Home ದಾವಣಗೆರೆ Prime Minister Narendra Modi: ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ; ಅದೊಂದು...

Prime Minister Narendra Modi: ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ; ಅದೊಂದು ವಿಫಲ ಪ್ರಯತ್ನವಾಗಿತ್ತು!

91
0
Security lapse during Prime Minister Narendra Modi's road show in Davangere; It was a failed attempt!

ದಾವಣಗೆರೆ:

ದಾವಣಗೆರೆಯಲ್ಲಿಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ವೇಳೆಯಲ್ಲಿ ಭದ್ರತಾ ಲೋಪ ಉಂಟಾಗಿದೆ. ಆದರೆ ಪ್ರಧಾನಿಯವರಂತೆ ಯಾವುದೇ ಭದ್ರತಾ ಉಲ್ಲಂಘನೆಯಾಗಿಲ್ಲ. ಅದೊಂದು ವಿಫಲ ಪ್ರಯತ್ನವಾಗಿತ್ತು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಹೆಲಿಪ್ಯಾಡ್ ನಿಂದ ಮಹಾಸಂಗಮ ಸಮಾವೇಶದ ಕಾರ್ಯಕ್ರಮಕ್ಕೆ ರೋಡ್ ಶೋ ಮೂಲಕ ತೆರಳುತ್ತಿದ್ದಾಗ ಯುವಕನೊಬ್ಬ ಪ್ರಧಾನಿ ಬೆಂಗಾವಲು ವಾಹನದತ್ತ ತೆರಳಲು ಪ್ರಯತ್ನಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಸಮಾವೇಶದ ಮೂರು ಕಡೆಗಳಲ್ಲಿ ಭದ್ರತಾ ಲೋಪವಾಗಿದೆ ಪ್ರಧಾನಿ ಮೋದಿ ಭಾಷಣ ವೇಳೆ ಬಿಎಸ್ ಯಡಿಯೂರಪ್ಪ ಹೆಸರು ಪ್ರಸ್ತಾಪಿಸಿದಾಗ ಜನರು ಜೋರಾಗಿ ಕೂಗಿದ್ದಾರೆ. ಅಲ್ಲದೇ ಬಿಎಸ್ ವೈ ಭಾಷಣ ಮಾಡುವಾಗಲೂ ಆದೇ ರೀತಿಯಲ್ಲಿ ಕೂಗಿದ್ದಾರೆ. ಬ್ಯಾರಿಕೇಡ್ ಮುರಿದು ರಸ್ತೆ ಕಡೆಗೆ ಜನರ ಗುಂಪೊಂದು ತೆರಳಿರುವುದಾಗಿ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿ: “ಮಾಧ್ಯಮದ ಒಂದು ವಿಭಾಗದಲ್ಲಿ ವರದಿಯಾಗಿರುವಂತೆ, ಇಂದು ದಾವಣಗೆರೆಯಲ್ಲಿ ಮಾನ್ಯ ಪ್ರಧಾನಿಯವರಂತೆ ಯಾವುದೇ ಭದ್ರತಾ ಉಲ್ಲಂಘನೆಯಾಗಿಲ್ಲ. ಅದೊಂದು ವಿಫಲ ಪ್ರಯತ್ನವಾಗಿತ್ತು. ಅವರನ್ನು ನಾನು ಮತ್ತು ಎಸ್‌ಪಿಜಿ ಸುರಕ್ಷಿತ ದೂರದಲ್ಲಿ ತಕ್ಷಣವೇ ಹಿಡಿದೆವು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.” ತಿಳಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಮೋದಿ ಭದ್ರತೆಯಲ್ಲಿ ಲೋಪ ಆಗಿಲ್ಲ: ಎಡಿಜಿಪಿ ಅಲೋಕ್ ಕುಮಾರ್ 

LEAVE A REPLY

Please enter your comment!
Please enter your name here