Home ಚಿಕ್ಕಬಳ್ಳಾಪುರ ಟ್ರೆಕಿಂಗ್​ಗೆ ಬಂದು ದುರ್ಗಮ ಕಮರಿಗೆ ಜಾರಿಬಿದ್ದ ಯುವಕ: ರಕ್ಷಣೆಗೆ ಬಂತು ವಾಯುಪಡೆ ಹೆಲಿಕಾಪ್ಟರ್

ಟ್ರೆಕಿಂಗ್​ಗೆ ಬಂದು ದುರ್ಗಮ ಕಮರಿಗೆ ಜಾರಿಬಿದ್ದ ಯುವಕ: ರಕ್ಷಣೆಗೆ ಬಂತು ವಾಯುಪಡೆ ಹೆಲಿಕಾಪ್ಟರ್

131
0
Delhi man Nishant Gulla came to trek at Nandi Hills slipped and fells down; Air Force helicopter came for rescue
Advertisement
bengaluru

ಚಿಕ್ಕಬಳ್ಳಾಪುರ:

ಟ್ರಕ್ಕಿಂಗ್​ಗೆ ಎಂದು ಬಂದಿದ್ದ ಯುವಕ ದುರ್ಗಮ ಪ್ರದೇಶಕ್ಕೆ ಜಾರಿ‌ ಬಿದ್ದ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನ ಬ್ರಹ್ಮಗಿರಿ ಬೆಟ್ಟದಲ್ಲಿ ನಡೆದಿದೆ.

ಯುವಕನನ್ನು ನಿಶಾಂತ್ ಗುಲ್ಲಾ ಎಂದು ಗುರುತಿಸಲಾಗಿದೆ. ಪ್ರಾಣರಕ್ಷಣೆಗೆ ಮೊರೆ ಇಡುತ್ತಿದ್ದ ನಿಶಾಂತ್ ಅವರನ್ನು ವಾಯುಪಡೆ ಹೆಲಿಕಾಪ್ಟರ್‌ ಸಹಾಯದಿಂದ ರಕ್ಷಿಸಲಾಯಿತು. ಹೆಲಿಕಾಪ್ಟರ್​ನಿಂದ ಹಗ್ಗ ಬಿಟ್ಟು ಯುವಕನನ್ನು ಮೇಲೆತ್ತಲು ಪ್ರಯತ್ನಿಸಲಾಯಿತು.

Delhi man Nishant Gulla came to trek at Nandi Hills slipped and fells down; Air Force helicopter came for rescue

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಉಸ್ತುವಾರಿ ವಹಿಸಿದ್ದರು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

bengaluru bengaluru

ನಂದಿಗಿರಿಧಾಮದ ಬಳಿ ಟ್ರಕ್ಕಿಂಗ್ ವೇಳೆ ಯುವಕ ಕಾಲುಜಾರಿ ಕಮರಿಗೆ ಬಿದ್ದಿದ್ದ ಯುವಕ ಎಲ್ಲಿದ್ದಾನೆ ಎನ್ನುವುದನ್ನು ನಿರ್ದಿಷ್ಟವಾಗಿ ಪತ್ತೆಹಚ್ಚಲಾಗಿದ್ದು ಹೆಲಿಕಾಪ್ಟರ್​ನಿಂದ ಹಗ್ಗ ಬಿಟ್ಟು ಮೇಲೆ ಎತ್ತಲು ಅಧಿಕಾರಿಗಳು ಚಿಂತನೆ ನಡೆಸಿದರು. ಕೊನಗೆ ಹಗ್ಗದ ಸಹಾಯದಿಂದ ನಿಶಾಂತ್ ಗುಲ್ಲಾ ಸಿಬ್ಬಂದಿ ಮೇಲಕ್ಕೆ ಎತ್ತಿದರು.

ಟ್ರಕಿಂಗ್​ಗೆ ಕಡಿವಾಣ: ಮಿಥುನ್ ಕುಮಾರ್

ಟ್ರಕಿಂಗ್ ಮಾಡಲೆಂದು ನಂದಿಬೆಟ್ಟಕ್ಕೆ ಜನರು ಬರುತ್ತಿರುತ್ತಾರೆ. ಅಂಥವರಿಗೆ ಮುಂದಿನ ದಿನಗಳಲ್ಲಿ ಕಡಿವಾಣ ಹಾಕುತ್ತೇವೆ. ದೆಹಲಿ ಮೂಲದ ನಿಶಾಂತ್ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ನಾನು ಒಬ್ಬನೇ ಟ್ರಕ್ಕಿಂಗ್​ಗೆ ಬಂದಿದ್ದೆ ಎಂದು ಮಾಹಿತಿ ನೀಡಿದ್ದಾನೆ. ಸುಮಾರು 200 ಅಡಿ ಕೆಳಗೆ ಬಿದ್ದಿದ್ದ ನಿಶಾಂತ್​ನನ್ನು ರಕ್ಷಿಸಿದ್ದೇವೆ ಎಂದು ಚಿಕ್ಕಬಳ್ಳಾಪುರದ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್​ ಹೇಳಿದರು.


bengaluru

LEAVE A REPLY

Please enter your comment!
Please enter your name here