಚ್ಚುತ್ತಿದ್ದು, ನಿನ್ನೆ ರಾಜ್ಯದಲ್ಲಿ 500 ಟನ್ ಬಳಕೆಯಾಗಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇವಲ 300 ಟನ್ ಆಮ್ಲಜನಕ ಹಂಚಿಕೆ ಮಾಡಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಹಲವು ಆರೋಗ್ಯ ಸೇವಾ ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗುವುದು.

ಭಾರತ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯಕ್ಕೆ ಏಪ್ರಿಲ್ 25 ರಿಂದ 1142 ಟನ್ ಆಮ್ಲಜನಕ ಅಗತ್ಯವಿದೆ ಹಾಗೂ ಏಪ್ರಿಲ್ 30ರ ನಂತರ 1471 ಟನ್ ಆಮ್ಲಜನಕದ ಅಗತ್ಯವಿದೆ. ಆಮ್ಲಜನಕ ಕೊರತೆ ನೀಗಿಸಿ, ಕೂಡಲೇ 1471 ಟನ್ ಆಮ್ಲಜನಕ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿಗಳು ಪ್ರಧಾನಿಯವರಲ್ಲಿ ಮನವಿ ಮಾಡಿದರು.

CM BS

ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಪಾಸಿಟಿವಿಟಿ ದರ ಶೇ. 16 ರಷ್ಟಿದೆ. ಬೆಂಗಳೂರು ನಗರ ಅತಿ ಹೆಚ್ಚು ಪೀಡಿತವಾಗಿದ್ದು, ತುಮಕೂರು, ಬಳ್ಳಾರಿ, ಮೈಸೂರು, ಹಾಸನ ಮತ್ತು ಕಲಬುರಗಿ ಜಿಲ್ಲೆಗಳಲ್ಲಿಯೂ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ.

ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಂತೆ ತಡೆಯಲು ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಜೊತೆಗೆ ಇತರ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ರಾಜ್ಯದ ಆರ್ಥಿಕ ಚಟುವಟಿಕೆಗಳ ಮೇಲೆ ಕನಿಷ್ಠ ಪರಿಣಾಮವಾಗುವ ರೀತಿಯಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಕಳೆದ ಆರು ತಿಂಗಳಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಿದ್ದು, ಇದೀಗ ಅನುಕೂಲವಾಗಿದೆ. ಸರ್ಕಾರದ ಶಿಫಾರಸಿನ ಮೇರೆಗೆ ರೋಗಿಗಳನ್ನು ದಾಖಲಿಸಲು ಖಾಸಗಿ ಆಸ್ಪತ್ರೆಗಳ ಶೇ. 50 ರಷ್ಟು ಹಾಸಿಗೆಗಳನ್ನು ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬಂದರೆ ಅನುವಾಗುವಂತೆ ಖಾಸಗಿ ಆಸ್ಪತ್ರೆಗಳು ಸಮೀಪದ ಹೋಟೆಲ್ ಗಳ ಸಹಯೋಗದೊಂದಿಗೆ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ. ಐಸಿಯು ಸೌಲಭ್ಯಗಳಿರುವ ಫೀಲ್ಡ್ ಆಸ್ಪತ್ರೆಗಳನ್ನು ಸ್ಥಾಪಿಸಲು ಸಹ ಚಿಂತನೆ ನಡೆಸಲಾಗುತ್ತಿದೆ.

ರಾಜ್ಯದಲ್ಲಿ ರೆಮ್ ಡಿಸಿವಿರ್ ಕೊರತೆಯಾಗದಂತೆ ಎಚ್ಚರ ವಹಿಸಲಾಗುತ್ತಿದ್ದು, ಮುಂದಿನ 10 ದಿನಗಳಿಗೆ 2 ಲಕ್ಷ ಡೋಸ್ ಗಳಷ್ಟು ರೆಮ್ ಡಿಸಿವಿರ್ ಒದಗಿಸುವಂತೆ ಮುಖ್ಯಮಂತ್ರಿಗಳು ಪ್ರಧಾನಿಯವರಿಗೆ ಮನವಿ ಮಾಡಿದರು.

ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಮುಖ್ಯಮಂತ್ರಿಗಳು, ನಗರದ 8 ವಲಯಗಳ ಕೋವಿಡ್ ನಿರ್ವಹಣೆ ಉಸ್ತುವಾರಿಗೆ ಸಚಿವರನ್ನು ನೇಮಕ ಮಾಡಲಾಗಿದೆ. ಹಿರಿಯ ಐಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಲಸಿಕೆ ಕಾರ್ಯಕ್ರಮದ ಪ್ರಗತಿಯೂ ಉತ್ತಮವಾಗಿದ್ದು, ಈ ವರೆಗೆ 82 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಮೇ 1 ರಿಂದ ಹೊಸ ಲಸಿಕಾ ನೀತಿ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಿಗೂ ಲಸಿಕೆಗಳು ಸಮಾನವಾಗಿ ಹಂಚಿಕೆಯಾಗುವಂತೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಮನವಿ ಮಾಡಿದರು.

About the Author

The Bengaluru Live

Administrator

Visit Website View All Posts

Post navigation

Previous: ಪಿಎಂ ಮೋದಿ ಅವರಿಂದ ಕರ್ನಾಟಕದ ಕೋವಿಡ್ ಪರಿಸ್ಥಿತಿಯ ಪರಿಶೀಲನೆ
Next: ‘ಮಲಗಿದೆ’ ಕರ್ನಾಟಕ ಆರೋಗ್ಯ ಇಲಾಖೆ ಆಮ್ಲಜನಕ, ವೆಂಟಿಲೇಟರ್ ಹಾಸಿಗೆಗಳನ್ನು ಹೆಚ್ಚಿಸುವ ಅವಕಾಶವನ್ನು ಕಳೆದುಕೊಂಡಿದೆ

Related Stories

ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಬೆಂಗಳೂರು ನಗರ

ಬೆಂಗಳೂರು ಇನ್ನೋವೇಶನ್ ವರದಿ 2026: ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3 ಬೆಂಗಳೂರಿಗೆ; $211 ಶತಕೋಟಿ ಮೌಲ್ಯದ 57 ಯೂನಿಕಾರ್ನ್

The Bengaluru Live November 18, 2026 9:08 PM
ಮೈಕ್‌ಗಳ ಮುಂದೆ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಬೆಂಬಲಿಗರು
  • ಬೆಂಗಳೂರು ನಗರ

ವಿಮಾನ ನಿಲ್ದಾಣ ರಸ್ತೆಗೆ ಹೆಬ್ಬಾಳ ಮಾದರಿಯ ಹೊಸ ಫ್ಲೈಓವರ್ ಚಿಂತನೆ: ಐಒಸಿ ಜಂಕ್ಷನ್ ರೋಟರಿ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಶಿವಕುಮಾರ್

The Bengaluru Live November 18, 2026 8:54 PM
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮೊದಲ ಸಿಡಬ್ಲ್ಯುಪಿ ಭಾರತ ವಲಯ ಸಮ್ಮೇಳನದ ಸಮಾರೋಪ ಅಧಿವೇಶನದ ವೇದಿಕೆ ಮತ್ತು ಫಲಕದ ವಿಸ್ತೃತ ನೋಟ
  • ಬೆಂಗಳೂರು ನಗರ

ಜನಗಣತಿ, ಕ್ಷೇತ್ರ ಮರುವಿಂಗಡಣೆಯಿಂದ ಮಹಿಳೆಯರ ಶೇ.33 ಮೀಸಲಾತಿ ವಿಳಂಬವಾಗದಂತೆ ಎಲ್ಲ ಪಕ್ಷಗಳು ಒಮ್ಮತಕ್ಕೆ ಬರಲಿ: ಡಿ. ಪುರಂದೇಶ್ವರಿ

The Bengaluru Live November 18, 2026 8:04 PM

Latest Post

ಬೆಂಗಳೂರು ಇನ್ನೋವೇಶನ್ ವರದಿ 2026: ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3 ಬೆಂಗಳೂರಿಗೆ; $211 ಶತಕೋಟಿ ಮೌಲ್ಯದ 57 ಯೂನಿಕಾರ್ನ್ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಬೆಂಗಳೂರು ನಗರ

ಬೆಂಗಳೂರು ಇನ್ನೋವೇಶನ್ ವರದಿ 2026: ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3 ಬೆಂಗಳೂರಿಗೆ; $211 ಶತಕೋಟಿ ಮೌಲ್ಯದ 57 ಯೂನಿಕಾರ್ನ್

November 18, 2026 9:08 PM
ವಿಮಾನ ನಿಲ್ದಾಣ ರಸ್ತೆಗೆ ಹೆಬ್ಬಾಳ ಮಾದರಿಯ ಹೊಸ ಫ್ಲೈಓವರ್ ಚಿಂತನೆ: ಐಒಸಿ ಜಂಕ್ಷನ್ ರೋಟರಿ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಶಿವಕುಮಾರ್ ಮೈಕ್‌ಗಳ ಮುಂದೆ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಬೆಂಬಲಿಗರು
  • ಬೆಂಗಳೂರು ನಗರ

ವಿಮಾನ ನಿಲ್ದಾಣ ರಸ್ತೆಗೆ ಹೆಬ್ಬಾಳ ಮಾದರಿಯ ಹೊಸ ಫ್ಲೈಓವರ್ ಚಿಂತನೆ: ಐಒಸಿ ಜಂಕ್ಷನ್ ರೋಟರಿ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಶಿವಕುಮಾರ್

November 18, 2026 8:54 PM
ವಿಕಲಚೇತನರಿಗೆ ಶೇ.5 ಹುದ್ದೆ ಮೀಸಲಾತಿ ದೃಢೀಕರಿಸಲು ಇಲಾಖೆಗಳಿಗೆ ಸೂಚನೆ; ಒಂದು ವಾರದೊಳಗೆ ಅನುಪಾಲನಾ ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿ ನಿರ್ದೇಶನ ಮರದ ಫಲಕದ ಮುಂದೆ ಸಭೆಯಲ್ಲಿ ಮೈಕ್‌ನಲ್ಲಿ ಮಾತನಾಡುತ್ತಿರುವ ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್
  • ಕರ್ನಾಟಕ

ವಿಕಲಚೇತನರಿಗೆ ಶೇ.5 ಹುದ್ದೆ ಮೀಸಲಾತಿ ದೃಢೀಕರಿಸಲು ಇಲಾಖೆಗಳಿಗೆ ಸೂಚನೆ; ಒಂದು ವಾರದೊಳಗೆ ಅನುಪಾಲನಾ ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿ ನಿರ್ದೇಶನ

November 18, 2026 8:26 PM
ಚರ್ಮಗಂಟು ರೋಗ ಹೆಚ್ಚಳ: ಜಾನುವಾರುಗಳಿಗೆ ಲಸಿಕೆ ಸಮರ್ಪಕವಾಗಿ ಹಾಕಲು ಸಚಿವ ಪುಟ್ಟರಂಗಶೆಟ್ಟಿ ಸೂಚನೆ; ತಡವಾಗಿ ಬಂದ ಉಪ ನಿರ್ದೇಶಕರಿಗೆ ತರಾಟೆ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ರಕ್ಷಣಾ ಉಡುಪು, ಟೋಪಿ ಮತ್ತು ಮಾಸ್ಕ್ ಧರಿಸಿ ಪ್ರಯೋಗಾಲಯ ಕೊಠಡಿ ಪರಿಶೀಲಿಸುತ್ತಿರುವ ಅಧಿಕಾರಿಗಳು
  • ಕರ್ನಾಟಕ

ಚರ್ಮಗಂಟು ರೋಗ ಹೆಚ್ಚಳ: ಜಾನುವಾರುಗಳಿಗೆ ಲಸಿಕೆ ಸಮರ್ಪಕವಾಗಿ ಹಾಕಲು ಸಚಿವ ಪುಟ್ಟರಂಗಶೆಟ್ಟಿ ಸೂಚನೆ; ತಡವಾಗಿ ಬಂದ ಉಪ ನಿರ್ದೇಶಕರಿಗೆ ತರಾಟೆ

November 18, 2026 8:10 PM
ಜನಗಣತಿ, ಕ್ಷೇತ್ರ ಮರುವಿಂಗಡಣೆಯಿಂದ ಮಹಿಳೆಯರ ಶೇ.33 ಮೀಸಲಾತಿ ವಿಳಂಬವಾಗದಂತೆ ಎಲ್ಲ ಪಕ್ಷಗಳು ಒಮ್ಮತಕ್ಕೆ ಬರಲಿ: ಡಿ. ಪುರಂದೇಶ್ವರಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮೊದಲ ಸಿಡಬ್ಲ್ಯುಪಿ ಭಾರತ ವಲಯ ಸಮ್ಮೇಳನದ ಸಮಾರೋಪ ಅಧಿವೇಶನದ ವೇದಿಕೆ ಮತ್ತು ಫಲಕದ ವಿಸ್ತೃತ ನೋಟ
  • ಬೆಂಗಳೂರು ನಗರ

ಜನಗಣತಿ, ಕ್ಷೇತ್ರ ಮರುವಿಂಗಡಣೆಯಿಂದ ಮಹಿಳೆಯರ ಶೇ.33 ಮೀಸಲಾತಿ ವಿಳಂಬವಾಗದಂತೆ ಎಲ್ಲ ಪಕ್ಷಗಳು ಒಮ್ಮತಕ್ಕೆ ಬರಲಿ: ಡಿ. ಪುರಂದೇಶ್ವರಿ

November 18, 2026 8:04 PM
ಮಹಿಳೆಯರ ಸಮಾನ ಭಾಗವಹಿಸುವಿಕೆಯಿಂದಲೇ ಪ್ರಜಾಪ್ರಭುತ್ವ ಪೂರ್ಣ: ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ ಸಮ್ಮೇಳನದಲ್ಲಿ ರಾಜ್ಯಪಾಲ ಸುಧಾ ಯಾದವ್ ವಿಧಾನಸೌಧದಲ್ಲಿ ಮೊದಲ ಸಿಡಬ್ಲ್ಯುಪಿ ಭಾರತ ವಲಯ ಸಮ್ಮೇಳನದ ಸಮಾರೋಪ ಅಧಿವೇಶನದ ಫಲಕದಡಿ ವೇದಿಕೆಯ ಮೇಲೆ ನಿಂತಿರುವ ಗಣ್ಯರು
  • ಬೆಂಗಳೂರು ನಗರ

ಮಹಿಳೆಯರ ಸಮಾನ ಭಾಗವಹಿಸುವಿಕೆಯಿಂದಲೇ ಪ್ರಜಾಪ್ರಭುತ್ವ ಪೂರ್ಣ: ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ ಸಮ್ಮೇಳನದಲ್ಲಿ ರಾಜ್ಯಪಾಲ ಸುಧಾ ಯಾದವ್

November 18, 2026 7:53 PM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಬೆಂಗಳೂರು ನಗರ

ಬೆಂಗಳೂರು ಇನ್ನೋವೇಶನ್ ವರದಿ 2026: ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3 ಬೆಂಗಳೂರಿಗೆ; $211 ಶತಕೋಟಿ ಮೌಲ್ಯದ 57 ಯೂನಿಕಾರ್ನ್

The Bengaluru Live November 18, 2026 9:08 PM
ಮೈಕ್‌ಗಳ ಮುಂದೆ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಬೆಂಬಲಿಗರು
  • ಬೆಂಗಳೂರು ನಗರ

ವಿಮಾನ ನಿಲ್ದಾಣ ರಸ್ತೆಗೆ ಹೆಬ್ಬಾಳ ಮಾದರಿಯ ಹೊಸ ಫ್ಲೈಓವರ್ ಚಿಂತನೆ: ಐಒಸಿ ಜಂಕ್ಷನ್ ರೋಟರಿ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಶಿವಕುಮಾರ್

The Bengaluru Live November 18, 2026 8:54 PM
ಮರದ ಫಲಕದ ಮುಂದೆ ಸಭೆಯಲ್ಲಿ ಮೈಕ್‌ನಲ್ಲಿ ಮಾತನಾಡುತ್ತಿರುವ ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್
  • ಕರ್ನಾಟಕ

ವಿಕಲಚೇತನರಿಗೆ ಶೇ.5 ಹುದ್ದೆ ಮೀಸಲಾತಿ ದೃಢೀಕರಿಸಲು ಇಲಾಖೆಗಳಿಗೆ ಸೂಚನೆ; ಒಂದು ವಾರದೊಳಗೆ ಅನುಪಾಲನಾ ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿ ನಿರ್ದೇಶನ

The Bengaluru Live November 18, 2026 8:26 PM
ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ರಕ್ಷಣಾ ಉಡುಪು, ಟೋಪಿ ಮತ್ತು ಮಾಸ್ಕ್ ಧರಿಸಿ ಪ್ರಯೋಗಾಲಯ ಕೊಠಡಿ ಪರಿಶೀಲಿಸುತ್ತಿರುವ ಅಧಿಕಾರಿಗಳು
  • ಕರ್ನಾಟಕ

ಚರ್ಮಗಂಟು ರೋಗ ಹೆಚ್ಚಳ: ಜಾನುವಾರುಗಳಿಗೆ ಲಸಿಕೆ ಸಮರ್ಪಕವಾಗಿ ಹಾಕಲು ಸಚಿವ ಪುಟ್ಟರಂಗಶೆಟ್ಟಿ ಸೂಚನೆ; ತಡವಾಗಿ ಬಂದ ಉಪ ನಿರ್ದೇಶಕರಿಗೆ ತರಾಟೆ

The Bengaluru Live November 18, 2026 8:10 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಂಗಳೂರು ಇನ್ನೋವೇಶನ್ ವರದಿ 2026: ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3 ಬೆಂಗಳೂರಿಗೆ; $211 ಶತಕೋಟಿ ಮೌಲ್ಯದ 57 ಯೂನಿಕಾರ್ನ್
  • ವಿಮಾನ ನಿಲ್ದಾಣ ರಸ್ತೆಗೆ ಹೆಬ್ಬಾಳ ಮಾದರಿಯ ಹೊಸ ಫ್ಲೈಓವರ್ ಚಿಂತನೆ: ಐಒಸಿ ಜಂಕ್ಷನ್ ರೋಟರಿ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಶಿವಕುಮಾರ್
  • ವಿಕಲಚೇತನರಿಗೆ ಶೇ.5 ಹುದ್ದೆ ಮೀಸಲಾತಿ ದೃಢೀಕರಿಸಲು ಇಲಾಖೆಗಳಿಗೆ ಸೂಚನೆ; ಒಂದು ವಾರದೊಳಗೆ ಅನುಪಾಲನಾ ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿ ನಿರ್ದೇಶನ
  • ಚರ್ಮಗಂಟು ರೋಗ ಹೆಚ್ಚಳ: ಜಾನುವಾರುಗಳಿಗೆ ಲಸಿಕೆ ಸಮರ್ಪಕವಾಗಿ ಹಾಕಲು ಸಚಿವ ಪುಟ್ಟರಂಗಶೆಟ್ಟಿ ಸೂಚನೆ; ತಡವಾಗಿ ಬಂದ ಉಪ ನಿರ್ದೇಶಕರಿಗೆ ತರಾಟೆ
©Copyright 2025 The Bengaluru Live All rights reserved. | MoreNews by AF themes.