Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಮಂಗಳೂರು
  • 15 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಂದ ಶಂಕುಸ್ಥಾಪನೆ
  • ಮಂಗಳೂರು

15 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಂದ ಶಂಕುಸ್ಥಾಪನೆ

The Bengaluru Live February 28, 2022 8:00 PM 1 minute read
Union Minister Nitin Gadkari lays foundation for 15 National Highways projects in Mangalore

15 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಂದ ಶಂಕುಸ್ಥಾಪನೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಮಂಗಳೂರು:

ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ಮಂಗಳೂರಿನ ಕುಲಶೇಖರದ ಕೋರ್ಡೆಲ್ ಹಾಲ್ ಆವರಣದಲ್ಲಿ ಫೆ. 28ರ ಸೋಮವಾರ 3,163 ಕೋಟಿ ರೂ.ಗಳ ವೆಚ್ಚದ 164 ಕಿ.ಮೀ ಉದ್ದದ  15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್, ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ, ಕೋಲಾರ ಸಂಸದರಾದ ಮುನಿಸ್ವಾಮಿ, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್, ಹರೀಶ್ ಪೂಂಜಾ, ರಾಜೇಶ್ ನಾಯಕ್, ಸಂಜೀವ ಮಠಂದೂರು, ಕಾರವಾರದ ಶಾಸಕಿ ರೂಪಾಲಿ ಸಂತೋಷ್ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮಂಜುನಾಥ್  ಭಂಡಾರಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಸೇರಿದಂತೆ ಇತರೆ ಗಣ್ಯರು ವೇದಿಕೆಯಲ್ಲಿದ್ದರು.

ಶಂಕು ಸ್ಥಾಪನೆ ಹಾಗೂ ಲೋಕಾರ್ಪಣೆಯಾದ ಕಾಮಗಾರಿಗಳ ವಿವರ

2802.48 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 7 ರಸ್ತೆಗಳ 141.155 ಕಿ.ಮೀ. ಉದ್ದದ ದ್ವಿಪಥ ಹಾಗೂ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಗಳ ಶಂಕು ಸ್ಥಾಪನೆ,  174.94 ಕೋಟಿ ರೂ. ವೆಚ್ಚದಲ್ಲಿ 9 ಸೇತುವೆಗಳ ಸೇತುವೆ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನೆ ನೆರವೇರಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ 2043.13 ಕೋಟಿ ರೂ. ವೆಚ್ಚದಲ್ಲಿ ಒಟ್ಟು 3 ರಸ್ತೆಗಳ 68.985 ಕಿ.ಮೀ. ಉದ್ದದ ದ್ವಿಪಥ ಹಾಗೂ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಗಳ ಶಂಕು ಸ್ಥಾಪನೆ,  89.77 ಕೋಟಿ ರೂ. ವೆಚ್ಚದಲ್ಲಿ 8 ಸೇತುವೆಗಳ ಸೇತುವೆ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನೆ ನೆರವೇರಲಿದೆ.

ರಾಷ್ಟ್ರೀಯ ಹೆದ್ದಾರಿ ವತಿಯಿಂದ 759.35 ಕೋಟಿ ರೂ. ವೆಚ್ಚದಲ್ಲಿ ಒಟ್ಟು 4 ರಸ್ತೆಗಳ 72.17 ಕಿ.ಮೀ. ಉದ್ದದ ದ್ವಿಪಥ ಹಾಗೂ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಗಳ ಶಂಕು ಸ್ಥಾಪನೆ,  85.17 ಕೋಟಿ ರೂ. ವೆಚ್ಚದಲ್ಲಿ 4 ಸೇತುವೆಗಳ ಸೇತುವೆ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಶಂಕು ಸ್ಥಾಪನೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ 34.61 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ನವ ಮಂಗಳೂರು ಬಂದರು ರಸ್ತೆ ಸಂಪರ್ಕಿಸುವ ಕೆ.ಪಿ.ಟಿ. ಜಂಕ್ಷನ್‍ನಲ್ಲಿ ವಿ.ಯು.ಪಿ. ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಲಿದೆ.

442.87 ಕೋಟಿ ರೂ. ವೆಚ್ಚದಲ್ಲಿ 15.13 ಕಿ.ಮೀ  ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು – ಮಂಗಳೂರು ಭಾಗದಲ್ಲಿ ಗುಂಡ್ಯ ಅಡ್ಡ ಹೊಳೆಯಿಂದ ಪೆರಿಯಶಾಂತಿಯವರ ಚುತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಲಿದೆ.
1480.85 ಕೋಟಿ ರೂ. ವೆಚ್ಚದಲ್ಲಿ 48.485 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು – ಮಂಗಳೂರು ಭಾಗದಲ್ಲಿ ಗುಂಡ್ಯ ಅಡ್ಡ ಹೊಳೆಯಿಂದ ಪೆರಿಯಶಾಂತಿ – ಬಂಟ್ವಾಳಕ್ಕೆ ಚುಷ್ಪತ ರಸ್ತೆ ನಿರ್ಮಾಣ ಮತ್ತು  ಕಲ್ಲಡ್ಕ ಪೇಟೆಯಲ್ಲಿ 6 ಪಥದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಲಿದೆ. ಒಟ್ಟು 1958.33 ಕೋಟಿ ರೂ. ವೆಚ್ಚದಲ್ಲಿ 63.615 ಕಿ.ಮೀ. ಕಾಮಗಾರಿಗಳ ಶಂಕು ಸ್ಥಾಪನೆ ನೆರವೇರಲಿದೆ.

ಶಂಕುಸ್ಥಾಪನೆಗೊಂಡ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವಿವರ ಇಂತಿದೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 119.41 ಕೋಟಿ ರೂ. ವೆಚ್ಚದಲ್ಲಿ 4.58 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಾವರದ ಪೇವೆಡ್ ಶೋಲ್ಡರ್‍ಗಳೊಂದಿಗೆ ಚತುಷ್ಪತ ಕಿ.ಮೀ. 0.00 ದಿಂದ ಬಂದರು ಸಂಪರ್ಕ ರಸ್ತೆ (ಕಾಸರಗೋಡು, ಹೊನ್ನಾವರ ಬಂದರಿನ ಕಡೆಯಿಂದ) 2.580 ಕಿ.ಮೀ. (ರಾಷ್ಟ್ರೀಯ ಹೆದ್ದಾರಿ 66ರ ಕಡೆಗೆ) ಹೊನ್ನಾವರ ಬಂದರನ್ನು ರಾಷ್ಟ್ರೀಯ ಹೆದ್ದಾರಿ 66 ರೊಂದಿಗೆ 195.986 ಕಿ.ಮೀ. ರಲ್ಲಿ ಸಂಪರ್ಕಿಸುತ್ತದೆ ಮತ್ತು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 195 ಕಿ.ಮೀ. ರಿಂದ 197 ಕಿ.ಮೀ. ವರೆಗೆ ಸುಧಾರಣೆ ಕಾಮಗಾರಿಯ ಶಂಕು ಸ್ಥಾಪನೆ.

27.50 ಕೋಟಿ ರೂ. ವೆಚ್ಚದಲ್ಲಿ ಕುಂದಾಪುರ ಸುರತ್ಕಲ್ ವಿಭಾಗದ ರಾಷ್ಟ್ರೀಯ ಹೆದ್ದಾರಿ 66ರ ಅಂಬಲ್‍ಪಾಡಿಯಲ್ಲಿ ಡಬಲ್ ಸೆಲ್ ವಿಯುಪಿ ನಿರ್ಮಣ ಕಾಮಗಾರಿ.

34.61 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ನವ ಮಂಗಳೂರು ಬಂದರು ರಸ್ತೆ ಸಂಪರ್ಕಿಸುವ ಕೆ.ಪಿಟಿ ಜಂಕ್ಷನ್‍ನಲ್ಲಿ ವಿಯುಪಿ ನಿಮಾರ್ಣ ಕಾಮಗಾರಿ.

22.71 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಜಿಲ್ಲೆಯ ಕಟಪಾಡಿ ಜಂಕ್ಷನ್‍ನಲ್ಲಿ ಮೇಲ್ಸುತುವೆ ನಿರ್ಮಾಣ.

4.95 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಮಂಡ್ಯ ಜಿಲ್ಲೆಯಲ್ಲಿ ಬ್ಲಾಕ್ ಸ್ಟಾಟ್ ಸರಿಪಡಿಸುವಿಕೆ ಕಾಮಗಾರಿ.

442.87 ಕೋಟಿ ರೂ. ವೆಚ್ಚದಲ್ಲಿ 15.13 ಕಿಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ವಿಭಾಗದಲ್ಲಿ ಗುಂಡ್ಯ ಅಡ್ಡ ಹೊಳೆಯಿಂದ ಪೆರಿಯಶಾಂತಿಯವರೆಗೆ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿ.

1480.85 ಕೋಟಿ ರೂ. ವೆಚ್ಚದಲ್ಲಿ 48.485 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ವಿಭಾಗದಲ್ಲಿ ಗುಂಡ್ಯ ಅಡ್ಡ ಹೊಳೆಯಿಂದ ಪೆರೆರಿಯಶಾಂತಿ-ಬಂಟ್ವಾಳಕ್ಕೆ ಚತುಷ್ಪತ ರಸ್ತೆ ನಿರ್ಮಾಣ ಮತ್ತು ಕಲ್ಲಡ್ಕ ಪೇಟೆಯಲ್ಲಿ 6 ಪಥದ ಮೇಲ್ಸುತುವೆ ನಿರ್ಮಾಣ ಕಾಮಗಾರಿ.

ಒಟ್ಟು 2132.90 ಕೋಟಿ ರೂ. ವೆಚ್ಚದಲ್ಲಿ 68.195 ಕಿ.ಮೀ. ಉದ್ದದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಲಿದೆ.

ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ವತಿಯಿಂದ:
87.19 ಕೋಟಿ ರೂ. ವೆಚ್ಚದಲ್ಲಿ 5 ಕಿ.ಮೀ. ಉದ್ದದ ರಾ.ಹೆ. 169ರ ಶಿವಮೊಗ್ಗ-ಮಂಗಳೂರು ಭಾಗದ ಶೃಂಗೇರಿ ಪಟ್ಟಣ ವ್ಯಾಪ್ತಿಯಲ್ಲಿ 110 ಕಿ.ಮೀ. ರಿಂದ 1153 ಕಿ.ಮೀ ರವರೆಗೆ (ಹಳೆಯ ರಸ್ತೆ 640ಕಿ.ಮೀ. ರಿಂದ 645 ಕಿ.ಮೀ) ಅಸ್ತಿತ್ವದಲ್ಲಿರುವ ಮಧ್ಯಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಗಲಪಡಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿ.

355.72 ಕೋಟಿ ರೂ. ವೆಚ್ಚದಲ್ಲಿ 28.30 ಕಿ.ಮೀ ಉದ್ದದ ರಾ.ಹೆ. 169ಎ ರ ತೀರ್ಥಹಳ್ಳಿ, ಉಡುಪಿ, ಮಲ್ಪೆ ಭಾಗದ 51.600 ಕಿ.ಮೀ. ನಿಂದ 76.200 ಕಿ.ಮೀ. ವರೆಗೆ (ಹೆಬ್ರಿಯಿಂದ ಪರ್ಕಳ) ಮತ್ತು 85.200 ಕಿ.ಮೀ. ನಿಂದ 88.900 ಕಿ.ಮೀ. ವರೆಗೆ (ಕರಾವಳಿ ಜಂಕ್ಷನ್‍ನಿಂದ ಮಲ್ಪೆ) ಚತುಷ್ಪತ ರಸ್ತೆಯನ್ನಾಗಿ ಅಗಲಪಡಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿ.

85.17 ಕೋಟಿ ರೂ. ವೆಚ್ಚದಲ್ಲಿ ರಾ.ಹೆ. 275 ಕೆ ರ ಮೈಸೂರು ರಿಂಗ್ ರಸ್ತೆಯಲ್ಲಿ ಆರು ಪಥದ ರಸ್ತೆಯೊಂದಿಗೆ ಸರ್ವಿಸ್ ರಸ್ತೆ ನಿರ್ಮಾಣ ಮತ್ತು 5.46 ಕಿ.ಮೀ., 7.06 ಕಿ.ಮೀ., 28.585 ಕಿ.ಮೀ. ನಲ್ಲಿ (ಆರ್.ಯು.ಬಿ) ಸೇತುವೆ ಕೆಳ ರಸ್ತೆ ನಿರ್ಮಾಣ ಕಾಮಗಾರಿ.

218.93 ಕೋಟಿ ರೂ. ವೆಚ್ಚದಲ್ಲಿ 27.78 ಕಿ.ಮೀ. ಉದ್ದದ ರಾ.ಹೆ. 766 ಸಿ ರ ಬೈಂದೂರು, ಕೊಲ್ಲೂರು, ಶಿಕಾರಿಪುರ, ರಾಣಿಬೆನ್ನೂರು ಭಾಗದ 24.400 ಕಿ.ಮೀ., 27.270 ಕಿ.ಮೀ., 40.500 ರಿಂದ 41.900 ರವರೆಗೆ, 84.300 ಕಿ.ಮೀ. ರಿಂದ 88.200 ಕಿ.ಮೀ., 105.250 ಕಿ.ಮೀ. ರಿಂದ 112.710 ಕಿ.ಮೀ. ರವರೆಗೆ, 161.550ಕಿ.ಮೀ. ರಿಂದ 166.350 ಕಿ.ಮೀ., 174.120 ಕಿ.ಮೀ. ರಿಂದ 176.120 ರವೆರೆಗೆ ಮತ್ತು 186.550 ಕಿ.ಮೀ. ರಿಂದ 191.900 ಕಿ.ಮೀ. ರವರೆಗೆ ಪೇವ್ಡ್ ಶೋಲ್ಡರ್‍ನೊಂದಿಗೆ ದ್ವಿಪಥ ರಸ್ತೆಯನ್ನಾಗಿ ಅಗಲಪಡಿಸಿ ಅಭಿವೃದ್ಧಿಪಡಿಸುವ ಕಾಮಗಾರಿ.

97.51 ಕೋಟಿ ರೂ. ವೆಚ್ಚದಲ್ಲಿ 11.09 ಕಿ.ಮೀ. ಉದ್ದದ ರಾ.ಹೆ. 234ರ (ಮುಳಬಾಗಿಲು-ಸಂಗದಹಳ್ಳಿ-ಎ.ಪಿ. ಬೋರ್ಡರ್) 494.450 ಕಿ.ಮೀ. ರಿಂದ 505.540 ಕಿ.ಮೀ ವರೆಗೆ ಪೇವ್ಡ್ ಶೋಲ್ಡರ್‍ನೊಂದಿಗೆ ದ್ವಿಪಥ ರ್ಸತೆಯನ್ನಾಗಿ ಅಗಲಪಡಿಸಿ ಅಬಿವೃದ್ಧಿಪಡಿಸುವ ಕಾಮಗಾರಿ. 

ಒಟ್ಟು 844.52 ಕೋಟಿ ರೂ. ವೆಚ್ಚದಲ್ಲಿ 72.17 ಕಿ.ಮೀ. ಉದ್ದದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಲಿದೆ.

ಲೋಕಾರ್ಪಣೆಗೊಂಡ ಯೋಜನೆಗಳ ವಿವರ:
177.22 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 23.90 ಕಿ.ಮೀ. ಉದ್ದವಿರುವ ದ್ವಿಪಥ ಹಾಗೂ ಚತುಷ್ಪತ ಮಾದರಿಯಲ್ಲಿರುವ ಎರಡು ನೂತನ ರಸ್ತೆಗಳು ಮತ್ತು 8.8 ಕೋಟಿ ರೂ.ಗಳಲ್ಲಿ ನಿರ್ಮಾಣಗೊಂಡಿರುವ 3 ಸೇತುವೆಗಳು ಸಾರ್ವಜನಿಕರ ಉಪಯೋಗಕ್ಕಾಗಿ ಲೋಕಾರ್ಪಣೆಯಾಗಿದೆ.

ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ 159.70 ಕೋಟಿ ರೂ. ವೆಚ್ಚದಲ್ಲಿ 19.85 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 234ರ ಬಿ.ಸಿ. ರೋಡ್-ಪೂಂಜಾಲಕಟ್ಟೆ ಭಾಗದ 20.15 ಕಿ.ಮೀ. ನಿಂದ 40 ಕಿ.ಮೀ. ವರೆಗೆ ಭುಜಗಳುಳ್ಳ ದ್ವಿಪಥ ರಸ್ತೆ ಅಗಲೀಕರಣ ಕಾಮಗಾರಿ.

  1. 52 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ನಗರದಲ್ಲಿ ಹಾದುಹೋಗುವ 70.16 ಕಿ.ಮೀ  ರಿಂದ 74 .06 ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ 159. 70 ವೆಚ್ಚದ ರಾಷ್ಟ್ರೀಯ ಹೆದ್ದಾರಿ 234 ರ ಬಿಸಿರೋಡ್ ಕೊಟ್ಟಿಗೆಹಾರ ಭಾಗದ  20.15 ಕಿ. ಮೀ ರಿಂದ 40.00 ಕಿ.ಮೀ ವರೆಗೆ ಭುಜಗಳುಳ್ಳ ದ್ವಿಪಥ ರಸ್ತೆ ಅಗಲೀಕರಣ ಹಾಗೂ 8.80 ವೆಚ್ಚದ ರಾಷ್ಟ್ರೀಯ ಹೆದ್ದಾರಿ 169 ಎ ರ ತೀರ್ಥಹಳ್ಳಿ ಉಡುಪಿ ಭಾಗದ 26.05 ಕಿ.ಮೀ , 27.07 ಕಿ.ಮೀ , ಮತ್ತು 28.14 ಕಿ.ಮೀ ರಲ್ಲಿ ಕಿರು ಸೇತುವೆಯ ಮರು ನಿರ್ಮಾಣ ಕಾಮಗಾರಿಗಳ ಲೋಕಾರ್ಪಣೆಯಾಯಿತು.

About the Author

The Bengaluru Live

Administrator

Visit Website View All Posts

Post navigation

Previous: ರಸ್ತೆಗಳು ಆರ್ಥಿಕ, ಸಾಂಸ್ಕೃತಿಕ ಹಾಗೂ ಕೃಷಿಯ ಬೆಳವಣಿಗೆಗೆ ಪೂರಕ : ಬಸವರಾಜ ಬೊಮ್ಮಾಯಿ
Next: ಶಿರಾಡಿ ಘಾಟ್‍ ಅನ್ನು ನಾಲ್ಕು ಪಥದ ಹೆದ್ದಾರಿಯಾಗಿ ಪರಿವರ್ತಿಸಲು ಆದ್ಯತೆ: ನಿತಿನ್ ಗಡ್ಕರಿ

Related Stories

ಸಿಎಂ ದಿಢೀರ್ ಭೇಟಿಯ ವೇಳೆ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ವ್ಯಾಪಾರ ಸ್ಥಗಿತ; ವರದಿಗೆ ಡಿ.ಕೆ. ಶಿವಕುಮಾರ್ ಆದೇಶ, ಅಧಿಕಾರಿಗಳ ಅಮಾನತು ಎಚ್ಚರಿಕೆ
  • ಮಂಗಳೂರು

ಸಿಎಂ ದಿಢೀರ್ ಭೇಟಿಯ ವೇಳೆ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ವ್ಯಾಪಾರ ಸ್ಥಗಿತ; ವರದಿಗೆ ಡಿ.ಕೆ. ಶಿವಕುಮಾರ್ ಆದೇಶ, ಅಧಿಕಾರಿಗಳ ಅಮಾನತು ಎಚ್ಚರಿಕೆ

The Bengaluru Live September 19, 2026 6:17 PM
ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು’ ಎಂದು ಮರುನಾಮಕರಣ ಪ್ರಸ್ತಾವ; ಕರಡು ಅಧಿಸೂಚನೆ ಹೊರಡಿಸಿ ಒಂದು ತಿಂಗಳು ಜನಾಭಿಪ್ರಾಯ ಸಂಗ್ರಹಿಸಲು ಸರ್ಕಾರ ನಿರ್ಧಾರ
  • ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು’ ಎಂದು ಮರುನಾಮಕರಣ ಪ್ರಸ್ತಾವ; ಕರಡು ಅಧಿಸೂಚನೆ ಹೊರಡಿಸಿ ಒಂದು ತಿಂಗಳು ಜನಾಭಿಪ್ರಾಯ ಸಂಗ್ರಹಿಸಲು ಸರ್ಕಾರ ನಿರ್ಧಾರ

The Bengaluru Live September 18, 2026 6:19 PM
ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿರುವ ಕರ್ನಾಟಕ ಸಚಿವ ಸಂಪುಟ ಸಭೆಯ ಸಂಗ್ರಹಿತ ಚಿತ್ರ
  • ಮಂಗಳೂರು

ಉಡುಪಿ, ದಕ್ಷಿಣ ಕನ್ನಡದಲ್ಲಿ ತುಳು ಹೆಚ್ಚುವರಿ ಆಡಳಿತ ಭಾಷೆ; ಮಂಗಳೂರು ಸಂಪುಟ ಸಭೆಯಲ್ಲಿ ₹32,611 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ

The Bengaluru Live September 18, 2026 6:11 PM

Latest Post

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.
  • ಬೆಂಗಳೂರು ನಗರ

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ

November 11, 2026 1:28 AM
ಬಿಹಾರ ಕಾರ್ಟ್ರಿಡ್ಜ್ ವಶ ಪ್ರಕರಣದ ಚಿತ್ರಕ್ಕೆ ಆಕ್ಷೇಪ: ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ, ಗಿರೀಶ್ ಭಾರದ್ವಾಜ್ ವಾಗ್ದಾಳಿ ಕೊಚ್ಚಿಯ ಮುಸ್ಲಿಂ ಯೂತ್ ಲೀಗ್ ರ‍್ಯಾಲಿಯಲ್ಲಿ ವೇದಿಕೆಯಲ್ಲಿ ಸಂವಿಧಾನದ ಪ್ರತಿ ಹಿಡಿದು ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ
  • ರಾಜಕೀಯ

ಬಿಹಾರ ಕಾರ್ಟ್ರಿಡ್ಜ್ ವಶ ಪ್ರಕರಣದ ಚಿತ್ರಕ್ಕೆ ಆಕ್ಷೇಪ: ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ, ಗಿರೀಶ್ ಭಾರದ್ವಾಜ್ ವಾಗ್ದಾಳಿ

November 11, 2026 1:14 AM
ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್ ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

November 11, 2026 12:25 AM
ಕರ್ನಾಟಕ ಬರ ಪರಿಹಾರ: ₹5,000 ಪಾವತಿ ಕುರಿತು ಶಿವಕುಮಾರ್ ಸ್ಪಷ್ಟನೆ, ಮೊದಲ ಕಂತಿನ ಮೊತ್ತದ ಬಗ್ಗೆ ಅಶೋಕ ಪ್ರಶ್ನೆ ವಿಧಾನಸೌಧದಲ್ಲಿ ಮಧ್ಯಂತರ ಬರ ಪರಿಹಾರ ಪಾವತಿಗೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಕರ್ನಾಟಕ ಬರ ಪರಿಹಾರ: ₹5,000 ಪಾವತಿ ಕುರಿತು ಶಿವಕುಮಾರ್ ಸ್ಪಷ್ಟನೆ, ಮೊದಲ ಕಂತಿನ ಮೊತ್ತದ ಬಗ್ಗೆ ಅಶೋಕ ಪ್ರಶ್ನೆ

November 10, 2026 11:27 PM
ಡಾ. ಸಮೀಕ್ಷಾ ರೆಡ್ಡಿ ಯಾರು? ಬನ್ನೇರುಘಟ್ಟದಲ್ಲಿ ಅವರ ಸ್ಮರಣೆಗೆ ರಾಮಲಿಂಗಾ ರೆಡ್ಡಿ ಶಿಫಾರಸು ಡಾ. ಸಮೀಕ್ಷಾ ರೆಡ್ಡಿ ಅವರ ಭಾವಚಿತ್ರ ಮತ್ತು ಬನ್ನೇರುಘಟ್ಟದಲ್ಲಿ ನೀರಾನೆ ಮರಿಯ ಸಮೀಕ್ಷಾ ನಾಮಫಲಕದ ಬಳಿಯ ಸಂದರ್ಶಕರು
  • ಕರ್ನಾಟಕ
  • ಬೆಂಗಳೂರು ನಗರ

ಡಾ. ಸಮೀಕ್ಷಾ ರೆಡ್ಡಿ ಯಾರು? ಬನ್ನೇರುಘಟ್ಟದಲ್ಲಿ ಅವರ ಸ್ಮರಣೆಗೆ ರಾಮಲಿಂಗಾ ರೆಡ್ಡಿ ಶಿಫಾರಸು

November 10, 2026 10:14 PM
ನ.13ರಂದು ಬೆಂಗಳೂರಿನಲ್ಲಿ ₹160 ಕೋಟಿ ವೆಚ್ಚದ ಸಂಕುಚಿತ ಜೈವಿಕ ಅನಿಲ ಘಟಕಕ್ಕೆ ಪ್ರಧಾನಿ ಮೋದಿ ವರ್ಚುವಲ್ ಶಿಲಾನ್ಯಾಸ ಪರಿಶೀಲನೆಯ ವೇಳೆ ಜೈವಿಕ ಅನಿಲ ಘಟಕದಲ್ಲಿ ಹಸಿರು ಚೌಕಟ್ಟಿನ ಗ್ಯಾಸ್ ಸಿಲಿಂಡರ್‌ಗಳ ಸುತ್ತ ನಿಂತಿರುವ ಪುರುಷರು
  • ಬೆಂಗಳೂರು

ನ.13ರಂದು ಬೆಂಗಳೂರಿನಲ್ಲಿ ₹160 ಕೋಟಿ ವೆಚ್ಚದ ಸಂಕುಚಿತ ಜೈವಿಕ ಅನಿಲ ಘಟಕಕ್ಕೆ ಪ್ರಧಾನಿ ಮೋದಿ ವರ್ಚುವಲ್ ಶಿಲಾನ್ಯಾಸ

November 10, 2026 5:55 PM

ನೀವು ತಪ್ಪಿಸಿಕೊಂಡಿರಬಹುದು

ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.
  • ಬೆಂಗಳೂರು ನಗರ

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ

The Bengaluru Live November 11, 2026 1:28 AM
ಕೊಚ್ಚಿಯ ಮುಸ್ಲಿಂ ಯೂತ್ ಲೀಗ್ ರ‍್ಯಾಲಿಯಲ್ಲಿ ವೇದಿಕೆಯಲ್ಲಿ ಸಂವಿಧಾನದ ಪ್ರತಿ ಹಿಡಿದು ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ
  • ರಾಜಕೀಯ

ಬಿಹಾರ ಕಾರ್ಟ್ರಿಡ್ಜ್ ವಶ ಪ್ರಕರಣದ ಚಿತ್ರಕ್ಕೆ ಆಕ್ಷೇಪ: ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ, ಗಿರೀಶ್ ಭಾರದ್ವಾಜ್ ವಾಗ್ದಾಳಿ

The Bengaluru Live November 11, 2026 1:14 AM
ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

The Bengaluru Live November 11, 2026 12:25 AM
ವಿಧಾನಸೌಧದಲ್ಲಿ ಮಧ್ಯಂತರ ಬರ ಪರಿಹಾರ ಪಾವತಿಗೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಕರ್ನಾಟಕ ಬರ ಪರಿಹಾರ: ₹5,000 ಪಾವತಿ ಕುರಿತು ಶಿವಕುಮಾರ್ ಸ್ಪಷ್ಟನೆ, ಮೊದಲ ಕಂತಿನ ಮೊತ್ತದ ಬಗ್ಗೆ ಅಶೋಕ ಪ್ರಶ್ನೆ

The Bengaluru Live November 10, 2026 11:27 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ
  • ಬಿಹಾರ ಕಾರ್ಟ್ರಿಡ್ಜ್ ವಶ ಪ್ರಕರಣದ ಚಿತ್ರಕ್ಕೆ ಆಕ್ಷೇಪ: ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ, ಗಿರೀಶ್ ಭಾರದ್ವಾಜ್ ವಾಗ್ದಾಳಿ
  • ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್
  • ಕರ್ನಾಟಕ ಬರ ಪರಿಹಾರ: ₹5,000 ಪಾವತಿ ಕುರಿತು ಶಿವಕುಮಾರ್ ಸ್ಪಷ್ಟನೆ, ಮೊದಲ ಕಂತಿನ ಮೊತ್ತದ ಬಗ್ಗೆ ಅಶೋಕ ಪ್ರಶ್ನೆ
©Copyright 2025 The Bengaluru Live All rights reserved. | MoreNews by AF themes.