ಕೇವಲ ವಿಚಾರಣೆಯನ್ನಷ್ಟೇ; ಬಂಧಿಸುವ ಅಧಿಕಾರ ಎಸ್‌ಐಟಿಗೆ ಇಲ್ಲ
ಬೆಂಗಳೂರು:
ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ ಪ್ರಕರಣದ ವಿಚಾರಣೆಗಾಗಿ ಬೆಂಗಳೂರು ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೆಂದು ಮುಖರ್ಜಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ದಳದ (ಎಸ್‌ಐಟಿ) ತಂಡ ರಚಿಸಲಾಗಿದೆ. ಸುದ್ದಿ ವಾಹಿನಿಗಳ ಇಬ್ಬರು ವರದಿಗಾರರನ್ನು ವಿಚಾರಣೆಗೆ ಒಳಪಡಿಸಿದೆ. ಮೂವರು ವರದಿಗಾರರು ನಾಪತ್ತೆಯಾಗಿದ್ದು, ಅವರನ್ನೂ ವಿಚಾರಣೆಗೆ ಒಳಪಡಿಸಲು ಹುಡುಕಾಟ ನಡೆದಿದೆ.
ವ್ಯಕ್ತಿಗಳನ್ನು ವಶಕ್ಕೆ ಪಡೆಯುವ ಹಾಗೂ ಬಂಧಿಸುವ ಅಧಿಕಾರ ಎಸ್‌ಐಟಿಗೆ ಇಲ್ಲ. ಕೇವಲ ವಿಚಾರಣೆಯನ್ನಷ್ಟೇ ನಡೆಸಿ ಮಾಹಿತಿ ಕಲೆಹಾಕುತ್ತೇನೆ. ಅಂತಿಮ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಸರ್ಕಾರವೇ ಮುಂದಿನ ಕ್ರಮ ಕೈಗೊಳ್ಳಲಿದೆ, ಎಂದೂ ಮೂಲಗಳು ತಿಳಿಸಿವೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಮಿಷನರ್ ಕಮಲ್ ಪಂತ್, ಸಿ.ಡಿ. ಪ್ರಕರಣದ ವಿಚಾರಣೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೆಂದು ಮುಖರ್ಜಿ ನೇತೃತ್ವದ ಎಸ್‌ಐಟಿ, ವರದಿಗಾರರನ್ನು ಕಚೇರಿಗೆ ಕರೆಸಿಕೊಂಡು ಮಾಹಿತಿ ಕಲೆಹಾಕುತ್ತಿದೆ. ಮೂವರು ವರದಿಗಾರರು ನಾಪತ್ತೆಯಾಗಿದ್ದು, ಅವರನ್ನೂ ವಿಚಾರಣೆಗೆ ಒಳಪಡಿಸಲು ಹುಡುಕಾಟ ನಡೆದಿದೆ.
ಈಗಾಗಲೇ ಎಸ್‌ಐಟಿ ತನಿಖೆ ಆರಂಭಿಸಿದೆ. ಪ್ರಾಥಮಿಕ ಮಾಹಿತಿಯನ್ನೂ ಕಲೆ ಹಾಕುತ್ತಿದೆ. ಯಾರನ್ನಾದರೂ ವಿಚಾರಣೆ ನಡೆಸಬೇಕಾದ ಅಗತ್ಯವಿದ್ದರೆ, ಎಸ್‌ಐಟಿ ತಂಡದವರೇ ನೋಟಿಸ್ ನೀಡಲಿದ್ದಾರೆ ಎಂದೂ ಪಂತ್ ಹೇಳಿದರು.
‘ಪ್ರಕರಣದಲ್ಲಿ ವಿಡಿಯೊ ಮೂಲವನ್ನು ಕಲೆ ಹಾಕಬೇಕಿದೆ. ಹೀಗಾಗಿ ವರದಿಗಾರರನ್ನು ವಿಚಾರಣೆಗೆ ಒಳಪಡಿಸಿದ್ದೇವೆ’ ಎಂದು ಮೂಲಗಳು ಹೇಳಿವೆ.‘ವ್ಯಕ್ತಿಗಳನ್ನು ವಶಕ್ಕೆ ಪಡೆಯುವ ಹಾಗೂ ಬಂಧಿಸುವ ಅಧಿಕಾರ ಎಸ್‌ಐಟಿಗೆ ಇಲ್ಲ. ಕೇವಲ ವಿಚಾರಣೆಯನ್ನಷ್ಟೇ ನಡೆಸಿ ಮಾಹಿತಿ ಕಲೆಹಾಕುತ್ತೇನೆ. ಅಂತಿಮ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಸರ್ಕಾರವೇ ಮುಂದಿನ ಕ್ರಮ ಕೈಗೊಳ್ಳಲಿದೆ’ ಎಂದೂ ಮೂಲಗಳು ತಿಳಿಸಿವೆ.