Home Uncategorized Rudra Veena from Vehicle Scrap: ವಾಹನಗಳ ಬಿಡಿಭಾಗಳಿಂದ ತಯಾರಿಸಲಾಗಿದೆ ವಿಶ್ವದ ಅತಿ ದೊಡ್ಡ ರುದ್ರ...

Rudra Veena from Vehicle Scrap: ವಾಹನಗಳ ಬಿಡಿಭಾಗಳಿಂದ ತಯಾರಿಸಲಾಗಿದೆ ವಿಶ್ವದ ಅತಿ ದೊಡ್ಡ ರುದ್ರ ವೀಣೆ

21
0

ಭೋಪಾಲ್: ಮಧ್ಯಪ್ರದೇಶದ ಕಲಾವಿದರ ಗುಂಪೊಂದು ವಾಹನದ ಬಿಡಿಭಾಗಗಳನ್ನು(Vehicle Scrap) ಬಳಸಿ ವಿಶ್ವದ ಅತಿದೊಡ್ಡ ರುದ್ರ ವೀಣೆಯನ್ನು ಆರು ತಿಂಗಳಲ್ಲಿ ನಿರ್ಮಿಸಿದ್ದಾರೆ. ಭಾರತೀಯ ಸಂಸ್ಕೃತಿ(Indian Culture)ಯ ಬಗ್ಗೆ ಹೊಸ ಪೀಳಿಗೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ  ಈ ಬೃಹತ್ ವೀಣೆಯನ್ನು ತಯಾರಿಸಲಾಗಿದೆ ಎಂದು ತಂಡದ ಸದಸ್ಯ ಪವನ್ ದೇಶಪಾಂಡೆ  ಸುದ್ದಿ ಸಂಸ್ಥೆ ANIಗೆ ತಿಳಿಸಿದ್ದಾರೆ.

ಈ ವೀಣೆಯು 28 ಅಡಿ ಉದ್ದ, 10 ಅಡಿ ಅಗಲ ಮತ್ತು 12 ಅಡಿ ಎತ್ತರವಿದೆ. ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ಆರು ತಿಂಗಳಲ್ಲಿ ತಯಾರಿಸಲಾಗಿದೆ. ಚೈನ್, ಗೇರ್, ಬಾಲ್-ಬೇರಿಂಗ್, ವೈರ್ ಮುಂತಾದ ವಾಹನಗಳ ಬಿಡಿ ಭಾಗಳಿಂದ ಸುಮಾರು 28 ಅಡಿ ಉದ್ದ, 10 ಅಡಿ ಅಗಲ ಮತ್ತು 12 ಅಡಿ ಎತ್ತರದ ವಿಶ್ವದ ಅತಿ ದೊಡ್ಡ ರುದ್ರ ವೀಣೆಯನ್ನು ತಯಾರಿಸಲಾಗಿದೆ.

Madhya Pradesh | A group of 15 artists in Bhopal made the model of the Indian musical instrument ‘Veena’ from scrap and waste material. pic.twitter.com/CKKACgmgrr

— ANI MP/CG/Rajasthan (@ANI_MP_CG_RJ) December 16, 2022

ರುದ್ರ ವೀಣೆಯು ಚೈನ್, ಗೇರ್, ಬಾಲ್-ಬೇರಿಂಗ್, ವೈರ್ ಮುಂತಾದ ವಾಹನಗಳ ಅವಶೇಷಗಳಿಂದ ಮಾಡಲ್ಪಟ್ಟಿದೆ. ಇದು ವಿಶ್ವದ ಅತಿದೊಡ್ಡ ರುದ್ರ ವೀಣೆ. ಒಟ್ಟು 15 ಕಲಾವಿದರು ಶ್ರಮ ಇದರಲ್ಲಿದೆ ಎಂದು ವೀಣೆ ತಯಾರಿಸಿದ ತಂಡ ಹೇಳಿಕೊಂಡಿದೆ. ನಮ್ಮ ಯುವ ಪೀಳಿಗೆಯು ಭಾರತೀಯ ಸಂಸ್ಕೃತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಥೀಮ್‌ ನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಭಿಕ್ಷೆ ಬೇಡುತ್ತಿದ್ದ ಪುಟ್ಟ ಹುಡುಗ ಒಂದೇ ದಿನದಲ್ಲಿ ಕೋಟ್ಯಾಧಿಪತಿ

ಜನರು ಇದರೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದಾದ ಸ್ಥಳದಲ್ಲಿ ಇದನ್ನು ಇರಿಸಲಾಗುವುದು.  ಜೊತೆಗೆ ಇದರಲ್ಲಿ ಮ್ಯೂಸಿಕಲ್ ಸಿಸ್ಟಮ್ ಮತ್ತು ಲೈಟ್‌ಗಳನ್ನು ಅಳವಡಿಸುತ್ತೇವೆ. ಇದು ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಜೊತೆಗೆ ಯುವಕರು ಇಂತಹ ಕೆಲಸಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದು  ದೇಶಪಾಂಡೆ ತಿಳಿಸಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

LEAVE A REPLY

Please enter your comment!
Please enter your name here