Home ಬೆಂಗಳೂರು ನಗರ ಖ್ಯಾತ ವಿಜ್ಞಾನಿ ಪದ್ಮವಿಭೂಷಣ ಪ್ರೊ.ರೊದ್ದಂ ನರಸಿಂಹ ನಿಧನ

ಖ್ಯಾತ ವಿಜ್ಞಾನಿ ಪದ್ಮವಿಭೂಷಣ ಪ್ರೊ.ರೊದ್ದಂ ನರಸಿಂಹ ನಿಧನ

53
0
Advertisement
bengaluru

ಬೆಂಗಳೂರು:

ಹಿರಿಯ ಬಾಹ್ಯಾಕಾಶ ವಿಜ್ಞಾನಿ ಪದ್ಮ ವಿಭೂಷಣ ಪುರಸ್ಕೃತ ಪ್ರೊ.ರೊದ್ದಂ ನರಸಿಂಹ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

ಅವರಿಗೆ 87 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ಖ್ಯಾತ ವಿಜ್ಞಾನಿ, ಅಲ್ಪ ಕಾಲದ ಅನಾರೋಗ್ಯದ ನಂತರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

bengaluru bengaluru

ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್ ಎಎಲ್) ನ ಮಾಜಿ ನಿರ್ದೇಶಕರಾಗಿದ್ದ ನರಸಿಂಹ, ಲಘು ಯುದ್ಧ ವಿಮಾನ –ಎಲ್ ಸಿಎ ತೇಜಸ್ ಯುದ್ಧ ವಿಮಾನದ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ನೀಡಿದ್ದರು.

ಪ್ರೊಫೆಸರ್ ರೊದ್ದಂ, 2013 ರಲ್ಲಿ ರಾಷ್ಟ್ರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣಕ್ಕೆ ಭಾಜನರಾಗಿದ್ದರು. ಪ್ರತಿಷ್ಠಿತ ಭಟ್ನಾಗರ್ ಪ್ರಶಸ್ತಿ ಮತ್ತು 2008 ರ ಟ್ರೈಸ್ಟೆ ಸೈನ್ಸ್ ಬಹುಮಾನವನ್ನೂ ಪಡೆದಿದ್ದರು.

ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ, ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅನೇಕ ಗಣ್ಯರು ವಿಜ್ಞಾನಿ ಪ್ರೊಫೆಸರ್ ರೊಡ್ಡಮ್ ನರಸಿಂಹ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು. UNI


bengaluru

LEAVE A REPLY

Please enter your comment!
Please enter your name here