Home ಅಪರಾಧ ಸಿಡಿ ಪ್ರಕರಣ: ಯುವತಿ ಅಪಹರಣ ಎಂದು ದೂರು

ಸಿಡಿ ಪ್ರಕರಣ: ಯುವತಿ ಅಪಹರಣ ಎಂದು ದೂರು

348
0

ಬೆಳಗಾವಿ:

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಕಾರಣವಾದ ಸಿಡಿ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಸಿಡಿಯಲ್ಲಿರುವ ಯುವತಿಯ ತಂದೆ ಪ್ರಕಾಶ್ ಯುವತಿಯನ್ನು ಅಪಹರಣ ಮಾಡಲಾಗಿದೆ ಎಂದು ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನನ್ನ ಮಗಳನ್ನು ಹುಡುಕಿಕೊಡುವಂತೆ ಮನವಿ ಮಾಡಿದ ವಿಡಿಯೋವನ್ನು ಯುವತಿ ಪೋಷಕರು ಹರಿಬಿಟ್ಟಿದ್ದಾರೆ . ರಾಸಲೀಲೆ ಸಿಡಿ ನೋಡಿದಾಕ್ಷಣ ನಮ್ಮ ಮಗಳಿಗೆ ಕರೆ ಮಾಡಿದಾಗ , ಅದು ನನ್ನ ವಿಡಿಯೊ ಅಲ್ಲ ಎಂದು ಹೇಳಿದ್ದಾಳ. ಅಲ್ಲದೆ ನನ್ನ ಜೀವಕ್ಕೆ ಅಪಾಯವಿದೆ ಎಂದು ತಿಳಿಸಿದ್ದಳು ಎಂದು ಯುವತಿ ಪೋಷಕರು ವಿಡಿಯೋ ಬಿಡುಗಡೆ ಮಾಡಿದ್ದಾರೆ 

ಯುವತಿ ತಂದೆ ನೀಡಿದ ದೂರಿನ ಅನ್ವಯ ಪೊಲೀಸರು 363, 368, 343, 346, 354,506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹಾಸ್ಟೆಲ್‌ನಲ್ಲಿದ್ದಾಗ ಪುತ್ರಿಯನ್ನು ಅಪಹರಣ ಮಾಡಿದ್ದಾರೆ. ಆಕೆಗೆ ಹೆದರಿಸಿ, ಕಿರುಕುಳ ನೀಡಿ ಸಿಡಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಂದೆ ಯುವತಿ ಇನ್ನೂ ಹಾಜರಾಗಿ ಹೇಳಿಕೆ ನೀಡಿಲ್ಲ. ಭಾನುವಾರ ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿರುವ ಯುವತಿಯ ಮನೆ ಮುಂದೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸರು ಹೇಳಿಕೆ ನೀಡಲು ಆಗಮಿಸಬೇಕು ಎಂದುದ ನೋಟಿಸ್ ಅಂಟಿಸಿದ್ದರು.

ಯುವತಿ ಸಿಡಿ ಪ್ರಕರಣ ಬೆಳಕಿಗೆ ಬಂದ ಬಳಿಕ ನಾಪತ್ತೆಯಾಗಿದ್ದಾಳೆ. ಯುವತಿ ಶನಿವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಳು. ಮಾಜಿ ಸಚಿವರಿಂದ ನನಗೆ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿದ್ದಳು.

Screenshot 17
Screenshot 18
Screenshot 19
Screenshot 20
Screenshot 22
Screenshot 21
Screenshot 23

LEAVE A REPLY

Please enter your comment!
Please enter your name here