Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಹಳಕಟ್ಟಿ ಪ್ರತಿಷ್ಠಾನದಿಂದ ‘ಶಿವಾನುಭವ’ದ ಸಂಚಿಕೆಗಳ ಮರುಮುದ್ರಣ: ಎಂ ಬಿ ಪಾಟೀಲ
  • ಬೆಂಗಳೂರು ನಗರ

ಹಳಕಟ್ಟಿ ಪ್ರತಿಷ್ಠಾನದಿಂದ ‘ಶಿವಾನುಭವ’ದ ಸಂಚಿಕೆಗಳ ಮರುಮುದ್ರಣ: ಎಂ ಬಿ ಪಾಟೀಲ

Vighnesh Pawar July 2, 2023 9:45 PM 1 minute read
Reprint of episodes of 'Shivanubhava' by Halakatti Foundation: MB Patil

Reprint of episodes of 'Shivanubhava' by Halakatti Foundation: MB Patil

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಫೌಂಡೇಶನ್‌ ವತಿಯಿಂದ ಅವರ ‘ಶಿವಾನುಭವ’ ಪತ್ರಿಕೆಗಳನ್ನು ಮರುಮುದ್ರಣ ಮಾಡಿ, ಆ ಮಹನೀಯರ ಸಾಧನೆಗಳನ್ನು ಮತ್ತೊಮ್ಮೆ ಜನರಿಗೆ ತಲುಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಭಾನುವಾರ ಇಲ್ಲಿ ಏರ್ಪಡಿಸಿದ್ದ ‘ಫ.ಗು.ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕವಿ ಎಸ್‌ ಜಿ ಸಿದ್ದರಾಮಯ್ಯ, ನಿರಂಜನಾರಾಧ್ಯ ಮತ್ತು ಸಮಾಜಸೇವಕಿ ಎಚ್‌ ಜಿ ಸುಶೀಲಮ್ಮ ಅವರಿಗೆ ತಲಾ 1 ಲಕ್ಷ ರೂ. ನಗದು ಸಹಿತ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ‌ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ವಿಜಯಪುರದ ಬಿಎಲ್‌ಡಿಇ ಸಂಸ್ಥೆಯನ್ನು ಕಟ್ಟಿದವರೇ ಹಳಕಟ್ಟಿಯವರು. ಈಗ ಅಲ್ಲಿ ಅವರ ಸ್ಮರಣಾರ್ಥವಾಗಿ ಪ್ರತಿಷ್ಠಾನವಿದೆ. ಅದರಿಂದ ಇಲ್ಲಿಯವರೆಗೂ ವಚನ ಸಾಹಿತ್ಯದ 10 ಸಂಪುಟಗಳು, ಆದಿಲ್‌ಶಾಹಿ ಸಾಹಿತ್ಯ, ಎಂ.ಎಂ.ಕಲ್ಬುರ್ಗಿಯವರ ಸಮಗ್ರ ಸಾಹಿತ್ಯದ 40 ಸಂಪುಟಗಳು ಹೊರಬಂದಿವೆ. ಸದ್ಯದಲ್ಲೇ ದಾಸ ಸಾಹಿತ್ಯ ಸಂಪುಟಗಳು ಹೊರಬರಲಿವೆ. ಇವುಗಳ ಜತೆಗೆ ಸರಕಾರದ ನೆರವಿನಿಂದ ಹಳಕಟ್ಟಿಯವರು ಹೊರತರುತ್ತಿದ್ದ ಪತ್ರಿಕೆಗಳನ್ನು ಮರುಮುದ್ರಣ ಮಾಡಲಾಗುವುದು. ಒಂದು ವೇಳೆ ನೆರವು ಸಿಗದಿದ್ದರೆ ಬಿಎಲ್ ಡಿಇ ಸಂಸ್ಥೆಯಿಂದಲೇ ಮಾಡಲಾಗುಬುದು” ಎಂದರು.

ಹಳಕಟ್ಟಿಯವರು ವಚನ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಸಂಪಾದಿಸಿ ಕನ್ನಡ ಜನತೆಗೆ ನೀಡಿದರು. ಇದರ ಜತೆಗೆ ಅವರು ಶಿಕ್ಷಣ, ಸಹಕಾರ, ಸಾರ್ವಜನಿಕ ಸೇವೆಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಇಂದು ರಾಜ್ಯದೆಲ್ಲೆಡೆ ಹೆಸರಾಗಿರುವ ಶ್ರೀ ಸಿದ್ಧೇಶ್ವರ ಅರ್ಬನ್‌ ಕೋಆಪರೇಟೀವ್ ಬ್ಯಾಂಕಿನ ಸ್ಥಾಪನೆ ಅವರ ಸಾಹಸವಾಗಿದೆ. ಜತೆಗೆ ವಿಜಯಪುರ ನಗರಕ್ಕೆ ಕುಡಿಯುವ ನೀರನ್ನು ಒದಗಿಸುವ ಭೂತನಾಳ ಕೆರೆಯ ಶಿಲ್ಪಿ ಕೂಡ ಅವರೇ ಆಗಿದ್ದಾರೆ ಎಂದು ಅವರು ಸ್ಮರಿಸಿಕೊಂಡರು.

ಹಳಕಟ್ಟಿಯವರ ಹೆಸರು ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗಿ ಇರಲಿದೆ. ಅವರ ಸಾಧನೆಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಬಿಎಲ್‌ಡಿಇ ಸಂಸ್ಥೆ ಮಾಡುತ್ತಿದೆ. ಇದನ್ನು ಮುಂಬರುವ ದಿನಗಳಲ್ಲಿ ಮತ್ತಷ್ಟು ವ್ಯಾಪಕವಾಗಿ ಮಾಡಲಾಗುವುದು ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಶೀಲಾ ಹಳಕಟ್ಟಿ, ಪವಿತ್ರಾ ಹಳಕಟ್ಟಿ, ಮನು ಬಳಿಗಾರ್ ಉಪಸ್ಥಿತರಿದ್ದರು.

About the Author

Vighnesh Pawar

Subscriber

View All Posts

Post navigation

Previous: ಸುಭದ್ರ ಸರ್ಕಾರ, ಸಮೃದ್ಧ ಕರ್ನಾಟಕವೇ ನಮ್ಮ ಗುರಿ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
Next: ಮರಾಠ ಸಮಾಜ ನನ್ನನ್ನು ಮನೆ ಮಗಳಂತೆ ಕಂಡಿದೆ — ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Related Stories

ಪತ್ರಿಕಾಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನ ಐದು ನಗರ ಪಾಲಿಕೆಗಳ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸಾಪ್‌ನಲ್ಲಿ ಉಚಿತ ಇ-ಖಾತಾ ವಿತರಣೆ: ಜಿಬಿಎ

The Bengaluru Live November 17, 2026 8:24 PM
ಪತ್ರಿಕಾಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಜಕ್ಕೂರು ರೈಲ್ವೆ ಮೇಲ್ಸೇತುವೆ, ಗೆದ್ದಲಹಳ್ಳಿ ರೈಲ್ವೆ ವೆಂಟ್ ಉದ್ಘಾಟನೆ; ₹436 ಕೋಟಿ ವೆಚ್ಚದ ಐಓಸಿ ಜಂಕ್ಷನ್ ರೋಟರಿ ಮೇಲ್ಸೇತುವೆಗೆ ನ.18ರಂದು ಶಂಕುಸ್ಥಾಪನೆ

The Bengaluru Live November 17, 2026 8:21 PM
ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿಯ ಕಮಾನು ಪ್ರವೇಶದ್ವಾರ
  • ಬೆಂಗಳೂರು ನಗರ

ತಲಘಟ್ಟಪುರ ಕೆರೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ಬಗ್ಗೆ ಲೋಕಾಯುಕ್ತ ಅಸಮಾಧಾನ; ದಕ್ಷಿಣ ನಗರ ಪಾಲಿಕೆಗೆ ಮತ್ತೊಂದು ಅವಕಾಶ

The Bengaluru Live November 17, 2026 6:07 PM

Latest Post

ಕರ್ನಾಟಕ ಹವಾಮಾನ: ನವೆಂಬರ್ 24ರವರೆಗೆ ಮೂರು ವಿಭಾಗಗಳಿಗೂ ಎಚ್ಚರಿಕೆ ಇಲ್ಲ ಎಂದ IMD ಪಟ್ಟಿಕೆ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ನವೆಂಬರ್ 24ರವರೆಗೆ ಮೂರು ವಿಭಾಗಗಳಿಗೂ ಎಚ್ಚರಿಕೆ ಇಲ್ಲ ಎಂದ IMD ಪಟ್ಟಿಕೆ

November 18, 2026 5:12 AM
ಒಳಮೀಸಲಾತಿ ಅನುಷ್ಠಾನವಾಗಿದೆ, ವ್ಯಾಜ್ಯ ಬಗೆಹರಿದಿದೆ: ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ; ನವೆಂಬರ್ 26ರ ಮೈಸೂರು ಸಂವಿಧಾನ ದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕರೆ ಬೆಂಗಳೂರಿನಲ್ಲಿ ಗೋಲ್ಡನ್ ಅಂಬೇಡ್ಕರ್ ಫೌಂಡೇಷನ್ ಸನ್ಮಾನ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿರುವವರು
  • ಕರ್ನಾಟಕ

ಒಳಮೀಸಲಾತಿ ಅನುಷ್ಠಾನವಾಗಿದೆ, ವ್ಯಾಜ್ಯ ಬಗೆಹರಿದಿದೆ: ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ; ನವೆಂಬರ್ 26ರ ಮೈಸೂರು ಸಂವಿಧಾನ ದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕರೆ

November 17, 2026 11:59 PM
ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರೊಂದಿಗೆ ಜಿಲ್ಲಾವಾರು ಕಾರ್ಯಕ್ರಮ ಪರಿಶೀಲಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್: ನಿಗದಿತ ಸಮಯದಲ್ಲಿ ಅನುಷ್ಠಾನಕ್ಕೆ ಸೂಚನೆ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿರುವ ಆರೋಗ್ಯ ಸಚಿವರು
  • ಕರ್ನಾಟಕ

ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರೊಂದಿಗೆ ಜಿಲ್ಲಾವಾರು ಕಾರ್ಯಕ್ರಮ ಪರಿಶೀಲಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್: ನಿಗದಿತ ಸಮಯದಲ್ಲಿ ಅನುಷ್ಠಾನಕ್ಕೆ ಸೂಚನೆ

November 17, 2026 11:02 PM
ಬೈಕಂಪಾಡಿಯ ಬೋಲಾಸ್ ಆಗ್ರೋದಿಂದ 1,240 ಕೆ.ಜಿ ಅಡುಗೆ ಎಣ್ಣೆ ವಶ: ಹಸಿ ಕಡಲೆಕಾಯಿ ಎಣ್ಣೆಯನ್ನು ‘ಕೋಲ್ಡ್ ಪ್ರೆಸ್ಡ್’ ಎಂದು ಮರುಪ್ಯಾಕ್ ಬೈಕಂಪಾಡಿಯ ಸಂಗ್ರಹಾಗಾರದಲ್ಲಿ ವಶಪಡಿಸಿಕೊಂಡ ಅಡುಗೆ ಎಣ್ಣೆಯ ಕ್ಯಾನ್‌ಗಳ ರಾಶಿ
  • ಕರ್ನಾಟಕ

ಬೈಕಂಪಾಡಿಯ ಬೋಲಾಸ್ ಆಗ್ರೋದಿಂದ 1,240 ಕೆ.ಜಿ ಅಡುಗೆ ಎಣ್ಣೆ ವಶ: ಹಸಿ ಕಡಲೆಕಾಯಿ ಎಣ್ಣೆಯನ್ನು ‘ಕೋಲ್ಡ್ ಪ್ರೆಸ್ಡ್’ ಎಂದು ಮರುಪ್ಯಾಕ್

November 17, 2026 11:02 PM
ಕರ್ನಾಟಕ ಇಸ್ರೇಲ್ ಸಹಭಾಗಿತ್ವ: ಕ್ವಾಂಟಮ್, ಜಲ ನಿರ್ವಹಣೆ ಸಂಶೋಧನೆಗೆ ಆಸಕ್ತಿ; ಕ್ವಾಂಟಮ್ ಸಿಟಿ, ಕ್ವಾಂಟಮ್ ಇಂಡಿಯಾ ಬೆಂಗಳೂರು 2027ಕ್ಕೆ ಇಸ್ರೇಲ್ ಕಂಪನಿಗಳಿಗೆ ಆಹ್ವಾನ ಬೆಂಗಳೂರು ಟೆಕ್ ಸಮ್ಮಿಟ್ 2026ರ ಮಳಿಗೆಯಲ್ಲಿ ಕರ್ನಾಟಕದ ಅಧಿಕಾರಿಗಳು ಮತ್ತು ಇಸ್ರೇಲ್ ಪ್ರತಿನಿಧಿಗಳ ಗುಂಪು ಚಿತ್ರ
  • ಕರ್ನಾಟಕ

ಕರ್ನಾಟಕ ಇಸ್ರೇಲ್ ಸಹಭಾಗಿತ್ವ: ಕ್ವಾಂಟಮ್, ಜಲ ನಿರ್ವಹಣೆ ಸಂಶೋಧನೆಗೆ ಆಸಕ್ತಿ; ಕ್ವಾಂಟಮ್ ಸಿಟಿ, ಕ್ವಾಂಟಮ್ ಇಂಡಿಯಾ ಬೆಂಗಳೂರು 2027ಕ್ಕೆ ಇಸ್ರೇಲ್ ಕಂಪನಿಗಳಿಗೆ ಆಹ್ವಾನ

November 17, 2026 10:57 PM
ಬೆಳಗಾವಿ ಲೋಕಾಯುಕ್ತ ಬಲೆಗೆ ಸಹಾಯಕ ಆಯುಕ್ತರ ಕಚೇರಿ ಗುಮಾಸ್ತ ಪದ್ಮಾಕರ ಪಾಟೀಲ: ಕಾನೂನು ವಿದ್ಯಾರ್ಥಿಯಿಂದ ₹2,000 ಲಂಚ ಸ್ವೀಕಾರ, 38 ಪ್ರಕರಣಗಳಿಗೆ ₹30,000 ಬೇಡಿಕೆ ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿಯ ಕಮಾನು ಪ್ರವೇಶದ್ವಾರ
  • ಕರ್ನಾಟಕ

ಬೆಳಗಾವಿ ಲೋಕಾಯುಕ್ತ ಬಲೆಗೆ ಸಹಾಯಕ ಆಯುಕ್ತರ ಕಚೇರಿ ಗುಮಾಸ್ತ ಪದ್ಮಾಕರ ಪಾಟೀಲ: ಕಾನೂನು ವಿದ್ಯಾರ್ಥಿಯಿಂದ ₹2,000 ಲಂಚ ಸ್ವೀಕಾರ, 38 ಪ್ರಕರಣಗಳಿಗೆ ₹30,000 ಬೇಡಿಕೆ

November 17, 2026 10:49 PM

ನೀವು ತಪ್ಪಿಸಿಕೊಂಡಿರಬಹುದು

ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ನವೆಂಬರ್ 24ರವರೆಗೆ ಮೂರು ವಿಭಾಗಗಳಿಗೂ ಎಚ್ಚರಿಕೆ ಇಲ್ಲ ಎಂದ IMD ಪಟ್ಟಿಕೆ

The Bengaluru Live November 18, 2026 5:12 AM
ಬೆಂಗಳೂರಿನಲ್ಲಿ ಗೋಲ್ಡನ್ ಅಂಬೇಡ್ಕರ್ ಫೌಂಡೇಷನ್ ಸನ್ಮಾನ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿರುವವರು
  • ಕರ್ನಾಟಕ

ಒಳಮೀಸಲಾತಿ ಅನುಷ್ಠಾನವಾಗಿದೆ, ವ್ಯಾಜ್ಯ ಬಗೆಹರಿದಿದೆ: ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ; ನವೆಂಬರ್ 26ರ ಮೈಸೂರು ಸಂವಿಧಾನ ದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕರೆ

The Bengaluru Live November 17, 2026 11:59 PM
ಬೆಂಗಳೂರಿನ ಆರೋಗ್ಯ ಸೌಧದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿರುವ ಆರೋಗ್ಯ ಸಚಿವರು
  • ಕರ್ನಾಟಕ

ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರೊಂದಿಗೆ ಜಿಲ್ಲಾವಾರು ಕಾರ್ಯಕ್ರಮ ಪರಿಶೀಲಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್: ನಿಗದಿತ ಸಮಯದಲ್ಲಿ ಅನುಷ್ಠಾನಕ್ಕೆ ಸೂಚನೆ

The Bengaluru Live November 17, 2026 11:02 PM
ಬೈಕಂಪಾಡಿಯ ಸಂಗ್ರಹಾಗಾರದಲ್ಲಿ ವಶಪಡಿಸಿಕೊಂಡ ಅಡುಗೆ ಎಣ್ಣೆಯ ಕ್ಯಾನ್‌ಗಳ ರಾಶಿ
  • ಕರ್ನಾಟಕ

ಬೈಕಂಪಾಡಿಯ ಬೋಲಾಸ್ ಆಗ್ರೋದಿಂದ 1,240 ಕೆ.ಜಿ ಅಡುಗೆ ಎಣ್ಣೆ ವಶ: ಹಸಿ ಕಡಲೆಕಾಯಿ ಎಣ್ಣೆಯನ್ನು ‘ಕೋಲ್ಡ್ ಪ್ರೆಸ್ಡ್’ ಎಂದು ಮರುಪ್ಯಾಕ್

The Bengaluru Live November 17, 2026 11:02 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕರ್ನಾಟಕ ಹವಾಮಾನ: ನವೆಂಬರ್ 24ರವರೆಗೆ ಮೂರು ವಿಭಾಗಗಳಿಗೂ ಎಚ್ಚರಿಕೆ ಇಲ್ಲ ಎಂದ IMD ಪಟ್ಟಿಕೆ
  • ಒಳಮೀಸಲಾತಿ ಅನುಷ್ಠಾನವಾಗಿದೆ, ವ್ಯಾಜ್ಯ ಬಗೆಹರಿದಿದೆ: ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ; ನವೆಂಬರ್ 26ರ ಮೈಸೂರು ಸಂವಿಧಾನ ದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕರೆ
  • ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರೊಂದಿಗೆ ಜಿಲ್ಲಾವಾರು ಕಾರ್ಯಕ್ರಮ ಪರಿಶೀಲಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್: ನಿಗದಿತ ಸಮಯದಲ್ಲಿ ಅನುಷ್ಠಾನಕ್ಕೆ ಸೂಚನೆ
  • ಬೈಕಂಪಾಡಿಯ ಬೋಲಾಸ್ ಆಗ್ರೋದಿಂದ 1,240 ಕೆ.ಜಿ ಅಡುಗೆ ಎಣ್ಣೆ ವಶ: ಹಸಿ ಕಡಲೆಕಾಯಿ ಎಣ್ಣೆಯನ್ನು ‘ಕೋಲ್ಡ್ ಪ್ರೆಸ್ಡ್’ ಎಂದು ಮರುಪ್ಯಾಕ್
©Copyright 2025 The Bengaluru Live All rights reserved. | MoreNews by AF themes.