Home Uncategorized SBI YONO Account: ಪ್ಯಾನ್ ವಿವರ ಅಪ್​ಡೇಟ್ ಮಾಡದಿದ್ದರೆ ಎಸ್​ಬಿಐ ಯೊನೊ ಖಾತೆ ಬ್ಲಾಕ್ ಆಗುತ್ತದೆಯೇ?

SBI YONO Account: ಪ್ಯಾನ್ ವಿವರ ಅಪ್​ಡೇಟ್ ಮಾಡದಿದ್ದರೆ ಎಸ್​ಬಿಐ ಯೊನೊ ಖಾತೆ ಬ್ಲಾಕ್ ಆಗುತ್ತದೆಯೇ?

24
0

ನವದೆಹಲಿ: ಬ್ಯಾಂಕ್ ಗ್ರಾಹಕರ ಹಣಕ್ಕೆ ಕನ್ನ ಹಾಕಲು (Banking Frauds) ಇತ್ತೀಚಿನ ದಿನಗಳಲ್ಲಿ ವಂಚಕರು ಆನ್​ಲೈನ್ ತಾಣಗಳ (Online Frauds) ಮೂಲಕ ಹೊಸ ಹೊಸ ಹಾದಿಗಳನ್ನು ಹುಡುಕುತ್ತಿರುತ್ತಾರೆ. ಎಸ್​ಬಿಐ ಯೊನೊ ಖಾತೆಗೆ (SBI YONO Account) ಸಂಬಂಧಿಸಿದ ಸಂದೇಶವೊಂದು ಇತ್ತೀಚೆಗೆ ಹರಿದಾಡಿದ್ದು, ಅದು ಸುಳ್ಳು ಮಾಹಿತಿ ಎಂಬುದನ್ನು ಸರ್ಕಾರದ ಅಧಿಕೃತ ಫ್ಯಾಕ್ಟ್ ಚೆಕರ್ ತಾಣ ‘ಪಿಐಬಿ ಫ್ಯಾಕ್ಟ್​ಚೆಕ್’ ಬಯಲಿಗೆಳೆದಿದೆ. ಸುಳ್ಳು ಹಾಗೂ ನಕಲಿ ಸಂದೇಶಗಳ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು. ಅಪರಿಚಿತ ಮೂಲಗಳಿಂದ ಬಂದ ಸಂದೇಶಗಳನ್ನು ನಂಬಬಾರದು ಮತ್ತು ಲಿಂಕ್​ಗಳನ್ನು ಕ್ಲಿಕ್​ ಮಾಡಬಾರದು. ಇದರಿಂದ ಹಣ ಕಳೆದುಕೊಳ್ಳುವ ಅಪಾಯವಿದೆ ಎಂದು ‘ಪಿಐಬಿ ಫ್ಯಾಕ್ಟ್​ಚೆಕ್’ ಎಚ್ಚರಿಕೆ ನೀಡಿದೆ.

‘ಪ್ಯಾನ್ ಕಾರ್ಡ್ ವಿವರ ಅಪ್​ಡೇಟ್ ಮಾಡದಿದ್ದರೆ ಎಸ್​ಬಿಐ ಯೊನೊ ಖಾತೆ ಬ್ಲಾಕ್ ಆಗುತ್ತದೆ. ಎಸ್​ಬಿಐ ಯೊನೊ ಖಾತೆಯನ್ನು ಮರಳಿ ಆ್ಯಕ್ಟಿವೇಟ್ ಮಾಡಲು ಪ್ಯಾನ್ ವಿವರಗಳನ್ನು ಅಪ್​ಡೇಟ್ ಮಾಡಿ’ ಎಂಬ ಸಂದೇಶ ಇತ್ತೀಚೆಗೆ ಅನೇಕರ ಮೊಬೈಲ್​ಗೆ ಬಂದಿತ್ತು. ಇದು ಸುಳ್ಳು ಸಂದೇಶ ಎಂದು ‘ಪಿಐಬಿ ಫ್ಯಾಕ್ಟ್​ಚೆಕ್’ ತಿಳಿಸಿದೆ. ಇಂಥ ಸ್ಕ್ಯಾಮ್ ಲಿಂಕ್​ಗಳನ್ನು ಕ್ಲಿಕ್ ಮಾಡುವುದರಿಂದ ಬ್ಯಾಂಕ್ ಖಾತೆಯಿಂದ ಹಣ ಕಳವಾಗಬಹುದು. ವೈಯಕ್ತಿಕ ದತ್ತಾಂಶಗಳೂ ಸೋರಿಕೆಯಾಗಬಹುದು ಎಂದು ಅದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Online Fraud Awareness: ಆನ್​ಲೈನ್ ಶಾಪಿಂಗ್ ವೇಳೆ ವಂಚನೆಗಳಿಂದ ರಕ್ಷಣೆಗೆ ಈ ವಿಧಾನಗಳನ್ನು ಅನುಸರಿಸಿ

A #Fake message impersonating @TheOfficialSBI claims that the recipient’s YONO account has been blocked#PIBFactCheck

Never respond to emails/SMS asking to share your banking details

If you have received any similar message, report immediately on report.phishing@sbi.co.in pic.twitter.com/F3BU1Y3XoY

— PIB Fact Check (@PIBFactCheck) December 18, 2022

‘ಯೊನೊ ಖಾತೆ ಬ್ಲಾಕ್ ಆಗಿದೆ ಎಂಬ ಸಂದೇಶ ಎಸ್​ಬಿಐ ಕಚೇರಿ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಬರುತ್ತದೆ. ಇ-ಮೇಲ್ ಅಥವಾ ಎಸ್​ಎಂಎಸ್ ಮೂಲಕ ಇಂಥ ಸಂದೇಶದ ಬಂದಲ್ಲಿ ಪ್ರತಿಕ್ರಿಯಿಸಬೇಡಿ. ಬ್ಯಾಂಕಿಂಗ್ ಮಾಹಿತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಇಂಥ ಸಂದೇಶ ನಿಮಗೆ ಬಂದಲ್ಲಿ ತಕ್ಷಣವೇ report.phishing@sbi.co.in ಗೆ ಮೇಲ್ ಮಾಡಿ’ ಎಂದು ‘ಪಿಐಬಿ ಫ್ಯಾಕ್ಟ್​ಚೆಕ್’ ಸಲಹೆ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here