ಮಂಗಳೂರಿನಲ್ಲಿ ವಿವಾದಾತ್ಮಕ ಗೋಡೆ ಬರಹ ಪತ್ತೆ
ಮಂಗಳೂರು:
ಇತ್ತೀಚೆಗಷ್ಟೇ ಲಷ್ಕರ್ ಉಗ್ರರನ್ನು ಬೆಂಬಲಿಸಿದ್ದ ಗೋಡೆ ಬರಹವೊಂದು ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ ಮಂಗಳೂರಿನಲ್ಲಿ ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಪತ್ತೆಯಾಗಿದೆ.
ನಗರದ ಕೋರ್ಟ್ ರಸ್ತೆಯಲ್ಲಿ ಕೆಲ ಕಿಡಿಗೇಡಿಗಳು ಉರ್ದು ಭಾಷೆಯಲ್ಲಿ ಗೋಡೆ ಬರಹವೊಂದು ಬರೆದಿರುವುದು ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
Terrorists have once again defaced the wall with a provocative Jihadi Slogan in #Mangalore .
— Vinyas Shetty | विन्यास शेट्टी (@vinyasshetty) November 29, 2020
'Gustuk e Rasool ek hi saza sar tan say juda'(only 1 punishment for offending prophet, severing head from body).
This needs to be taken seriously @compolmlr @NIA_India . pic.twitter.com/M5cqRz0dFs
ಕೋರ್ಟ್ ಆವರಣದಲ್ಲಿರುವ ಪೊಲೀಸ್ ಔಟ್ ಪೋಸ್ಟ್ ಕಟ್ಟಡದ ಮೇಲೆ ‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು’ ಎಂಬರ್ಥದಲ್ಲಿ ಉರ್ದು ಭಾಷೆಯ ಎಚ್ಚರಿಕೆಯನ್ನು ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾಗಿದೆ.
ಕಪ್ಪು ಬಣ್ಣದ ಪೈಂಟ್ ಬಳಸಿ ರಾತ್ರಿ ವೇಳೆ ಬರೆಯಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದರು ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳದ ಸಮೀಪದಲ್ಲಿರುವ ಸಿಸಿಟಿವಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಉಗ್ರ ಸಂಘಟನೆ ಪರ ಗೋಡೆ ಬರಹ https://kannada.thebengalurulive.com/pro-terrorist-write-up-on-wall-in-mangaluru/