ಬಿಟಿಎಂ ಕ್ಷೇತ್ರದಲ್ಲಿ 24×7 ತುರ್ತು ಟೈಯಾಗ್ ಸೆಂಟರ್, ಆಕ್ಸಿಜನ್ ಹಾಗೂ ಕೋವಿಡ್ ಬೆಡ್ ಸೆಂಟರ್ ರೆಡಿ
ಬೆಂಗಳೂರು:
ಬಿಟಿಎಂ ಕ್ಷೇತ್ರದಲ್ಲಿ 24×7 ತುರ್ತು ಟೈಯಾಗ್ ಸೆಂಟರ್,ಆಕ್ಸಿಜನ್ ಹಾಗೂ ಕೋವಿಡ್ ಬೆಡ್ ಸೆಂಟರ್ ರೆಡಿ,ಜನರು ಭಯ ಬಿಡಿ ಸೂಕ್ತ ಚಿಕಿತ್ಸೆ ಪಡೆಯಿರಿ ಎಂಬುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಜನರಿಗೆ ಜಾಗೃತಿ ಮೂಡಿಸಿದರು
ಅವರು ಬಿಟಿಎಂ ವಿಧಾನ ಸಭಾ ಕ್ಷೇತ್ರದ ಕೋರಮಂಗಲದ ಒಳಾಂಗಣ ಸ್ಟೇಡಿಯಂನಲ್ಲಿ ಬಿಬಿಎಂಪಿ , ಡಾ. ಬಂಡಾರಿ, ಡಾ.ಶ್ರೀತೇಜಾ ಹಾಗೂ ಪ್ರೀತಿ ಜೈನ್ ಸಹಯೋಗದೊಂದಿಗೆ 24×7 ತುರ್ತು ಟೈಯಾಗ್ ಸೆಂಟರ್, ಆಕ್ಸಿಜನ್ ಹಾಗೂ ಕೋವಿಡ್ ಬೆಡ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು.
24×7 ಕೋವಿಡ್ ಪೀಡಿತರಿಗೆ ಸೇವೆ ಗೆ ಬೆಡ್ ವ್ಯವಸ್ಥೆ:- ನಗರದಲ್ಲಿ ಬಿಜೆಪಿ ಶಾಸಕರಿಂದ ಹಾಗೂ ಬಿಜೆಪಿ ಬೆಂಬಲಿತ ಸಹಚರ ಪ್ರಭಾವದಿಂದಾಗಿ ಬೆಡ್ ಬ್ಲಾಕಿಂಗ್ ದಂದೆಯು ಹೆಚ್ಚಾಗಿ ಜನಸಾಮಾನ್ಯರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗುವುದು ಬಹಳ ಕಷ್ಟಕರವಾಗಿ ಜನರು ಕೋವಿಡ್ ಗೆ ಚಿಕಿತ್ಸೆ ಸಿಗದೇ ಸಾವನ್ನು ಅಪ್ಪುತ್ತಿದ್ದಾರೆ ಇಂತಹ ಸಂಕಷ್ಟದಿಂದ ದೂರಮಾಡಲು ಮತ್ತು ಎಲ್ಲ ಜನಸಾಮಾನ್ಯ ಕೋವಿಡ್ ಪೀಡಿತರಿಗೆ ಸೂಕ್ತ ಬೆಡ್ ವ್ಯವಸ್ಥೆ ಹಾಗೂ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ನಮ್ಮ ಬಿಟಿಎಂ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಬಿಎಂಪಿ ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದಿನದ 24ಗಂಟೆಗಳು ಸೇವೆ ಓದಗಿಸಲು ಕ್ಷೇತ್ರದಲ್ಲಿ ಎರಡು ಕಡೆಗಳಲ್ಲಿ ಉಚಿತ ಬೆಡ್ ಸೆಂಟರ್ ಗಳನ್ನು ತೆರೆಯಲಾಗಿದೆ. ಜನರು ಬೆಡ್ ಬುಕಿಂಗ್ ಮಾಡುವ ಅಗತ್ಯವೆ ಇಲ್ಲ ಯಾವುದೇ ತೊಂದರೆ ಆದರೆ ಹಾಗೂ ಉಸಿರಾಟದ ತೊಂದರೆ ಆದರೂ ತಕ್ಷಣ ಇಲ್ಲಿಗೆ ಬಂದರೆ ಸಾಕ್ ಅವರನ್ನ ದಾಖಲಿಸಿಕೊಂಡು ತಕ್ಷಣವೇ ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಾರೆ ,ಅಥವ ರೋಗಿಗಳಿಗೆ ಕೊರೋನಾ ನೆಗಿಟಿವ್ ಇದ್ದರೆ ಅವರಿಗೆ ಪ್ರತೇಕಾ ಚಿಕಿತ್ಸೆ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ, ಕೋವಿಡ್ ಪೀಡಿತರಿಗೆ ಪ್ರಾರಂಭಿವಾಗಿ ಪ್ರಾಥಮಿಕ ಪರಿಕ್ಷೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಇದಕ್ಕಾಗಿ ಕೋರಮಂಗಲದ ಇಂಡೋ ಸ್ಟೇಡಿಯಂ ನಲ್ಲಿ 250 ಬೆಡ್ 50 ಆಕ್ಸಿಜನ್ ಬೆಡ್, ಹಾಗೂ ಆಡುಗೋಡಿಯ ಮೈಕೋ ಬಾಷ್ ಕಂಪನಿಯ ಹತ್ತಿರ 70 ಬೆಡ್ 45 ಆಕ್ಸಿಜನ್ ಬೆಡ್ ಮತ್ತು ಜನರಲ್ ಬೆಡ್ ವ್ಯವಸ್ಥೆಯನ್ನು ಮಾಡಲಾಗಿದೆ ಇದರ ಸೇವೆಗಾಗಿ ಉಚಿತ ಆಂಬ್ಯೂಲೇನ್ಸ್ ಮಾಡಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಜನರಿಗೆ ಸಹಾಯಕ್ಕಾಗಿ 9341191411 ಸಂಖ್ಯೆ ಗೆ ಕರೆ ಮಾಡಬಹುದು ಒಟ್ಟಾರೆ ಕೊರೋನಾ ನಿರ್ಮೂಲನೆಗೆ ಹಾಗೂ ಕ್ಷೇತ್ರದ ಜನರ ಆರೋಗ್ಯದ ಹಿತಕ್ಕಾಗಿ ಇನ್ನು ಹೆಚ್ಚಿನ ವ್ಯವಸ್ಥೆಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಇದನ್ನು ಕ್ಷೇತ್ರದ ಜನರು ಯಾವುದೇ ಆತಂಕಕ್ಕೆ ಒಳಗಾಗದೇ ಧೈರ್ಯವಾಗಿ ಆರೋಗ್ಯವಂತರಾಗಿ ಎಂಬುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸುದುಗುಂಟೆಪಾಳ್ಯದ ಮಾಜಿ ಬಿಬಿಎಂಪಿ ಸದಸ್ಯ ಮಂಜುನಾಥ್ ಮಾತನಾಡಿ ನಮ್ಮ ಕ್ಷೇತ್ರದಲ್ಲಿ ರಾಮಲಿಂಗಾರೆಡ್ಡಿ ರೆಡ್ಡಿ ಸಾಹೇಬರ್ ಕೋವಿಡ್ ಸಂಕಷ್ದದಲ್ಲಿ ಜನ ಸೇವೆಗೆ ನೂರಾರು ಸೇವೆ ಕಾರ್ಯಗಳನ್ನು ಮಾಡುತ್ತಿದ್ದಾರೆ ಪ್ರತಿ ವಾರ್ಡಿನಲ್ಲಿ ಜನರಿಗೆ ಬೆಡ್ ವ್ಯವಸ್ಥೆ,ಊಟದ ವ್ಯವಸ್ಥೆ ಹಾಗೂ ಆಹಾರದ ಕಿಟ್ ,ಕೋವಿಡ್ ಔಷಧಿ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು
ಇದೇ ಸಂದರ್ಭದಲ್ಲಿ ಡಾ. ಶಿವಕುಮಾರ್, ಬಿಬಿಎಂಪಿ ಜಂಟಿ ಆಯುಕ್ತರಾದ ವೀರಭದ್ರಪ್ಪ, ವೆಂಕಟೇಶ್, ಮುನಿರಾಜ್, ಬಿಟಿಎಂ ಬ್ಲಾಕ್ ಅಧ್ಯಕ್ಷ ಆನಂದ್, ಕೋರಮಂಗಲ ವಾರ್ಡ್ ಅಧ್ಯಕ್ಷ ಗೋವರ್ಧನ್, ರಾಮಚಂದ್ರಪ್ಪ, ಚಂದ್ರಪ್ಪ, ಲೋಕೇಶ್, ಮುನಿರಾಜ್, ಮನೋಹರ,ಸಂತೋಷ್, ನವೀನ್ ಕುಮಾರ್, ಶ್ರೀನಿವಾಸ್, ಇನ್ನು ಮುಂತಾದವರು ಹಾಜರಿದ್ದರು