Home ಕರ್ನಾಟಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ​​​: ಎಸ್​ಐಟಿ ವಿಚಾರಣೆಗೆ ನರೇಶ್, ಶ್ರವಣ್ ಹಾಜರ್

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ​​​: ಎಸ್​ಐಟಿ ವಿಚಾರಣೆಗೆ ನರೇಶ್, ಶ್ರವಣ್ ಹಾಜರ್

173
0

ಬೆಂಗಳೂರು:

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಆರೋಪಿಗಳಾದ ನರೇಶ್ ಗೌಡ ಹಾಗೂ ಶ್ರವಣ್ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ತಮ್ಮ ವಕೀಲರ ಜೊತೆ ಆಗಮಿಸಿರುವ ಆರೋಪಿಗಳು ಆಡುಗೋಡಿ ಟೆಕ್ನಿಕಲ್ ಸೆಲ್​ನಲ್ಲಿ ಎಸ್​ಐಟಿ ಮುಂದೆ ಹಾಜರಾಗಿದ್ದಾರೆ. ನರೇಶ್ ಮತ್ತು ಶ್ರವಣ್ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು.

ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಬ್ಲ್ಯಾಕ್​ಮೇಲ್​ ಪ್ರಕರಣದಲ್ಲಿ ಅವರು ತನಿಖೆಗೆ ಹಾಜರಾಗಿದ್ದಾರೆ. ಐದು ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಇಬ್ಬರಿಗೂ ಸೂಚನೆ ನೀಡಿತ್ತು, ಸಿಡಿ ಕಿಂಗ್‌ಪಿನ್‌ಗಳಾದ ನರೇಶ್ ಮತ್ತು ಶ್ರವಣ್‌ ಅವರನ್ನು ಬಂಧನದ ಅವಶ್ಯವಿದ್ದರೆ ಬಂಧಿಸಬಹುದು.

ಬಂಧಿಸಲು ಎಸ್​ಐಟಿ ತನಿಖಾಧಿಕಾರಿಗಳುಸ್ವತಂತ್ರ ಎಂದು ಕೋರ್ಟ್ ಹೇಳಿದೆ. ಹಾಗಾಗಿ ಇಂದು ವಿಚಾರಣೆಗೆ ಹಾಜರಾಗಿರುವ ಆರೋಪಿಗಳಿಬ್ಬರನ್ನು ಎಸ್​ಐಟಿ ಪೊಲೀಸರು ತಮ್ಮ ವಶಕ್ಕೆ ಪಡೆಯುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣದಲ್ಲಿ ಸಿಡಿ ಪ್ರಕರಣದ ರೂವಾರಿಗಳು ಎಂದು ಹೇಳಲಾದ ನರೇಶ್​ ಗೌಡ ಹಾಗೂ ಶ್ರವಣ್​ಗೆ ಬೆಂಗಳೂರಿನ 91ನೇ ಸಿಸಿಹೆಚ್​ ಕೋರ್ಟ್ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

LEAVE A REPLY

Please enter your comment!
Please enter your name here