Home ಶಿಕ್ಷಣ ಜುಲೈ 1ರಿಂದ ಶಾಲೆಗಳು ಆರಂಭ, ಜೂ 15ರಿಂದ ದಾಖಲಾತಿ ಪ್ರಕ್ರಿಯೆ: ಎಸ್‌.ಸುರೇಶ್‌ಕುಮಾರ್

ಜುಲೈ 1ರಿಂದ ಶಾಲೆಗಳು ಆರಂಭ, ಜೂ 15ರಿಂದ ದಾಖಲಾತಿ ಪ್ರಕ್ರಿಯೆ: ಎಸ್‌.ಸುರೇಶ್‌ಕುಮಾರ್

160
0

ಕೋವಿಡ್‌ ಪರಿಸ್ಥಿತಿ ಗಮನಿಸಿ, ಆನ್‌ಲೈನ್‌ ಅಥವಾ ಭೌತಿಕ ತರಗತಿಗಳನ್ನು ನಡೆಸುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು

ಬೆಂಗಳೂರು:

ಕೋವಿಡ್‌-19 ಅಲೆಯ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದ ಆರಂಭದ ಕುರಿತು ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆದಿರುವ ರಾಜ್ಯ ಸರ್ಕಾರ ಜುಲೈ 1ರಿಂದ ಶಾಲೆಗಳು ಆರಂಭಗೊಳ್ಳಲಿವೆ ಎಂದು ಘೋಷಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಈ ವಿಷಯ ತಿಳಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್, ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಜೂನ್‌ 15ರಿಂದ ದಾಖಲಾತಿ ಆರಂಭಗೊಳ್ಳಲಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ.

Screenshot 316 1
Screenshot 317 1
Screenshot 318 1

ಕೋವಿಡ್‌ ಪರಿಸ್ಥಿತಿ ಗಮನಿಸಿ, ಆನ್‌ಲೈನ್‌ ಅಥವಾ ಭೌತಿಕ ತರಗತಿಗಳನ್ನು ನಡೆಸುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಪೋಷಕರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಖಾಸಗಿ ಶಾಲೆಗಳ ಶುಲ್ಕ ನಿಗದಿಗೆ ಸಂಬಂಧಿಸಿದ ವಿವಾದ ಹೈಕೋರ್ಟ್‌ ಮುಂದೆ ಇದೆ. ಅಲ್ಲಿ ಸರ್ಕಾರದ ಪರ ವಾದವನ್ನು ಮಂಡಿಸಲಾಗಿದೆ. ನ್ಯಾಯಾಲಯ ಶೀಘ್ರ ತೀರ್ಪು ನೀಡಿದಲ್ಲಿ ಎಲ್ಲಾ ಗೊಂದಲಗಳಿಗೆ ಉತ್ತರ ದೊರೆಯಲಿದೆ ಎಂದರು.

LEAVE A REPLY

Please enter your comment!
Please enter your name here