ಬೆಂಗಳೂರು:
ಸಿಕ್ಕಿಂ ಮೂಲದ 30 ವರ್ಷದ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೆ ದಿನೇಶ್ ಸುಬ್ಬ ಹಲ್ಲೆಗೊಳಗಾದ ವ್ಯಕ್ತಿ. ಪಶ್ಚಿಮ ಸಿಕ್ಕಿಂನಿಂದ ಬಂದ ಅವರು ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಎಲೆಕ್ಟ್ರಾನಿಕ್ಸ್ ಸಿಟಿ 1 ನೇ ಹಂತದಲ್ಲಿ ವಾಸಿಸುತ್ತಿದ್ದಾರೆ. ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ವಿವಾಹ ವಾರ್ಷಿಕೋತ್ಸವದ ನಿಮಿತ್ತ ಸಹೋದರ ಹಾಗೂ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಬುಧವಾರ ಬೆಳಗಿನ ಜಾವ 3-4 ಗಂಟೆ ಸುಮಾರಿಗೆ ವಾಪಸಾಗುತ್ತಿದ್ದರು. ದೊಡ್ಡತೋಗೂರಿನ ಪಿಸಿಆರ್ ಗಾರ್ಡನ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ದಿನೇಶ್ ಅವರನ್ನು ನೋಡಿ ಚೈನೀಸ್, ಚೈನೀಸ್ ಎಂದು ಕರೆದಿದೆ. ನಾನು ಸಿಕ್ಕಿಂನ ಭಾರತೀಯ ಎಂದು ದಿನೇಶ್ ಉತ್ತರಿಸಿದರು.
#Visualsaredisturbing : Racial attack in #Bengaluru. A native of #Sikkim state attacked and badly bruised. Dinesh Subba was called #Chinese several times before he was attacked, even as he clarified that he is #Indian. FIR against three unknown miscreants. Investigation is on. pic.twitter.com/DZm73DBjiz
— Imran Khan (@KeypadGuerilla) August 19, 2023
ತಕ್ಷಣ ಸಮೀಪಕ್ಕೆ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಿನೇಶ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಸ್ಥಳದಿಂದ ತೆರಳಿದರು. ಬಳಿಕ ಸ್ಥಳೀಯ ಕಟ್ಟಡದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ದಿನೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಖ ಹಾಗೂ ತಲೆಗೆ 9 ಹೊಲಿಗೆ ಹಾಕಲಾಗಿದೆ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಆಗಸ್ಟ್ 14 ರಂದು ವಿವಾಹ ವಾರ್ಷಿಕೋತ್ಸವವಾಗಿತ್ತು. ಹೀಗಾಗಿ ಸಹೋದರ ಆಗಸ್ಟ್ 15ರ ರಾತ್ರಿ ಪಾರ್ಟಿ ನೀಡಿದ್ದು, ಪಾರ್ಟಿ ಮುಗಿಸಿ ಮನೆಗೆ ತೆರಳಿದ್ದರು. ಮನೆಯಿಂದ 100 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ತಮ್ಮನ್ನು ಚೈನೀಸ್ ಎಂದು ಕರೆದುಕೊಂಡ ಮೂವರು ದಾಳಿಕೋರರು ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ. ಇದೊಂದು ಜನಾಂಗೀಯ ದಾಳಿ. 2009 ರಿಂದ ನಗರದಲ್ಲಿ ನೆಲೆಸಿರುವ ದಿನೇಶ್ ಸಹೋದರ ದೀಪಕ್ ದೋರ್ಜಿ, ವೈದ್ಯರು ತಮ್ಮ ಸಹೋದರನಿಗೆ ಬೆಡ್ ರೆಸ್ಟ್‌ನಲ್ಲಿ ಇರುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.