Home ಹುಬ್ಬಳ್ಳಿ ರಸ್ತೆಗಳು ಆರ್ಥಿಕ, ಸಾಂಸ್ಕೃತಿಕ ಹಾಗೂ ಕೃಷಿಯ ಬೆಳವಣಿಗೆಗೆ ಪೂರಕ : ಬಸವರಾಜ ಬೊಮ್ಮಾಯಿ

ರಸ್ತೆಗಳು ಆರ್ಥಿಕ, ಸಾಂಸ್ಕೃತಿಕ ಹಾಗೂ ಕೃಷಿಯ ಬೆಳವಣಿಗೆಗೆ ಪೂರಕ : ಬಸವರಾಜ ಬೊಮ್ಮಾಯಿ

21
0
Roads are helpful in economic, cultural and agricultural development: Basavaraj Bommai

ಹುಬ್ಬಳ್ಳಿ:

ರಸ್ತೆಗಳು ಸಾರಿಗೆ ಸಂಪರ್ಕಕ್ಕೆ ಮಾತ್ರವಲ್ಲದೆ , ಆರ್ಥಿಕ, ಸಾಂಸ್ಕೃತಿಕ ಹಾಗೂ ಕೃಷಿಯ ಬೆಳವಣಿಗೆಗೆ ಪೂರಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಯವರು ಇಂದು ಹುಬ್ಬಳ್ಳಿಯಲ್ಲಿ 12,795 ಕೋಟಿ ರೂ ಗಳ ವೆಚ್ಚದಲ್ಲಿ 925 ಕಿ.ಮೀ 26 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕ ಪ್ರಗತಿಪರ ರಾಜ್ಯ. ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳಿಗೆ ರಾಜ್ಯ ದ ಸಹಕಾರವಿದ್ದು, ಶೇ 100 ರಷ್ಟು ಅಭಿವೃದ್ಧಿಯನ್ನು , ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಕಾಣಬಯಸುತ್ತೇವೆ ಎಂದರು.

ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು. ಕೇಂದ್ರ ಸಚಿವರು ಭೂ ಸ್ವಾಧೀನಕ್ಕೆ ಶೇ 25 ರಷ್ಟು ಮೊತ್ತವನ್ನು ನೀಡಿದರೆ ಯೋಜನೆಯಲ್ಲಿನ ಮುಖ್ಯ ಸಾಮಾಗ್ರಿಗಳಾದ ಸ್ಟೀಲ್, ಸಿಮೆಂಟ್ ಗಳಿಗೆ ಕೇಂದ್ರ ಸರ್ಕಾರದ ಜಿ.ಎಸ್.ಟಿ ಯಲ್ಲಿ ವಿನಾಯ್ತಿ ನೀಡುವುದು ಹಾಗೂ ಜೆಲ್ಲಿ, ಮರಳು ಇತ್ಯಾದಿ ಗಳಿಗೆ ರಾಯಲ್ಟಿಯಲ್ಲಿ ವಿನಾಯ್ತಿ ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಒಪ್ಪಂದವನ್ನು ಸಹ ಸಹಿ ಮಾಡಲಾಗುತ್ತಿದೆ. ಇದೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಎಸ್.ಟಿ. ಆರ್.ಆರ್, ಗುಲ್ಬರ್ಗಾ, ಬೆಳಗಾವಿಯ ಇತರೆ ರಸ್ತೆಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡಲು ಸಿದ್ದವಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಕೈಗೆತ್ತಿಕೊಳ್ಳಲು ಮನವಿ ಮಾಡಿದರು. ರಾ-ಹೆ ಪಕ್ಕದ ಜಲಶಕ್ತಿ ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

13000 ಕೋಟಿ ರೂ.ಗಳ ವೆಚ್ಚದಲ್ಲಿ 925 ಕಿಮೀ ರಸ್ತೆ ಕಾಮಗಾರಿಯನ್ನು ಶಂಕುಸ್ಥಾಪನೆ ಮಾಡಿದ್ದಕ್ಕಾಗಿ ಅಭಿನಂದಿಸಿದರು. ನವ ಕರ್ನಾಟಕ ದಿಂದ ನವ ಭಾರತ ನಿರ್ಮಾಣಕ್ಕೆ ಸಿದ್ಧರಿರುವುದಾಗಿ ತಿಳಿಸಿದರು.

ಕ್ರಿಯಾಶೀಲ ಸಚಿವರು

ನಿತಿನ್ ಗಡ್ಕರಿ ಅವರು ಕೇಂದ್ರ ಸಚಿವ ರಾದ ಸಂದರ್ಭದಲ್ಲಿ ಇಡೀ ಭಾರತದಲ್ಲಿ ಮಹಾರಾಷ್ಟ್ರದಲ್ಲಿ ಅವರು ಮಾಡಿರುವ ಕೆಲಸಗಳ ರೀತಿಯಲ್ಲಿ ಬಡಲಾವಣೆಗಳು ಆಗಲಿವೆ ಎಂದು ನಮಗೆ ಅವರಿಂದ ಬಹಳಷ್ಟು ನಿರೀಕ್ಷೆ ಇತ್ತು. ದೇಶದ ಜನರ ನಿರೀಕ್ಷೆ ಯನ್ನು ಈಡೇರಿಸಿ, ದೇಶದ ಅಭಿವೃದ್ಧಿ ಗೆ ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದರು.

ದೇಶದಲ್ಲಿ ಅಭಿವೃದ್ಧಿಯ ಚಿಂತನೆಯಲ್ಲಿ ಬದಲಾವಣೆಗಳಾಗಿವೆ. ಅಸಾಧ್ಯ ಎನ್ನುತ್ತಿದ್ದ ಎಲ್ಲವನ್ನೂ ಸಾಧ್ಯ ಮಾಡಿ ತೋರಿಸುವ ಕಾಲ ಬಂದಿದೆ. ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ ಯ ಫಲದಿಂದ ಎಲ್ಲ ಪ್ರಮುಖ ವಿಚಾರಗಳಿಗೆ ಹೊಸತನ, ಶಕ್ತಿ, ವೇಗ ಬಂದಿದೆ. ಜನಸಂಖ್ಯೆಯನ್ನು ಬಳಸಿಕೊಂಡು ರಾಷ್ಟ್ರ ಮತ್ತು ರಾಜ್ಯ ಗಳನ್ನು ಕಟ್ಟಲು ಸಾಧ್ಯ ಎಂದು ಪ್ರಧಾನಿಗಳು ತೋರಿಸಿಕೊಟ್ಟಿದ್ದಾರೆ. ಅವರ ಚಿಂತನೆಯನ್ನು ನಿತಿನ್ ಗಡ್ಕರಿ ಅವರು ಅಕ್ಷರಶಃ ಕಾರ್ಯಗತ ಮಾಡಿದ್ದಾರೆ. ಯಾವುದೇ ವಿಚಾರದ ಬಗ್ಗೆ ಅತಿ ಶೀಘ್ರವಾಗಿ ನಿರ್ಣಯ ಮಾಡುವ ಶಕ್ತಿ ಅವರಿಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವೆಲ್ಲರೂ ಆಶ್ಚರ್ಯ ಪಡುವಂಥ ಸಂಗತಿ ಇದು ಎಂದರು.

ಪ್ರತಿಯೊಂದು ಕ್ಷೇತ್ರದ ರಸ್ತೆಗಳ ಹೆಸರುಗಳು ಸಹ ಅವರಿಗೆ ನೆನಪಿರುತ್ತದೆ. ಒಬ್ಬ ಕ್ರಿಯಾಶೀಲ ನಾಯಕ ಏನೆಲ್ಲಾ ಬದಲಾವಣೆ ಗಳನ್ನು ತರಲು ಸಾಧ್ಯ ಎಂದು ಅವರು ನಿರೂಪಿಸಿದ್ದಾರೆ ಎಂದರು.

ರಸ್ತೆ ಅಭಿವೃದ್ಧಿಯಿಂದ ಜನರನ್ನು ಸಂಕಷ್ಟಗಳಿಗೆ ಮುಕ್ತಿ: ಉತ್ತರ ಕರ್ನಾಟಕದ ಅಭಿವೃದ್ಧಿ ಯಲ್ಲಿ ನಿತಿನ್ ಗಡ್ಕರಿ ಅವರ ಕೊಡುಗೆ ಬಹಳ ದೊಡ್ಡದಿದೆ. ಹೊಸಪೇಟೆ- ಹುಬ್ಬಳ್ಳಿ, ಚಿತ್ರದುರ್ಗ – ಹುಬ್ಬಳ್ಳಿ ಯವರೆಗೆ ಷಟ್ಪಥ, ಬೈಪಾಸ್ ರಸ್ತೆ ನೆನೆಗುದಿಗೆ ಬಿದ್ದಿತ್ತು. ಹಲವಾರು ಸಭೆಗಳನ್ನು ಮಾಡಿ ಗಡ್ಕರಿ ಅವರ ಇಚ್ಛಾಶಕ್ತಿಯಿಂದ ಇಂದು ಷಟ್ಪಥ ಹಾಗೂ ಚತುಷ್ಪಥ ರಸ್ತೆಗಳು ಸೇವೆಗೆ ಲಭಿಸಿರುವುದು ಈ ಭಾಗದ ಜನರನ್ನು ಸಂಕಷ್ಟ ಗಳಿಂದ, ಅಪಘಾತಗಳಿಂದ, ಸಾವು ನೋವುಗಳಿಂದ ಪಾರು ಮಾಡಿದ್ದಾರೆ ಎಂದರು.

ನರಗುಂದ, ಬೀಳಗಿ, ಗಜೇಂದ್ರಗಡ, ಕುಷ್ಟಗಿ , ಸಿಂಧನೂರು ರಾ- ಹೆ 115 ರಸ್ತೆಯ ಕೈಗಾ ನಿಂದ ಇಳಕಲ್ ರಸ್ತೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದು, ಇದನ್ನು ಕೂಡಲೇ ಕೈಗೊಳ್ಳಯುವಂತೆ ಹಾಗೂ ಇತರೆ ರಾ- ಹೆಗಳ ಅಭಿವೃದ್ಧಿಗೆ ಮನವಿ ಮಾಡಿದರು.

ಹುಬ್ಬಳ್ಳಿ- ಹೊಸಪೇಟೆ, ಹಾವೇರಿ ಹುಬ್ಬಳ್ಳಿ, ದಾವಣಗೆರೆ ಚಿತ್ರದುರ್ಗ ರಸ್ತೆ ನಿರ್ಮಾಣಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ,ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಸಾರಿಗೆ ಸಚಿವ ಶ್ರೀ ರಾಮುಲು, ಸಂಸದರಾದ ಶಿವಕುಮಾರ್ ಉದಾಸಿ ಹಾಗೂ ಮಲ್ಲಿಕಾರ್ಜುನ ಖರ್ಗೆ, ಶಾಸಕ ಅರವಿಂದ ಬೆಲ್ಲದ್, ಸೇರಿದಂತೆ ಇತರೆ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here