Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಹಾವೇರಿ
  • ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  • ಹಾವೇರಿ

ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

The Bengaluru Live February 12, 2022 8:00 PM 1 minute read
Separate Milk Union for Haveri District: Karnataka Chief Minister

ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಹಾವೇರಿ:

ಹಾವೇರಿ ಜಿಲ್ಲೆಗೆ ಪ್ರತ್ಯೇಕವಾದ ಹಾಲು ಒಕ್ಕೂಟ ಸ್ಥಾಪಿಸುವ ಪ್ರಕ್ರಿಯೆಯೂ ಅಂತಿಮ ಘಟ್ಟದಲ್ಲಿದ್ದು, ಅಧಿವೇಶನದ ನಂತರ ಪ್ರತ್ಯೇಕ ಮಾಡಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹಾವೇರಿ ಜಿಲ್ಲೆಯ ಹಿರೇಬೆಂಡಿಗೇರಿ ಗ್ರಾಮದಲ್ಲಿ ಸವಣೂರು ಏತ ನೀರಾವರಿ ಯೋಜನೆಯಡಿ 48 ಕೆರೆಗಳಿಗೆ ತುಂಬಿಸುವ ಯೋಜನೆಯಡಿ ತುಂಬಿರುವ ಕೆರೆಗೆ ಬಾಗಿನ ಅಪೀಸಿದ ನಂತರ ಮಾತನಾಡುತ್ತಿದ್ದರು.

ಹಾವೇರಿ ಜಿಲ್ಲೆಯ ಹಿರೇಬೆಂಡಿಗೇರಿ ಗ್ರಾಮದಲ್ಲಿ ಸವಣೂರು ಏತ ನೀರಾವರಿ ಯೋಜನೆಯಡಿ 48 ಕೆರೆಗಳಿಗೆ ತುಂಬಿಸುವ ಯೋಜನೆ ಪೂರ್ಣಗೊಂಡಿದೆ. ಸವಣೂರು ಕ್ಷೇತ್ರದಲ್ಲಿಯಲ್ಲದೆ, 14000 ಎಕರೆ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿವೆ. ಬ್ಯಾಡಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳನ್ನು ಅಧಿವೇಶನದ ನಂತರ ಉದ್ಘಾಟನೆಗೊಳ್ಳಲಿವೆ ಎಂದರು.

ಜಲಸಂಪನ್ಮೂಲ ಸಚಿವರಾದ @GovindKarjol , ಜಿಲ್ಲಾ ಉಸ್ತುವಾರಿ ಸಚಿವರಾದ @ShivaramHebbar, ಇತರರು ಉಪಸ್ಥಿತರಿದ್ದರು.

— CM of Karnataka (@CMofKarnataka) February 12, 2022

ರಾಜ್ಯದಲ್ಲಿ ಶಾಂತಿ ನೆಲಸಬೇಕು: ವಸ್ತ್ರಸಂಹಿತೆಗೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿಗಳು “ರಾಜ್ಯದಲ್ಲಿ ಶಾಂತಿ ನೆಲಸಬೇಕು. ಉಚ್ಛ ನ್ಯಾಯಾಲಯದ ಆದೇಶವನ್ನು ಪರಿಪೂರ್ಣವಾಗಿ ಜಾರಿ ಮಾಡಬೇಕು. ಮಕ್ಕಳು ಯಾವುದೇ ಭೇಧಭಾವವಿಲ್ಲದೆ, ಒಮ್ಮನಸ್ಸಿನಿಂದ ಮೊದಲಿನಂತೆ ವಿದ್ಯಾರ್ಜನೆ ಮಾಡುವಂತೆ ಮಾಡುವುದು ನನ್ನ ಮೊದಲ ಕರ್ತವ್ಯ” ಎಂದರು.

ಆಯವ್ಯಯ: ರಾಜ್ಯದ ಆಯವ್ಯಯ ಪ್ರಕ್ರಿಯೆ ಪ್ರಾರಂಭವಾಗಿದೆ. ಬಹುತೇಕ ಎಲ್ಲಾ ಇಲಾಖೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲಾಗಿದೆ. ನಂತರ ಸಂಘಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಾಗುವುದು. ಕೇಂದ್ರ ಸರ್ಕಾರದ ಯೋಜನೆಗಳಿಗೆ ಪೂರಕವಾಗಿ ರಾಜ್ಯ ಸರ್ಕಾರದ ಯೋಜನೆಗಳನ್ನು ರೂಪಿಸಿ ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡನೆ ಮಾಡಲಾಗುವುದು ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕೋವಿಡ್ ಇಲ್ಲದ ಸಂದರ್ಭದಲ್ಲಿಯೂ ಅತಿ ಹೆಚ್ಚು ಸಾಲವನ್ನು ಮಾಡಿದ ಸರ್ಕಾರ ಎಂಬ ಶ್ರೇಯಸ್ಸು ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಹಿಂದಿನ ಸಾಲಗಳನ್ನು ನಿಭಾಯಿಸಿ, ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಹಿಂಜರಿತವನ್ನೂ ನಿಭಾಯಿಸಿ, ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಂಪನ್ಮೂಲಗಳನ್ನು ಹೆಚ್ಚಿಸಲು ಸರ್ವ ಪ್ರಯತ್ನವನ್ನೂ ನಮ್ಮ ಸರ್ಕಾರದಿಂದ ಮಾಡಲಾಗುತ್ತಿದೆ. ಎಲ್ಲವನ್ನೂ ಸರಿದೂಗಿಸಿ ಆಯವ್ಯಯವನ್ನು ಮಂಡಿಸಲಾಗುವುದು ಎಂದರು.

ರಾಷ್ಟ್ರಕವಿ: ಕನ್ನಡ ಸಾಹಿತ್ಯ ಪರಿಷತ್ ಅಭಿಲಾಷೆಯಂತೆ ಹಿರಿಯ ಕವಿ ಚನ್ನವೀರ ಕಣವಿ ಅವರಿಗೆ ರಾಷ್ಟ್ರಕವಿ ಬಿರುದು ನೀಡಬೇಕೆನ್ನುವ ಬೇಡಿಕೆಯನ್ನು ಪರಿಗಣಿಸಿ ಶಿಫಾರಸ್ಸು ಮಾಡಲಾಗುವುದು ಎಂದರು.

About the Author

The Bengaluru Live

Administrator

Visit Website View All Posts

Post navigation

Previous: ಫೆಬ್ರವರಿ 14 ರಂದು ಜಂಟಿ ಅಧಿವೇಶನ : ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣ
Next: ಸೋಮವಾರದಿಂದ ಪ್ರೌಢಶಾಲೆಗಳ ಪುನರಾರಂಭ: ತರಗತಿಗಳು ಶಾಂತಿಯುತವಾಗಿ ನಡೆಯುವ ವಿಶ್ವಾಸ ವ್ಯಕ್ತಪಡಿದ ಮುಖ್ಯಮಂತ್ರಿ

Related Stories

‘ಹಿಂದೂ ವಿರೋಧಿ’ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ ಘೋಷಿಸಿದ ವಿಜಯೇಂದ್ರ; ಬಿಡದಿ ಭೂಮಿ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ
  • ಹಾವೇರಿ

‘ಹಿಂದೂ ವಿರೋಧಿ’ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ ಘೋಷಿಸಿದ ವಿಜಯೇಂದ್ರ; ಬಿಡದಿ ಭೂಮಿ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

The Bengaluru Live July 16, 2026 12:00 PM
ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್ ಹಾವೇರಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ವರ್ಗಾವಣೆ
  • ಬೆಂಗಳೂರು ನಗರ
  • ಹಾವೇರಿ

ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್ ಹಾವೇರಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ವರ್ಗಾವಣೆ

The Bengaluru Live May 5, 2026 7:30 PM
ಹಾವೇರಿಯಲ್ಲಿ ಕೆಎಸ್‌ಆರ್‌ಟಿಸಿ ‘ಪಲ್ಲಕ್ಕಿ’ ಬಸ್ ಅಗ್ನಿಗಾಹುತಿಯಾಯ್ತು; 17 ಪ್ರಯಾಣಿಕರು ಕೂದಲಂಚಿನಲ್ಲೇ ಪಾರು
  • ಅಪರಾಧ
  • ಹಾವೇರಿ

ಹಾವೇರಿಯಲ್ಲಿ ಕೆಎಸ್‌ಆರ್‌ಟಿಸಿ ‘ಪಲ್ಲಕ್ಕಿ’ ಬಸ್ ಅಗ್ನಿಗಾಹುತಿಯಾಯ್ತು; 17 ಪ್ರಯಾಣಿಕರು ಕೂದಲಂಚಿನಲ್ಲೇ ಪಾರು

The Bengaluru Live May 5, 2026 4:54 PM

Latest Post

ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್ ಕನ್ನಡ ರಾಜ್ಯೋತ್ಸವ ಬ್ಯಾನರ್ ಮುಂದೆ ವೇದಿಕೆಯಲ್ಲಿ ಹಳದಿ ಮತ್ತು ಕೆಂಪು ಉಡುಪಿನ ಮಕ್ಕಳು ಮಾನವ ಗೋಪುರ ರಚಿಸಿರುವುದು

ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್

November 20, 2026 12:34 AM
ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಸರ್ಕಾರದ ಆದೇಶ; ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ ರಾಜ್ಯದಲ್ಲಿ ಹೊಸ ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆ ಎಂಬ ವಿಷಯದ ಕರ್ನಾಟಕ ಸರ್ಕಾರದ ಆದೇಶದ ಮೊದಲ ಪುಟ

ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಸರ್ಕಾರದ ಆದೇಶ; ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ

November 19, 2026 11:37 PM
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣೆ; ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷಕ್ಕೆ ಅವಕಾಶ ಬೇಡ ಎಂದ ಸಿಎಂ ಶಿವಕುಮಾರ್ ಶೈಕ್ಷಣಿಕ ಸಾರಥ್ಯ ಬ್ಯಾನರ್ ಅಡಿ ವೇದಿಕೆಯಲ್ಲಿ ಇತರ ಗಣ್ಯರೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣೆ; ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷಕ್ಕೆ ಅವಕಾಶ ಬೇಡ ಎಂದ ಸಿಎಂ ಶಿವಕುಮಾರ್

November 19, 2026 9:36 PM
ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಚರ್ಚೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಚರ್ಚೆ

November 19, 2026 9:15 PM
ಬೆಂಗಳೂರು ಟೆಕ್ ಸಮಿಟ್ 2026 ಸಮಾರೋಪ: 24 ವಿಸಿ ಸಂಸ್ಥೆಗಳಿಂದ ಡೀಪ್‌ಟೆಕ್‌ಗೆ ₹1,050 ಕೋಟಿ ಹೂಡಿಕೆ ಘೋಷಣೆ; ದೇಶದ ಜಿಸಿಸಿಗಳಲ್ಲಿ ಕರ್ನಾಟಕದ ಪಾಲು ಶೇ 51 ಬ್ಯಾನರ್‌ಗಳಿರುವ ದೊಡ್ಡ ಪ್ರದರ್ಶನ ಸಭಾಂಗಣದಲ್ಲಿ ಸೋಫಾ ಮತ್ತು ಕುರ್ಚಿಗಳ ಮೇಲೆ ಕುಳಿತಿರುವ ಪ್ರತಿನಿಧಿಗಳ ಸಾಲುಗಳು

ಬೆಂಗಳೂರು ಟೆಕ್ ಸಮಿಟ್ 2026 ಸಮಾರೋಪ: 24 ವಿಸಿ ಸಂಸ್ಥೆಗಳಿಂದ ಡೀಪ್‌ಟೆಕ್‌ಗೆ ₹1,050 ಕೋಟಿ ಹೂಡಿಕೆ ಘೋಷಣೆ; ದೇಶದ ಜಿಸಿಸಿಗಳಲ್ಲಿ ಕರ್ನಾಟಕದ ಪಾಲು ಶೇ 51

November 19, 2026 8:55 PM
ಬೆಂಗಳೂರಿನ 88 ರಸ್ತೆಗಳ ವೈಟ್ ಟಾಪಿಂಗ್‌ಗೆ 4ನೇ ಹಂತದಲ್ಲಿ ₹2,321 ಕೋಟಿ; ಸೆಂಟ್ರಲ್ ಸಿಲ್ಕ್ ಬೋರ್ಡ್–ಕೆ.ಆರ್. ಪುರ ಒಆರ್‌ಆರ್‌ಗೆ ₹487 ಕೋಟಿ ಅನುಮೋದನೆ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ವೇಳೆ ನಿರ್ಮಾಣ ಹಂತದ ರಸ್ತೆಯ ಮೇಲೆ ನಿಂತಿರುವ ಅಧಿಕಾರಿಗಳು
  • Uncategorized

ಬೆಂಗಳೂರಿನ 88 ರಸ್ತೆಗಳ ವೈಟ್ ಟಾಪಿಂಗ್‌ಗೆ 4ನೇ ಹಂತದಲ್ಲಿ ₹2,321 ಕೋಟಿ; ಸೆಂಟ್ರಲ್ ಸಿಲ್ಕ್ ಬೋರ್ಡ್–ಕೆ.ಆರ್. ಪುರ ಒಆರ್‌ಆರ್‌ಗೆ ₹487 ಕೋಟಿ ಅನುಮೋದನೆ

November 19, 2026 8:37 PM

ನೀವು ತಪ್ಪಿಸಿಕೊಂಡಿರಬಹುದು

ಕನ್ನಡ ರಾಜ್ಯೋತ್ಸವ ಬ್ಯಾನರ್ ಮುಂದೆ ವೇದಿಕೆಯಲ್ಲಿ ಹಳದಿ ಮತ್ತು ಕೆಂಪು ಉಡುಪಿನ ಮಕ್ಕಳು ಮಾನವ ಗೋಪುರ ರಚಿಸಿರುವುದು

ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್

The Bengaluru Live November 20, 2026 12:34 AM
ರಾಜ್ಯದಲ್ಲಿ ಹೊಸ ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆ ಎಂಬ ವಿಷಯದ ಕರ್ನಾಟಕ ಸರ್ಕಾರದ ಆದೇಶದ ಮೊದಲ ಪುಟ

ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಸರ್ಕಾರದ ಆದೇಶ; ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ

The Bengaluru Live November 19, 2026 11:37 PM
ಶೈಕ್ಷಣಿಕ ಸಾರಥ್ಯ ಬ್ಯಾನರ್ ಅಡಿ ವೇದಿಕೆಯಲ್ಲಿ ಇತರ ಗಣ್ಯರೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣೆ; ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷಕ್ಕೆ ಅವಕಾಶ ಬೇಡ ಎಂದ ಸಿಎಂ ಶಿವಕುಮಾರ್

The Bengaluru Live November 19, 2026 9:36 PM
ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಚರ್ಚೆ

The Bengaluru Live November 19, 2026 9:15 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಲೋಕಭವನದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ: ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಣೆ ಅಗತ್ಯ ಎಂದ ರಾಜ್ಯಪಾಲೆ ಸುಧಾ ಯಾದವ್
  • ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಸರ್ಕಾರದ ಆದೇಶ; ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ
  • ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ವಿತರಣೆ; ಕಾಲೇಜುಗಳಲ್ಲಿ ಧರ್ಮ, ಜಾತಿ, ದ್ವೇಷಕ್ಕೆ ಅವಕಾಶ ಬೇಡ ಎಂದ ಸಿಎಂ ಶಿವಕುಮಾರ್
  • ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಚರ್ಚೆ
©Copyright 2025 The Bengaluru Live All rights reserved. | MoreNews by AF themes.