ಬೆಂಗಳೂರು:
ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಇಂದು ಕಮಾಂಡ್ ಆಸ್ಪತ್ರೆ ಬೆಂಗಳೂರು, ಇಲ್ಲಿಗೆ ಭೇಟಿ ನೀಡಿ, ಮೊನ್ನೆ ಬುಧವಾರದಂದು ತಮಿಳು ನಾಡಿನ ಕುನೂರ್ ನ ಸಮೀಪ ಸಂಭವಿಸಿದ ಹೆಲಿಕಾಪ್ಟರ್ ಪತನ ಘಟನೆಯಲ್ಲಿ ಬದುಕುಳಿದು, ಚಿಕಿತ್ಸೆ ಪಡೆಯುತ್ತಿರುವ, ಗ್ರೂಪ್ ಕ್ಯಾಪ್ಟನ್ ಶ್ರೀ ವರುಣ್ ಸಿಂಗ್ ಅವರ ಆರೋಗ್ಯ ವಿಚಾರಿಸಿದರು.
ಸಚಿವರು, ವರುಣ್ ಸಿಂಗ್ ಅವರ ತಂದೆ ಹಾಗೂ ತಾಯಿಯವರ ನ್ನೂ ಭೇಟಿ ಮಾಡಿದರು.

ಸಿಂಗ್ ರವರು ಶೀಘ್ರ ಗುಣಮುಖ ವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ ಸಚಿವರು, ಕರ್ನಾಟಕ ಸರಕಾರವು, ಹೆಚ್ಚಿನ ಚಿಕಿತ್ಸೆಯೂ ಸೇರಿದಂತೆ ಎಲ್ಲ ರೀತಿಯ ಸಹಾಯ ಹಾಗೂ ನೆರವು, ನೀಡಲು ಬದ್ದವಾಗಿದೆ, ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Also Read: Karnataka Home Minister visits Command Hospital, inquires about Gr Capt Varun Singh’s health