Home ರಾಜಕೀಯ ಎಸ್‍ಸಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಅನುದಾನ ನೀಡಲು ಮನವಿ

ಎಸ್‍ಸಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಅನುದಾನ ನೀಡಲು ಮನವಿ

39
0

ಬೆಂಗಳೂರು:

ಪರಿಶಿಷ್ಟ ಜಾತಿ ಸಮುದಾಯಕ್ಕೆ ಈ ಬಾರಿ ರಾಜ್ಯ ಬಜೆಟ್‍ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಣ ಹಂಚಿಕೆ ಮಾಡುವಂತೆ ಬಿಜೆಪಿ ಎಸ್‍ಸಿ ಮೋರ್ಚಾ ಮನವಿ ಮಾಡಿದೆ.

ಮೋರ್ಚಾದ ರಾಜ್ಯ ಅಧ್ಯಕ್ಷರಾದ ಶ್ರೀ ನಾರಾಯಣಸ್ವಾಮಿ ಚಲವಾದಿ ಅವರ ಅಧ್ಯಕ್ಷತೆಯಲ್ಲಿ ನಗರದ ಶಾಸಕರ ಭವನದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ವಿನಂತಿಸಲಾಯಿತು. ಕೆಐಎಡಿಬಿ ಸಬ್ಸಿಡಿಯನ್ನು ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಶೇಕಡಾ 50ರಿಂದ ಶೇಕಡಾ 75ಕ್ಕೆ ಹೆಚ್ಚಿಸಿದ ಬಗ್ಗೆ ಸಭೆಯಲ್ಲಿ ಅಭಿನಂದಿಸಲಾಯಿತು ಹಾಗೂ ಮುಂಬರುವ ರಾಜ್ಯ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಹೆಚ್ಚಿನ ಅನುದಾನಗಳನ್ನು ಒದಗಿಸಲು ಮನವಿ ಮಾಡಲಾಯಿತು.

ಎಸ್‍ಸಿಎಸ್‍ಪಿ/ ಎಸ್‍ಟಿಪಿ ವಿಭಾಗದಡಿ ಮೀಸಲಿಟ್ಟ ಹಣದಲ್ಲಿ ಶೇಕಡಾ 43 ಮಾತ್ರ ಖರ್ಚಾಗಿದ್ದು, ಉಳಿಕೆ ಶೇಕಡಾ 57 ಹಣ ಸರಕಾರಕ್ಕೆ ವಾಪಸ್ ಹೋಗಿರುವ ಕುರಿತು ಸಭೆಯಲ್ಲಿ ಚರ್ಚಿಸಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಲು ಮತ್ತು ಅನುದಾನ ಸದ್ಬಳಕೆ ಕುರಿತು ಮುಖ್ಯಮಂತ್ರಿಗಳಿಗೆ ಸಲಹೆ ನೀಡುವ ಕುರಿತು ಚರ್ಚಿಸಲಾಯಿತು. ಎಸ್‍ಸಿಎಸ್‍ಪಿ/ ಎಸ್‍ಟಿಪಿ ಅನುದಾನ ಬಳಕೆಗೆ ತೊಡಕಾಗಿರುವ 7ಡಿ ಕಾಯ್ದೆಯನ್ನು ರದ್ದುಪಡಿಸಲು ಸಭೆಯು ಮನವಿ ಮಾಡಿತು.

ವಿದ್ಯಾರ್ಥಿವೇತನವನ್ನು ಹೆಚ್ಚಿಸಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆ ಮನವಿ ಮಾಡಿದೆ. ಎಲ್ಲಾ ಎಸ್‍ಸಿ ಗುತ್ತಿಗೆದಾರರಿಗೆ ಗುತ್ತಿಗೆ ಇಎಂಡಿ 50 ಲಕ್ಷ ಇರುವುದನ್ನು ಒಂದು ಕೋಟಿಗೆ ಹೆಚ್ಚಿಸಬೇಕೆಂದು ಮನವಿ ಮಾಡಲಾಯಿತು.

ಚಿತ್ರದುರ್ಗ ಸಂಸದರಾದ ಶ್ರೀ ಎ.ನಾರಾಯಣಸ್ವಾಮಿ, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಶಂಕರಪ್ಪ, ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಬಾಬುರಾವ್ ಮುಡಬಿ, ಕೆಪಿಎಸ್ಸಿ ಮಾಜಿ ಸದಸ್ಯರಾದ ಡಾ. ಮಹಾದೇವ್, ವಿಶ್ರಾಂತ ಉಪ ಕುಲಪತಿಗಳಾದ ಶ್ರೀ ಒ. ಅನಂತರಾಮಯ್ಯ, ದಲಿತ ಉದ್ದಿಮೆದಾರರ ಸಂಘದ ಗೌರವಾಧ್ಯಕ್ಷರಾದ ಶ್ರೀ ಶ್ರೀನಿವಾಸನ್, ಎಸ್‍ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಬೆಟ್ಟಹಳ್ಳಿ, ಉಪಾಧ್ಯಕ್ಷರಾದ ಶ್ರೀ ಎಂ.ವೆಂಕಟೇಶ್, ಶ್ರೀ ಈಶಪ್ಪ ಹಿರೇಮನಿ, ಕಾರ್ಯದರ್ಶಿಯಾದ ಶ್ರೀ ವೆಂಕಟೇಶ್ ದೊಡ್ಡೇರಿ, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here