Home ಬೆಂಗಳೂರು ನಗರ ‘ರಮೇಶ್ ಜರಾಕಿಹೊಳಿ ಯಾವುದೇ ಸಮಯದಲ್ಲಿ ನನ್ನನ್ನು ಕೊಲ್ಲಬಹುದು’

‘ರಮೇಶ್ ಜರಾಕಿಹೊಳಿ ಯಾವುದೇ ಸಮಯದಲ್ಲಿ ನನ್ನನ್ನು ಕೊಲ್ಲಬಹುದು’

245
0
ಚಿತ್ರ ಕ್ರೆಡಿಟ್: https://tv9kannada.com/

ಹೈಕೋರ್ಟ್‌ ಸಿಜೆಗೆ ಸಿ.ಡಿ ಲೇಡಿ ಪತ್ರ

‘ಡಿವೈಎಸ್ಪಿ ಕಟ್ಟೀಮನಿ ನಮ್ಮ ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದಾರೆ.’

‘ಎಸ್‌ಐಟಿ ಅಧಿಕಾರಿಗಳು ಜಾರಕಿಹೊಳಿ ಜತೆ ಸೇರಿ ಬೆದರಿಕೆ ಹಾಕಿದ್ದಾರೆ’

ಬೆಂಗಳೂರು:

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ನಮ್ಮ ಪೋಷಕರಿಂದ ಒತ್ತಡ ಹಾಕಿ ನನ್ನನ್ನ ಕಿಡ್ನ್ಯಾಪ್ ಮಾಡಿಸಿರುವುದಾಗಿ ಹೇಳಿಕೆ ನೀಡಿಸಿದ್ದಾರೆ. ಡಿವೈಎಸ್ಪಿ ಕಟ್ಟೀಮನಿ ನಮ್ಮ ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಕಟ್ಟೀಮನಿ ರಮೇಶ್ ಜಾರಕಿಹೊಳಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯವು ನನ್ನ ಮನವಿಯನ್ನ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಬೇಕು ಎಂದು ಯುವತಿ ಉಲ್ಲೇಖಿಸಿದ್ದಾರೆ.

Screenshot 51
Screenshot 52
Screenshot 53

ಯುವತಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಇ ಮೇಲ್ ಮೂಲಕ ಪತ್ರ ಕಳಿಸಿದ್ದಾರೆ. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್‌ಐಟಿ ತನಿಖೆಯಾಗಬೇಕು. ನನ್ನ ತಂದೆ ತಾಯಿಯಿಂದ ಬಲವಂತವಾಗಿ ಹೇಳಿಕೆ ಕೊಡಿಸಿಕೊಳ್ಳಲಾಗಿದೆ. ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ನನ್ನ ಪೋಷಕರಿಗೆ ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಕೇಸ್ನಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು ಅಂತಾ ಪತ್ರದಲ್ಲಿ ಸಿಡಿ ಲೇಡಿ ಮನವಿ ಮಾಡಿಕೊಂಡಿದ್ದಾರೆ.

ಎಸ್ಐಟಿ, ರಮೇಶ್ ಜಾರಕಿಹೊಳಿ ಹೇಳಿದಂತೆ ಕಾರ್ಯನಿರ್ವಹಿಸ್ತಿದೆ. ಕರ್ನಾಟಕ ಸರ್ಕಾರವೂ ಸಹ ರಮೇಶ್‌ರನ್ನು ರಕ್ಷಣೆ ಮಾಡ್ತಿದೆ. ಎಸ್‌ಐಟಿ ಹಾಗೂ ಸರ್ಕಾರದ ಮೇಲೆ ನನಗೆ ನಂಬಿಕೆಯಿಲ್ಲ ಎಂದು ಸಿಡಿ ಲೇಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಡಿವೈಎಸ್ಪಿ ಕಟ್ಟೀಮನಿ ನಮ್ಮ ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಮ್ಮ ಪೋಷಕರಿಂದ ಒತ್ತಡ ಹಾಕಿ ನನ್ನನ್ನ ಕಿಡ್ನ್ಯಾಪ್ ಮಾಡಿಸಿರುವುದಾಗಿ ಹೇಳಿಕೆ ನೀಡಿಸಿದ್ದಾರೆ. ಡಿವೈಎಸ್ಪಿ ಕಟ್ಟೀಮನಿ ನಮ್ಮ ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಕಟ್ಟೀಮನಿ ರಮೇಶ್ ಜಾರಕಿಹೊಳಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯವು ನನ್ನ ಮನವಿಯನ್ನ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಬೇಕು. ನನಗೆ ಜೀವಭಯ ಹಿನ್ನೆಲೆ ರಕ್ಷಣೆ ನೀಡುವಂತೆ ಸಿಡಿ ಲೇಡಿ ಮನವಿ ಮಾಡಿಕೊಂಡಿದ್ದಾಳೆ.

LEAVE A REPLY

Please enter your comment!
Please enter your name here