ಬೆಂಗಳೂರು:
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆಂಬ ಆರೋಪಿತ ಯುವತಿ ಪೊಲೀ ಸ್ ಆಯುಕ್ತರಿಗೆ ಪತ್ರ ಬರೆದು ಎಸ್ಐಟಿ ತನಿಖೆಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾಳೆ.ಪ್ರಕರಣದಲ್ಲಿ ನನ್ನನ್ನೆ ಆರೋ ಪಿ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ.ನಿಜವಾದ ಆರೋಪಿ ರಮೇಶ್ ಜಾಕಿಹೊಳಿ ಯನ್ನು ವಿಚಾರಣೆ ನಡೆಸು ವುದಾಗಲೀ,ಅಥವಾ ಪರಿಶೀಲನಗೆ ಎಸ್ಐಟಿ ಒಳಪಡಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.
ಇಂದು ಸಿಡಿ ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಮೂಲಕ ಪೊಲೀಸ್ ಆಯುಕ್ತರಿಗೆ ರವಾನಿಸಿರುವ ಪತ್ರ ದಲ್ಲಿ, ಎಸ್ಐಟಿ ತನಿಖೆ ಹಾದಿ ಮತ್ತು ಪೊಲೀಸರ ವರ್ತನೆ ಬಗ್ಗೆ ಸಂಶಯ ವ್ಯಕ್ತಡಿಸಿದ್ದಾಳೆ.ಪ್ರಕರಣದ ಸಂತ್ರಸ್ಥೆ ಯನ್ನು ಅಭಿಪ್ರಾಯ ಪಡೆಯದೆ ಸರ್ಕಾರ ರಮೇಶ್ ಜಾರಕಿಹೊಳಿ ಪರ ವಕಾಲತ್ತು ವಹಿಸಲು ಸರ್ಕಾರಿ ವಿಶೇಷ ಅಭಿಯೋಜಕರನ್ನು ನೇಮಿಸುವ ಮೂಲಕ ಅವರನ್ನು ಪ್ರಕರಣದಿಂದ ಹೊರತರುವ ಪ್ರಯತ್ನ ನಡೆಸಿದೆ.
ಮತ್ತೊಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಆರೋಪ ದಿಂದ ಮುಕ್ತರಾಗಿ ಹೊರಬರಲಿ ದ್ದಾರೆ ಎಂದು ಹೇಳಿಕೆ ನೀಡಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾ ಗಿದೆ.ಎಸ್ಐಟಿ ಮೇಲೆ ಸರ್ಕಾರ ಒತ್ತಡ ತಂದು ತನಿಖೆಯ ಹಾದಿ ತಪ್ಪಿಸುವ ಮೂಲಕ ನನ್ನನ್ನೇ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ.