Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಸಂಜೀವಿನಿ – ಕೆ.ಎಸ್.ಆರ್.ಎಲ್. ಪಿಎಸ್ ಮತ್ತು ಅಮೆಜಾನ್ ನೊಂದಿಗೆ ಒಡಂಬಡಿಕೆಗೆ ಸಹಿ
  • ಬೆಂಗಳೂರು ನಗರ

ಸಂಜೀವಿನಿ – ಕೆ.ಎಸ್.ಆರ್.ಎಲ್. ಪಿಎಸ್ ಮತ್ತು ಅಮೆಜಾನ್ ನೊಂದಿಗೆ ಒಡಂಬಡಿಕೆಗೆ ಸಹಿ

The Bengaluru Live February 5, 2022 6:00 PM 1 minute read
Sanjivani - KSRLPS Signs agreement with Amazon

ಸಂಜೀವಿನಿ – ಕೆ.ಎಸ್.ಆರ್.ಎಲ್. ಪಿಎಸ್ ಮತ್ತು ಅಮೆಜಾನ್ ನೊಂದಿಗೆ ಒಡಂಬಡಿಕೆಗೆ ಸಹಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬಡತನವನ್ನು ಹೋಗಲಾಡಿಸಲು ಆರ್ಥಿಕ ಚಟುವಟಿಕೆಗಳಲ್ಲಿ ಮಧ್ಯಸ್ಥಿಕೆ ಅಗತ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು:

ಬಡತನ ಹೋಗಲಾಡಿಸಲು ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರದ ಮಧ್ಯಪ್ರವೇಶ ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಯ ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆ ಹಾಗೂ ಅಮೆಜಾನ್ ನೊಂದಿಗೆ ಇಂದು ನಡೆದ ಒಡಂಬಡಿಕೆಗೆ ಸಹಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಸ್ತುತ ಸ್ಥಿತಿಯಲ್ಲಿ ಬಡತನ ನಮ್ಮ ಬಹು ದೊಡ್ಡ ಶತ್ರು. ಗ್ರಾಮೀಣ ಜನರನ್ನು ಮೇಲೆತ್ತುವುದು ಮಾತ್ರವಲ್ಲ, ಬಡತನವನ್ನು ನಾವು ಸೋಲಿಸಬೇಕಿದೆ. ಬಡಜನರಿಗೆ ಎಲ್ಲಾ ರೀತಿಯ ನೆರವಿನ ವ್ಯವಸ್ಥೆಯನ್ನು ಕಲ್ಪಿಸಿ ಅವರನ್ನು ಸಬಲರನ್ನಾಗಿಸಬೇಕಿದೆ ಎಂದರು. ಸಾಮರ್ಥ್ಯ ಮತ್ತು ವ್ಯಾಪಕತೆಯನ್ನು ಹೊಂದಿರುವ ಅಮೆಜಾನ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದವೇ ಬಹು ದೊಡ್ಡ ಮಧ್ಯಸ್ಥಿಕೆಯಾಗಿ ಪರಿಣಮಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಉನ್ನತ ಶಿಕ್ಷಣ, ಐಟಿ, ಬಿಟಿ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಖಾತೆ ಸಚಿವ @drashwathcn ಅಮೆಜಾನ್ ಕಂಪೆನಿಯ ಉಪಾಧ್ಯಕ್ಷ @Chetankrishna, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

@AmazonNews_IN
2/2

— CM of Karnataka (@CMofKarnataka) February 5, 2022

ಸಂಸ್ಕೃತಿಯ ವಿನಿಮಯ:

ಈ ಒಪ್ಪಂದದಿಂದ ಬ್ರಾಂಡಿಂಗ್ ಹಾಗೂ ಉತ್ಪನ್ನಗಳ ಸಂಸ್ಕೃತಿಯ ವಿನಿಮಯ ಮಾಡುವ ದೊಡ್ಡ ಹೊಣೆಗಾರಿಕೆ ನಮ್ಮ ಮೇಲಿದೆ. ಪರಿವರ್ತನೆಯನ್ನು ನಾವು ಉಸಿರಾಗಿಸಿಕೊಳ್ಳಬೇಕು. ಉತ್ತಮ ಹಾಗೂ ಸುಸ್ಥಿರ ಮಾರುಕಟ್ಟೆಯೊಂದಿಗೆ ಕೌಶಲ್ಯ, ಅರ್ಹತೆ ಹಾಗೂ ಛಲವನ್ನು ಹೊಂದಿರುವ ಗ್ರಾಮೀಣ ಮಹಿಳೆಯರಿಗೆ ಉತ್ತಮವಾದ ಕಾರ್ಯವಿಧಾನದ ಅಗತ್ಯವಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಸಂಜೀವಿನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ. ಇದರ ಯಶೋಗಾಥೆಯ ಮುಖಾಂತರ ಇತರೆ ಸಣ್ಣ ಉದ್ಯಮ ಹಾಗೂ ಚಟುವಟಿಕೆಗಳಿಗೆ ಇದೇ ಮಾದರಿಯನ್ನು ಅನುಸರಿಸಲು ಸಾಧ್ಯವಾಗಲಿದೆ ಎಂದರು.

ಕರ್ನಾಟಕ ರಾಜ್ಯವು ಪ್ರತಿಭೆ, ಉತ್ಪನ್ನ ಹಾಗೂ ಉದ್ಯಮಗಳಲ್ಲಿ ಪರಿಣಿತಿಯನ್ನು ಹೊಂದಿರುವ ರಾಜ್ಯ ವಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುವ ಜನರಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ಅಮೆಜಾನ್ ಸಂಸ್ಥೆ ಒಟ್ಟಾಗಿ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಬೇಕಿದೆ ಎಂದರು.

Also Read: Karnataka, Amazon tie up to boost rural products

ಒಂದು ಜಿಲ್ಲೆ- ಒಂದು ಉತ್ಪನ್ನ

ಒಂದು ಜಿಲ್ಲೆ- ಒಂದು ಉತ್ಪನ್ನ ಕಾರ್ಯಕ್ರಮದಡಿ ಸ್ಥಳೀಯ ಪ್ರತಿಭೆ ಮತ್ತು ಉತ್ಪನ್ನಗಳನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದರು. ಚನ್ನಪಟ್ಟಣದ ಗೊಂಬೆಗಳು, ಇಳಕಲ್ ಹಾಗೂ, ಮೊಳಕಾಳ್ಮೂರು ಸೀರೆಗಳು ಆಹಾರ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿ ಆಧುನಿಕತೆಯ ಸ್ಪರ್ಶವನ್ನು ಒದಗಿಸಲು ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕೌಶಲ್ಯಾಭಿವೃದ್ಧಿ ಸಚಿವ ಡಾ: ಅಶ್ವತ್ಥ್ ನಾರಾಯಣ್ ಮಾತನಾಡಿ ಸಂಜೀವಿನಿ ಕಾರ್ಯಕ್ರಮದಡಿ ಮಾಡಿಕೊಂಡಿರುವ ಒಪ್ಪಂದ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಿದೆ ಎಂದರು.

ಅಮೆಜಾನ್ ಸಂಸ್ಥೆಯ ಮುಖ್ಯಸ್ಥ ಚೇತನ್ ಕೃಷ್ಣಸ್ವಾಮಿ ಮಾತನಾಡಿ ಸಣ್ಣ ಹಾಗೂ ಮಧ್ಯಮ ಉದ್ಯಮಗಳನ್ನು ಬೆಂಬಲಿಸಲು ಅಮೆಜಾನ್ ಬದ್ಧವಾಗಿದೆ. ರಾಜ್ಯದಲ್ಲಿ ಮಹಿಳೆಯರು ತಯಾರಿಸುವ ವಿಶಿಷ್ಟ ಉತ್ಪನ್ನಗಳಿಗೆ ಅತ್ಯುತ್ತಮ ಮಾರುಕಟ್ಟೆ ಒದಗಿಸಲು ಅಮೆಜಾನ್ ನೆರವು ನೀಡಲಿದೆ ಎಂದರು.

ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ , ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಮಂಜುಶ್ರೀ ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಗ್ರಾಮ ಒನ್ ಕೇಂದ್ರಗಳ ಮೂಲಕ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‍ಗಳ ವಿತರಣೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Next: ಅಮೆಜಾನ್ ಮತ್ತು ಕೆ.ಎಸ್.ಆರ್.ಎಲ್.ಪಿ. ಎಸ್ ನಡುವೆ ಒಪ್ಪಂದ

Related Stories

ಗುಂಜೂರಿನ ಶಂಕುಸ್ಥಾಪನೆ ಸಮಾರಂಭದಲ್ಲಿ ಸಚಿವ ಕೃಷ್ಣ ಬೈರೇಗೌಡ ಮತ್ತು ಇತರ ಗಣ್ಯರೊಂದಿಗೆ ವೇದಿಕೆಯಲ್ಲಿ ದೀಪ ಬೆಳಗುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸರ್ಕಾರದ ಗುರಿ: ಗುಂಜೂರಿನಲ್ಲಿ ವಿಶ್ವಬ್ಯಾಂಕ್ ನೆರವಿನ ಕೆಡಬ್ಲ್ಯೂಎಸ್‌ಆರ್‌ಪಿ ಅಡಿ ರೂ 2,000 ಕೋಟಿ ಮೌಲ್ಯದ ಕಾಲುವೆ, ಪ್ರವಾಹ ಕಾಮಗಾರಿಗೆ ಸಿಎಂ ಶಿವಕುಮಾರ್ ಶಂಕುಸ್ಥಾಪನೆ

The Bengaluru Live November 18, 2026 7:04 AM
ಪತ್ರಿಕಾಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನ ಐದು ನಗರ ಪಾಲಿಕೆಗಳ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸಾಪ್‌ನಲ್ಲಿ ಉಚಿತ ಇ-ಖಾತಾ ವಿತರಣೆ: ಜಿಬಿಎ

The Bengaluru Live November 17, 2026 8:24 PM
ಪತ್ರಿಕಾಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಜಕ್ಕೂರು ರೈಲ್ವೆ ಮೇಲ್ಸೇತುವೆ, ಗೆದ್ದಲಹಳ್ಳಿ ರೈಲ್ವೆ ವೆಂಟ್ ಉದ್ಘಾಟನೆ; ₹436 ಕೋಟಿ ವೆಚ್ಚದ ಐಓಸಿ ಜಂಕ್ಷನ್ ರೋಟರಿ ಮೇಲ್ಸೇತುವೆಗೆ ನ.18ರಂದು ಶಂಕುಸ್ಥಾಪನೆ

The Bengaluru Live November 17, 2026 8:21 PM

Latest Post

ಕಾವೇರಿ 2.0: ಜನವರಿ 10ರಿಂದ ಎಲ್ಲ 256 ಕಚೇರಿಗಳಲ್ಲಿ ಕಾಗದರಹಿತ ಆಸ್ತಿ ನೋಂದಣಿ ಎಂದು ಕರ್ನಾಟಕ ಸರ್ಕಾರ ಮಾಹಿತಿ ಬೆಂಗಳೂರಿನ ವಿಧಾನಸೌಧದ ಮುಂಭಾಗದ ನೋಟ — ಕಡತ ಚಿತ್ರ
  • ಕರ್ನಾಟಕ
  • ರಿಯಲ್ ಎಸ್ಟೇಟ್

ಕಾವೇರಿ 2.0: ಜನವರಿ 10ರಿಂದ ಎಲ್ಲ 256 ಕಚೇರಿಗಳಲ್ಲಿ ಕಾಗದರಹಿತ ಆಸ್ತಿ ನೋಂದಣಿ ಎಂದು ಕರ್ನಾಟಕ ಸರ್ಕಾರ ಮಾಹಿತಿ

November 18, 2026 4:17 PM
ಬೆಂಗಳೂರು: ಗಿರಿನಗರದಲ್ಲಿ ಸುಟ್ಟ ಗಾಯಗಳೊಂದಿಗೆ ವ್ಯಕ್ತಿ ಪತ್ತೆ; ಶಂಕಿತ ದಾಳಿಯ ಬಗ್ಗೆ ಪೊಲೀಸ್ ತನಿಖೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಸಂಗ್ರಹ ಚಿತ್ರ; ಘಟನಾ ಸ್ಥಳವಲ್ಲ
  • ಅಪರಾಧ
  • ಬೆಂಗಳೂರು

ಬೆಂಗಳೂರು: ಗಿರಿನಗರದಲ್ಲಿ ಸುಟ್ಟ ಗಾಯಗಳೊಂದಿಗೆ ವ್ಯಕ್ತಿ ಪತ್ತೆ; ಶಂಕಿತ ದಾಳಿಯ ಬಗ್ಗೆ ಪೊಲೀಸ್ ತನಿಖೆ

November 18, 2026 2:02 PM
ಆದಾಯಕ್ಕಿಂತ ಹೆಚ್ಚು ಆಸ್ತಿ ಆರೋಪ: ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಸಂಬಂಧಿತ ಹಾಸನದ ಐದು ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ ಶೋಧದ ವೇಳೆ ಗೇಟ್ ಬಳಿ ಲೋಕಾಯುಕ್ತ ಅಧಿಕಾರಿಗಳಿರುವ ಹಾಸನ ಜಿಲ್ಲೆಯ ಮನೆ
  • ಕರ್ನಾಟಕ

ಆದಾಯಕ್ಕಿಂತ ಹೆಚ್ಚು ಆಸ್ತಿ ಆರೋಪ: ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಸಂಬಂಧಿತ ಹಾಸನದ ಐದು ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ

November 18, 2026 10:49 AM
ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸರ್ಕಾರದ ಗುರಿ: ಗುಂಜೂರಿನಲ್ಲಿ ವಿಶ್ವಬ್ಯಾಂಕ್ ನೆರವಿನ ಕೆಡಬ್ಲ್ಯೂಎಸ್‌ಆರ್‌ಪಿ ಅಡಿ ರೂ 2,000 ಕೋಟಿ ಮೌಲ್ಯದ ಕಾಲುವೆ, ಪ್ರವಾಹ ಕಾಮಗಾರಿಗೆ ಸಿಎಂ ಶಿವಕುಮಾರ್ ಶಂಕುಸ್ಥಾಪನೆ ಗುಂಜೂರಿನ ಶಂಕುಸ್ಥಾಪನೆ ಸಮಾರಂಭದಲ್ಲಿ ಸಚಿವ ಕೃಷ್ಣ ಬೈರೇಗೌಡ ಮತ್ತು ಇತರ ಗಣ್ಯರೊಂದಿಗೆ ವೇದಿಕೆಯಲ್ಲಿ ದೀಪ ಬೆಳಗುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸರ್ಕಾರದ ಗುರಿ: ಗುಂಜೂರಿನಲ್ಲಿ ವಿಶ್ವಬ್ಯಾಂಕ್ ನೆರವಿನ ಕೆಡಬ್ಲ್ಯೂಎಸ್‌ಆರ್‌ಪಿ ಅಡಿ ರೂ 2,000 ಕೋಟಿ ಮೌಲ್ಯದ ಕಾಲುವೆ, ಪ್ರವಾಹ ಕಾಮಗಾರಿಗೆ ಸಿಎಂ ಶಿವಕುಮಾರ್ ಶಂಕುಸ್ಥಾಪನೆ

November 18, 2026 7:04 AM
ಕರ್ನಾಟಕ ಹವಾಮಾನ: ನವೆಂಬರ್ 24ರವರೆಗೆ ಮೂರು ವಿಭಾಗಗಳಿಗೂ ಎಚ್ಚರಿಕೆ ಇಲ್ಲ ಎಂದ IMD ಪಟ್ಟಿಕೆ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ನವೆಂಬರ್ 24ರವರೆಗೆ ಮೂರು ವಿಭಾಗಗಳಿಗೂ ಎಚ್ಚರಿಕೆ ಇಲ್ಲ ಎಂದ IMD ಪಟ್ಟಿಕೆ

November 18, 2026 5:12 AM
ಒಳಮೀಸಲಾತಿ ಅನುಷ್ಠಾನವಾಗಿದೆ, ವ್ಯಾಜ್ಯ ಬಗೆಹರಿದಿದೆ: ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ; ನವೆಂಬರ್ 26ರ ಮೈಸೂರು ಸಂವಿಧಾನ ದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕರೆ ಬೆಂಗಳೂರಿನಲ್ಲಿ ಗೋಲ್ಡನ್ ಅಂಬೇಡ್ಕರ್ ಫೌಂಡೇಷನ್ ಸನ್ಮಾನ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿರುವವರು
  • ಕರ್ನಾಟಕ

ಒಳಮೀಸಲಾತಿ ಅನುಷ್ಠಾನವಾಗಿದೆ, ವ್ಯಾಜ್ಯ ಬಗೆಹರಿದಿದೆ: ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ; ನವೆಂಬರ್ 26ರ ಮೈಸೂರು ಸಂವಿಧಾನ ದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕರೆ

November 17, 2026 11:59 PM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನ ವಿಧಾನಸೌಧದ ಮುಂಭಾಗದ ನೋಟ — ಕಡತ ಚಿತ್ರ
  • ಕರ್ನಾಟಕ
  • ರಿಯಲ್ ಎಸ್ಟೇಟ್

ಕಾವೇರಿ 2.0: ಜನವರಿ 10ರಿಂದ ಎಲ್ಲ 256 ಕಚೇರಿಗಳಲ್ಲಿ ಕಾಗದರಹಿತ ಆಸ್ತಿ ನೋಂದಣಿ ಎಂದು ಕರ್ನಾಟಕ ಸರ್ಕಾರ ಮಾಹಿತಿ

The Bengaluru Live November 18, 2026 4:17 PM
ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಸಂಗ್ರಹ ಚಿತ್ರ; ಘಟನಾ ಸ್ಥಳವಲ್ಲ
  • ಅಪರಾಧ
  • ಬೆಂಗಳೂರು

ಬೆಂಗಳೂರು: ಗಿರಿನಗರದಲ್ಲಿ ಸುಟ್ಟ ಗಾಯಗಳೊಂದಿಗೆ ವ್ಯಕ್ತಿ ಪತ್ತೆ; ಶಂಕಿತ ದಾಳಿಯ ಬಗ್ಗೆ ಪೊಲೀಸ್ ತನಿಖೆ

The Bengaluru Live November 18, 2026 2:02 PM
ಶೋಧದ ವೇಳೆ ಗೇಟ್ ಬಳಿ ಲೋಕಾಯುಕ್ತ ಅಧಿಕಾರಿಗಳಿರುವ ಹಾಸನ ಜಿಲ್ಲೆಯ ಮನೆ
  • ಕರ್ನಾಟಕ

ಆದಾಯಕ್ಕಿಂತ ಹೆಚ್ಚು ಆಸ್ತಿ ಆರೋಪ: ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಸಂಬಂಧಿತ ಹಾಸನದ ಐದು ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ

The Bengaluru Live November 18, 2026 10:49 AM
ಗುಂಜೂರಿನ ಶಂಕುಸ್ಥಾಪನೆ ಸಮಾರಂಭದಲ್ಲಿ ಸಚಿವ ಕೃಷ್ಣ ಬೈರೇಗೌಡ ಮತ್ತು ಇತರ ಗಣ್ಯರೊಂದಿಗೆ ವೇದಿಕೆಯಲ್ಲಿ ದೀಪ ಬೆಳಗುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸರ್ಕಾರದ ಗುರಿ: ಗುಂಜೂರಿನಲ್ಲಿ ವಿಶ್ವಬ್ಯಾಂಕ್ ನೆರವಿನ ಕೆಡಬ್ಲ್ಯೂಎಸ್‌ಆರ್‌ಪಿ ಅಡಿ ರೂ 2,000 ಕೋಟಿ ಮೌಲ್ಯದ ಕಾಲುವೆ, ಪ್ರವಾಹ ಕಾಮಗಾರಿಗೆ ಸಿಎಂ ಶಿವಕುಮಾರ್ ಶಂಕುಸ್ಥಾಪನೆ

The Bengaluru Live November 18, 2026 7:04 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕಾವೇರಿ 2.0: ಜನವರಿ 10ರಿಂದ ಎಲ್ಲ 256 ಕಚೇರಿಗಳಲ್ಲಿ ಕಾಗದರಹಿತ ಆಸ್ತಿ ನೋಂದಣಿ ಎಂದು ಕರ್ನಾಟಕ ಸರ್ಕಾರ ಮಾಹಿತಿ
  • ಬೆಂಗಳೂರು: ಗಿರಿನಗರದಲ್ಲಿ ಸುಟ್ಟ ಗಾಯಗಳೊಂದಿಗೆ ವ್ಯಕ್ತಿ ಪತ್ತೆ; ಶಂಕಿತ ದಾಳಿಯ ಬಗ್ಗೆ ಪೊಲೀಸ್ ತನಿಖೆ
  • ಆದಾಯಕ್ಕಿಂತ ಹೆಚ್ಚು ಆಸ್ತಿ ಆರೋಪ: ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಸಂಬಂಧಿತ ಹಾಸನದ ಐದು ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ
  • ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸರ್ಕಾರದ ಗುರಿ: ಗುಂಜೂರಿನಲ್ಲಿ ವಿಶ್ವಬ್ಯಾಂಕ್ ನೆರವಿನ ಕೆಡಬ್ಲ್ಯೂಎಸ್‌ಆರ್‌ಪಿ ಅಡಿ ರೂ 2,000 ಕೋಟಿ ಮೌಲ್ಯದ ಕಾಲುವೆ, ಪ್ರವಾಹ ಕಾಮಗಾರಿಗೆ ಸಿಎಂ ಶಿವಕುಮಾರ್ ಶಂಕುಸ್ಥಾಪನೆ
©Copyright 2025 The Bengaluru Live All rights reserved. | MoreNews by AF themes.