Home ಬೆಂಗಳೂರು ನಗರ ನಿರ್ದೇಶಕ ರೇಣುಕಾ ಶರ್ಮಾ ಕೋವಿಡ್‌ಗೆ ಬಲಿ

ನಿರ್ದೇಶಕ ರೇಣುಕಾ ಶರ್ಮಾ ಕೋವಿಡ್‌ಗೆ ಬಲಿ

143
0

ಬೆಂಗಳೂರು:

ಕವಿರತ್ನ ಕಾಳಿದಾಸ, ಅಂಜದ ಗಂಡು, ಕಿಂದರಿ ಜೋಗಿ, ಅಂತಹ ಹಿಟ್, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ರೇಣುಕಾ ಶರ್ಮಾ(81) ಕೋವಿಡ್‌ಗೆ ಬಲಿಯಾಗಿದ್ದಾರೆ.

1981ರಲ್ಲಿ ಅನುಪಮ ಚಿತ್ರದ ಮೂಲಕ ಅವರು ನಿರ್ದೇಶನ ಕ್ಷೇತ್ರಕ್ಕೆ ಬಂದಿದ್ದರು. ‘ಶಹಬ್ಬಾಸ್ ವಿಕ್ರಮ್’, ‘ಸತ್ಕಾರ’ ಹಾಗೂ ‘ನಮ್ಮ ಊರ ದೇವತೆ’, ‘ಶಬರಿಮಲೆ ಶ್ರೀ ಅಯ್ಯಪ್ಪ’, ‘ಭರ್ಜರಿ ಗಂಡು’ ಹಾಗೂ ‘ಹಠಮಾರಿ ಹೆಣ್ಣು ಕಿಲಾಡಿ ಗಂಡು’, ‘ಕೊಲ್ಲೂರು ಶ್ರೀ ಮೂಕಾಂಬಿಕೆ’ ಅವರ ನಿರ್ದೇಶನದ ಸೂಪರ್ ಹಿಟ್ ಚಿತ್ರಗಳು.

ರೇಣುಕಾ ಶರ್ಮಾ ಅವರಿಗೆ ಪತ್ನಿ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಸೋಂಕಿಗೆ ತುತ್ತಾಗಿದ್ದ ಅವರನ್ನು ಗಿರಿನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.

ನಾಗಾಭರಣ ಸಂತಾಪ

ಕವಿರತ್ನ ಕಾಳಿದಾಸ, ಶಬರಿಮಲೆ ಅಯ್ಯಪ್ಪ ಸೇರಿದಂತೆ ಹಲವು ಉತ್ಕೃಷ್ಟ ಐತಿಹಾಸಿಕ ಮತ್ತು ಭಕ್ತಿಪ್ರಧಾನ ಕನ್ನಡ ಸಿನಿಮಾ ನಿರ್ದೇಶನ ಮಾಡಿದ ಖ್ಯಾತ ನಿರ್ದೇಶಕ, ಆತ್ಮೀಯ ರೇಣುಕಾ ಶರ್ಮ ಕೋವಿಡ್ ಗೆ ಬಲಿಯಾಗಿದ್ದು, ಅತ್ಯಂತ ನೋವಿನ ವಿಷಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅನಂತ ನಾಗ್ – ಮಾಧವಿ ಅಭಿನಯದ ಅನುಪಮ ಚಿತ್ರ ನಿರ್ದೇಶನದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ರೇಣುಕಾಶರ್ಮ ಅವರು
ಐತಿಹಾಸಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳನ್ನು ಅರ್ಥಪೂರ್ಣವಾಗಿ ತೆರೆಗೆ ತರುತ್ತಿದ್ದ ದೈತ್ಯ ಪ್ರತಿಭೆ ರೇಣುಕಾ ಶರ್ಮ ಎಂದು ಶ್ಲಾಘಿಸಿದ್ದಾರೆ.

ರಾಜ್ ಕುಮಾರ್ ಅಭಿನಯದ ಕವಿರತ್ನ ಕಾಳಿದಾಸ ಅವರು ಅತ್ಯಂತ ಯಶಸ್ವಿ ಚಿತ್ರವಾಗಿತ್ತು. ನಮ್ಮೂರ ದೇವತೆ, ಶಹಬ್ಬಾಸ್ ವಿಕ್ರಮ್, ಅಂಜದ ಗಂಡು, ಶಬರಿಮಲೈ ಅಯ್ಯಪ್ಪ, ಶ್ರೀ ಅಯ್ಯಪ್ಪ, ಬರ್ಜರಿ ಗಂಡ, ಕಿಂದರಿ ಜೋಗಿ, ಕೊಲ್ಲಾಪುರ ಶ್ರೀ ಮೂಕಾಂಬಿಕೆ, ಮಹಾಸಾದ್ವಿ ಮಲ್ಲಮ್ಮ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

ಅವರ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ ನಾಗಾಭರಣ ಅವರು, ಹೀಗೆ ನಿರಂತರವಾಗಿ ಕನ್ನಡದ ವಿವಿಧ ಕ್ಷೇತ್ರದ ಮಹನೀಯರನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಮನಸ್ಸನ್ನು ಆದ್ರ ಗೊಳಿಸಿದೆ. ಹಿಂದೆಂದೂ ಕಾಣದಂತಹ ಇಂತಹ ದುರಿತ ಕಾಲ ಇದಾಗಿದ್ದು ಯಾರೊಬ್ಬರೂ ಉದಾಸೀನ ಮಾಡದೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

ಕುಮಾರಸ್ವಾಮಿ ಸಂತಾಪ

ಹಿರಿಯ ಚಿತ್ರ ನಿರ್ದೇಶಕ ರೇಣುಕಾಶರ್ಮ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಕೋವಿಡ್ ನಿಂದಾಗಿ ಎರಡು ದಿನಗಳ ಹಿಂದಷ್ಟೇ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಜೀವ ತೆತ್ತಿರುವುದು ಅತ್ಯಂತ ನೋವಿನ ಸಂಗತಿ.

ರಾಜ್ ಕುಮಾರ್ ಅಭಿನಯದ ಕವಿರತ್ನ ಕಾಳಿದಾಸ ಅವರ ಅತ್ಯಂತ ಯಶಸ್ವಿ ಚಿತ್ರವಾಗಿತ್ತು. ನಮ್ಮೂರ ದೇವತೆ, ಶಹಬ್ಬಾಸ್ ವಿಕ್ರಮ್, ಅಂಜದ ಗಂಡು, ಶಬರಿಮಲೈ ಅಯ್ಯಪ್ಪ, ಶ್ರೀ ಅಯ್ಯಪ್ಪ, ಭರ್ಜರಿ ಗಂಡು, ಕಿಂದರಿ ಜೋಗಿ, ಕೊಲ್ಲಾಪುರ ಶ್ರೀ ಮೂಕಾಂಬಿಕೆ, ಮಹಾಸಾದ್ವಿ ಮಲ್ಲಮ್ಮ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

ಅವರ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

LEAVE A REPLY

Please enter your comment!
Please enter your name here