Home ಆರೋಗ್ಯ ರೆಮ್ಡೆಸಿವಿರ್ ಬೆಲೆ ಇಳಿಕೆ: ಸದಾನಂದ ಗೌಡ

ರೆಮ್ಡೆಸಿವಿರ್ ಬೆಲೆ ಇಳಿಕೆ: ಸದಾನಂದ ಗೌಡ

72
0
Advertisement
bengaluru

ಬೆಂಗಳೂರು:

ಕೇಂದ್ರ ಸರ್ಕಾರದ ಮಧ್ಯ ಪ್ರವೇಶದಿಂದ ಕೊರೊನಾ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ರೆಮ್ಡೆಸಿವಿರ್ ಚುಚ್ಚುಮದ್ದು ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂಪಾಯಿಂದ 899 ರೂಪಾಯಿಗೆ ಇಳಿಸಿದೆ. ಬೇರೆ ಬೇರೆ ಕಂಪನಿಗಳ ವಿವಿಧ ಬ್ರಾಂಡಿನ ರೆಮ್ಡೆಸಿವಿರ್ ಬೆಲೆ ಈ ಮುಂದಿನಂತಿದೆ. ಡಾ ರೆಡ್ಡೀಸ್ ಕಂಪನಿಯ ರೆಡಿಕ್ಸ್ – ರೂ 2700 (ಈ ಮುಂಚಿನ ಬೆಲೆ ರೂ 5400); ಸಿಂಜಿನ್ (ಬಯೊಕಾನ್) ಕಂಪನಿಯ ರೆಮ್ವಿನ್ ರೂ 2450 (ರೂ 3950); ಸಿಪ್ಲಾ ಕಂಪನಿಯ ಸಿಪ್ರೆಮಿ ರೂ 3000 (ರೂ 4000); ಮಿಲನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಡೆಸ್ರೆಮ್ ರೂ 3400 (ರೂ 4800); ಜ್ಯುಬಿಲೆಂಟ್ ಜೆನರಿಕ್ಸ್ ಕಂಪನಿಯ ಜ್ಯುಬಿ-ಆರ್ ರೂ 3400 (ರೂ 4700) ಹಾಗೂ ಹೆಥೆರೋ ಹೆಲ್ತ್ಕೇರ್ ಕಂಪನಿಯ ಕೊವಿಫೊರ್ ರೂ 3490 (ರೂ 5400).

ಇಂದು ಇಲ್ಲಿ ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಬೆಲೆ ಇಳಿಸಿರುವ ಫಾರ್ಮಾ ಕಂಪನಿಗಳಿಗೆ ಧನ್ಯವಾದ ಅರ್ಪಿಸಿದರು. ರೆಮ್ಡೆಸಿವಿರ್ ಬೆಲೆ ಇಳಿಕೆಯಿಂದ ಬಳಕೆದಾರರಿಗೆ ಕನಿಷ್ಠವೆಂದರೂ 750 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದರು.

bengaluru bengaluru

ಅದೇ ರೀತಿ ರೆಮ್ಡೆಸಿವಿರ್ ಮಾಸಿಕ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲು ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ. ಅಮೆರಿಕದ ಗಿಲೀಡ್ ಸೈಯನ್ಸಸ್ (Gilead Sciences) ಕಂಪನಿಯು ರೆಮ್ಡೆಸಿವಿರ್ ಚುಚ್ಚುಮದ್ದಿನ ಪೆಟೆಂಟ್ ಹೊಂದಿದ್ದು ಭಾರತದ ಏಳು ಫಾರ್ಮಾ ಕಂಪನಿಗಳು ಉತ್ಪಾದನಾ ಲೈಸನ್ಸ್ ಪಡೆದಿವೆ. ಅವುಗಳ ಈಗಿನ ಸ್ಥಾಪಿತ ಉತ್ಪಾದನಾ ಸಾಮರ್ಥ್ಯ 38.8 ಲಕ್ಷ ವೈಯಲ್ಸ್ (ಬಾಟಲಿ). ಹೆಚ್ಚುವರಿಯಾಗಿ 35.3 ಲಕ್ಷ ವೈಯಲ್ಸ್ ಉತ್ಪಾದಿಸಲು ಅನುಮತಿ ನೀಡಲಾಗಿದೆ. ಇದರಿಂದ ಮಾಸಿಕ ರೆಮ್ಡೆಸಿವಿರ್ ಉತ್ಪಾದನೆ 74.1 ಲಕ್ಷ ವೈಯಲ್ಸಿಗೆ ಏರಿಕೆಯಾಗಲಿದೆ. ಸದ್ಯ ಪ್ರತಿದಿನ ಅಂದಾಜು 1.35 ಲಕ್ಷ ವೈಯಲ್ಸ್ ರೆಮ್ಡೆಸಿವಿರ್ ಉತ್ಪಾದನೆಯಾಗುತ್ತಿದೆ. ರೆಮ್ಡೆಸಿವಿರ್ ರಫ್ತು ನಿಷೇಧಿಸಿರುವುದರಿಂದ ಹೆಚ್ಚುವರಿಯಾಗಿ ಸುಮಾರು 4 ಲಕ್ಷ ವೈಯಲ್ಸ್ ರೆಮ್ಡೆಸಿವಿರ್ ಆಂತರಿಕ ಬಳಕೆಗೆ ಲಭ್ಯವಿದೆ. ಇನ್ನೊಂದು ವಾರೊಪ್ಪತ್ತಿನಲ್ಲಿಯೇ ಬೇಡಿಕೆ ಹಾಗೂ ಪೂರೈಕೆಯಲ್ಲಿ ಸಮತೋಲನ ಕಂಡುಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


bengaluru

LEAVE A REPLY

Please enter your comment!
Please enter your name here