Home ಕರ್ನಾಟಕ quake-hit Turkiye: ಕನ್ನಡಿಗರ ಮಾಹಿತಿಗಾಗಿ ಶೀಘ್ರದಲ್ಲೇ ವಿಶೇಷ ಸಹಾಯವಾಣಿ ಸ್ಥಾಪನೆ- ಸಿಎಂ ಬೊಮ್ಮಾಯಿ

quake-hit Turkiye: ಕನ್ನಡಿಗರ ಮಾಹಿತಿಗಾಗಿ ಶೀಘ್ರದಲ್ಲೇ ವಿಶೇಷ ಸಹಾಯವಾಣಿ ಸ್ಥಾಪನೆ- ಸಿಎಂ ಬೊಮ್ಮಾಯಿ

50
0
Karnataka Chief Minister Basavaraj Bommai

ಬೆಂಗಳೂರು:

ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಅಲ್ಲಿರುವ ಭಾರತೀಯರು ಹಾಗೂ ಕನ್ನಡಿಗರ ಮಾಹಿತಿಗಾಗಿ ವಿಶೇಷ ಸಹಾಯವಾಣಿಯಯನ್ನು ವಿದೇಶಾಂಗ ಸಚಿವಾಲಯ ಹಾಗೂ ರಾಜ್ಯ ಸರ್ಕಾರ ಶೀಘ್ರದಲ್ಲೇ ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವೂ ಇಲ್ಲಿ ಸಹಾಯವಾಣಿ ಸ್ಥಾಪಿಸಲಿದೆ.

Also Read: Karnataka govt sets up helpline to aid people from the state in quake-hit Turkiye

”ನಾವು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ, ಅವರು ವಿಶೇಷ ಸಹಾಯವಾಣಿಯನ್ನು ಸ್ಥಾಪಿಸುತ್ತಿದ್ದಾರೆ, ನಾವು ಅಲ್ಲಿನ ಕನ್ನಡಿಗರಿಗೆ ಸಂಬಂಧಿಸಿದ ಮಾಹಿತಿಯನ್ನು ಸಚಿವಾಲಯ ಮತ್ತು ಟರ್ಕಿಯ ರಾಯಭಾರ ಕಚೇರಿಯ ಮೂಲಕ ಸಂಗ್ರಹಿಸುತ್ತಿದ್ದೇವೆ,” ಎಂದು ಬೊಮ್ಮಾಯಿ ಹೇಳಿದರು.

“ತುರ್ಕಿಯಲ್ಲಿರುವ ಜನರು ತಮ್ಮ ಕುಟುಂಬದ ಸದಸ್ಯರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರೆ, ನಮ್ಮ ಸರ್ಕಾರವು ಅವರನ್ನು ತಲುಪಲು ಮತ್ತು ಸಹಾಯ ಮಾಡಲು ಪ್ರಯತ್ನಿಸುತ್ತದೆ ಮತ್ತು ಅಗತ್ಯವಿದ್ದರೆ ಅವರು (ಭಾರತಕ್ಕೆ) ಹಿಂತಿರುಗಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಸಹ ಮಾಡುತ್ತದೆ” ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here