ಬೆಳಗಾವಿ:
ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನ ವಿರೋಧಿಸಿ ಎಂಇಎಸ್ ಕಾರ್ಯಕರ್ತರು ಪ್ರತಿಬಾರಿ ಪುಂಡಾಟಿಕೆ ನಡೆಸುವುದನ್ನು ರೂಢಿ ಮಾಡಿಕೊಂಡು ಬಂದಿದ್ದಾರೆ. ಈ ಬಾರಿಯೂ ಪ್ರತಿಭಟನೆ ಸಮಾವೇಶ ಮಹಾಮೇಳಾವಕ್ಕೆ ವೇದಿಕೆಯನ್ನು ನಗರದ ವಾಕ್ಸಿನ್ ಡಿಪೋ ಬಳಿ ನಿರ್ಮಾಣ ಮಾಡುತ್ತಿರುವಾಗ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕಿದ್ದಾರೆ. ಈ ವೇಳೆ ಎಂಇಎಸ್ ಮುಖಂಡ ಮುಖಂಡರಾದ ದೀಪಕ್ ದಳವಿ ಮೇಲೆ ಮಸಿ ಚೆಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ನಡೆಯುವ ಕೆಲವೇ ನಿಮಿಷಗಳ ಮೊದಲು ಉತ್ತರ ಕರ್ನಾಟಕದ ಅಭಿವೃದ್ಧಿ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದಿನಿಂದ ಅಧಿವೇಶನ ಆರಂಭಿಸಿದೆ. ಆದರೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಸಮಿತೆ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ಇಂದಿನಿಂದ ಆರಂಭಗೊಂಡಿರುವ ವಿಧಾನಮಂಡಳದ ಅಧಿವೇಶನ ವಿರೋಧಿಸಿ ಮಹಾಮೇಳಾವ ನಡೆಸಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಎಂಇಎಸ್ ಕಾರ್ಯಕರ್ತರಿಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮಸಿ ಬಳೆದು ಆಕ್ರೋಶ ಹೊರಹಾಕಿದ್ದಾರೆ.
Also Read: Pro-Kannada activists allegedly hurl black ink on MES leader
ಇಂದು ಬೆಳಿಗ್ಗೆ ಪೊಲೀಸ್ ಅಧಿಕಾರಿಗಳು ವೇದಿಕೆ ತೆರವುಗೊಳಿಸಲು ಮುಂದಾದರೂ. ಎಂಇಎಸ್ ಮುಖಂಡರು ವೇದಿಕೆಯಿಂದ ಕೆಳಗಿಳಿಯಲು ಒಪ್ಪಲಿಲ್ಲ. ವೇದಿಕೆ ಮೇಲೆ ಕುಳಿತು ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ಎಂಇಎಸ್ ಸಂಘಟಕರು ಹಾಗೂ ಪೋಲೀಸರ ಮಧ್ಯೆ ವಾಗ್ವಾದ ನಡೆದು ಉದ್ವಿಗ್ನ ಪರಿಸ್ಮಿತೆ ಉಂಟಾಯಿತು.
ಈ ವೇಳೆ ಎಂಇಎಸ್ ನ ಮಾಜಿ ಶಾಸಕ ಮನೋಹರ್ ಕಿನೇಕರ್, ದೀಪಕ್ ದಳವಿ, ಶುಭಂ ಶೇಳಕೆ ಮತ್ತಿತರು ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ವಾದಕ್ಕಿಳಿದರು. ಈ ಸಂದರ್ಭದಲ್ಲಿ ಸ್ಮಳಕ್ಕೆ ಆಗಮಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಎಂಇಎಸ್ ಮುಖಂಡರಾದ ದೀಪಕ್ ದಳವಿ ಹಾಗೂ ಮನೋಹರ್ ಕಿಣೇಕರ್ ಮೇಲೆ ಮಸಿ ಚೆಲ್ಲಿ ಆಕ್ರೋಶ ಹೊರ ಹಾಕಿದರು. ಇದರಿಂದ ಸ್ಮಳದಲ್ಲಿ ಉದ್ವಿಗ್ನ ವರಿತ ಉಂಟಾಯಿತು. ಮಸಿ ಎರಚಿದ ಕನ್ನಡ ಪರ ಸಂಘಟನೆಯ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯನ್ನು ವಿರೋಧಿ ನಾಳೆ ಬೆಳಗಾವಿ ಬಂದ್ ನಡೆಸುವುದಾಗಿ ಎಂಇಎಸ್ ಮುಖಂಡರು ತಿಳಿಸಿದ್ದಾರೆ.