ಬೆಂಗಳೂರು:
ಅಕ್ರಮವಾಗಿ ರಕ್ತಚಂದನ ವಶಕ್ಕೆ ಯತ್ನಿಸಿದ್ದ ಮೂವರನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ವುಡ್ ಫರ್ನಿಚರ್ ಎಂದು ಹೇಳಿ ಅಧಿಕಾರಿಗಳ ಕಣ್ತಪ್ಪಿಸಲು ಆರೋಪಿಗಳು ಯತ್ನ ನಡೆಸಿದ್ದರು.
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4.82 ಟನ್ ರಕ್ತಚಂದನ ಸೀಜ್ ಮಾಡಲಾಗಿದೆ.
ಪ್ಲೈವುಡ್ ಶೀಟ್ಗಳಲ್ಲಿ ಪ್ಯಾಕ್ ಮಾಡಿ ಅನುಮಾನ ಬಾರದಂತೆ ರವಾನೆಗೆ ಆರೋಪಿಗಳು ಯತ್ನಿಸಿದ್ದರು. ವುಡ್ ಫರ್ನಿಚರ್ ಎಂದು ಹೇಳಿ ಅಕ್ರಮ ಸಾಗಾಟಕ್ಕೆ ಪ್ರಯತ್ನಪಟ್ಟಿದ್ದರು.
Kudos to Customs officers @ ICD-whitefields for detecting Red Sanders (4.82 Tons:Rs. 2.4 Cr) concealed in plywood boxes, an export consignment declared as “Furniture” bound for Taiwan. Three persons, including the mastermind,were arrested. Investigation- in progress. @cbic_india pic.twitter.com/WyUyBq0AMe
— Bengaluru Customs (@blrcustoms) February 20, 2022
ಐಸಿಡಿ-ವೈಟ್ಫೀಲ್ಡ್ನ ಕಸ್ಟಮ್ಸ್ ಅಧಿಕಾರಿಗಳು, ಪ್ಲೈವುಡ್ ಬಾಕ್ಸ್ಗಳಲ್ಲಿ ಬಚ್ಚಿಟ್ಟು ತೈವಾನ್ಗೆ ರಫ್ತು ಮಾಡಲು “ಫರ್ನಿಚರ್” ಎಂದು ಘೋಷಿಸಲಾಗಿದ ರಕ್ತ ಚಂದನವನ್ನು(ತೂಕ 4.82 ಟನ್ಗಳು,ರೂ. 2.4 ಕೋಟಿ ಮೌಲ್ಯ)ಪತ್ತೆ ಮಾಡಿದ್ದಾರೆ.ಭಾಗಿಯಾಗಿರುವ ಪ್ರಮುಖ ವ್ಯಕ್ತಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.ತನಿಖೆ ಪ್ರಗತಿಯಲ್ಲಿದೆ.@cbic_india https://t.co/k2iPGKUtml
— Bengaluru Customs (@blrcustoms) February 20, 2022
ಬೆಂಗಳೂರಿನಿಂದ ತೈವಾನ್ಗೆ ವೈಟ್ ಫಿಲ್ಡ್ ಬಳಿಯ ಕಾರ್ಗೋ ಮೂಲಕ ಸಾಗಾಟ ಮಾಡಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾರೆ.