Home ಅಪರಾಧ ನಿವೃತ್ತ ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ನಿಧನ

ನಿವೃತ್ತ ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ನಿಧನ

56
0

ಬೆಂಗಳೂರು:

ನಿವೃತ್ತ ಐಪಿಎಸ್ ಅಧಿಕಾರಿ ಆರ್​.ಪಿ.ಶರ್ಮಾ ಬುಧವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಬಹು ಅಂಗಾಂಗಳ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಆರ್ ಪಿ ಶರ್ಮಾ ಅವರು ರಾಜ್ಯ ಪೊಲೀಸ್ ವಸತಿ ನಿಗಮದ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿ ಕಳೆದ ಡಿಸೆಂಬರ್ ನಲ್ಲಿ ನಿವೃತ್ತರಾಗಿದ್ದರು. ಪತ್ನಿ ಹಿರಿಯ ಐಎಎಸ್‌ ಅಧಿಕಾರಿ ನಾಗಲಾಂಬಿಕ ದೇವಿ ಮತ್ತು ಇಬ್ಬರು ಮಕ್ಕಳನ್ನು ಶರ್ಮಾ ಅವರು ಅಗಲಿದ್ದಾರೆ.

ಶರ್ಮಾ ಈ ಹಿಂದೆ ಸೆಪ್ಟೆಂಬರ್ 2 ರಂದು ಗನ್ ಕ್ಲೀನ್ ಮಾಡುವಾಗ ಆಕಸ್ಮಿಕವಾಗಿ ಹಾರಿದ ಗುಂಡಿನಿಂದ ಗಾಯಗೊಂಡಿದ್ದರು. ಘಟನೆ ಬಳಿಕ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

LEAVE A REPLY

Please enter your comment!
Please enter your name here