Home Uncategorized Shah Rukh Khan: ‘ಮದುವೆ ಡೇಟ್​ ಮುಂದೂಡಿಕೊಳ್ಳಿ’: ಅಭಿಮಾನಿಗೆ ಸಲಹೆ ನೀಡಿದ ‘ಪಠಾಣ್​’ ಹೀರೋ ಶಾರುಖ್​...

Shah Rukh Khan: ‘ಮದುವೆ ಡೇಟ್​ ಮುಂದೂಡಿಕೊಳ್ಳಿ’: ಅಭಿಮಾನಿಗೆ ಸಲಹೆ ನೀಡಿದ ‘ಪಠಾಣ್​’ ಹೀರೋ ಶಾರುಖ್​ ಖಾನ್​

1
0
bengaluru

ನಟ ಶಾರುಖ್​ ಖಾನ್​ (Shah Rukh Khan) ಅವರು ಬಹಳಷ್ಟು ಸುದ್ದಿ ಆಗುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರ ಬಗ್ಗೆ ತುಂಬ ಚರ್ಚೆ ಆಗುತ್ತಿದೆ. ಅವರು ನಟಿಸಿರುವ ಹೊಸ ಸಿನಿಮಾ ‘ಪಠಾಣ್​’ (Pathaan Movie) ಬಿಡುಗಡೆಗೆ ಹತ್ತಿರ ಆಗಿದೆ. 2023ರ ಜನವರಿ 25ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಈ ಚಿತ್ರದ ‘ಬೇಷರಂ ರಂಗ್​..’ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ. ಅದರ ಬೆನ್ನಲ್ಲೇ ‘ಪಠಾಣ್​’ ಚಿತ್ರದ ರಿಲೀಸ್​ ದಿನಾಂಕವನ್ನು (Pathaan Movie Release Date) ಮುಂದೂಡಿಕೊಳ್ಳುವಂತೆ ಅಭಿಮಾನಿಯೊಬ್ಬರು ಶಾರುಖ್​ ಖಾನ್​ಗೆ ಮನವಿ ಮಾಡಿದ್ದಾರೆ. ಅವರಿಗೆ ಶಾರುಖ್ ನೀಡಿದ ಉತ್ತರ ಕೂಡ ಫನ್ನಿಯಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಶಾರುಖ್​ ಖಾನ್​ ಅವರು ಪ್ರಶ್ನೋತ್ತರ ನಡೆಸಿದಾಗ ಈ ಮಜವಾದ ಮಾತುಕತೆ ಆಗಿದೆ. ಆದರ ಬಗ್ಗೆ ಇಲ್ಲಿದೆ ವಿವರ..

ಶಾರುಖ್​ ಖಾನ್​ ಅವರನ್ನು ಒಂದು ವರ್ಗದ ಜನರು ಟ್ರೋಲ್​ ಮಾಡುತ್ತಿದ್ದಾರೆ. ಆದರೆ ಅಪ್ಪಟ ಅಭಿಮಾನಿಗಳು ಮೊದಲಿನಷ್ಟೇ ಪ್ರೀತಿ ತೋರಿಸುತ್ತಿದ್ದಾರೆ. ‘ಪಠಾಣ್​’ ಸಿನಿಮಾ ನೋಡಲು ಶಾರಖ್​ ಫ್ಯಾನ್ಸ್​ ಕಾಯುತ್ತಿದ್ದಾರೆ. ಈ ಸಮಯದಲ್ಲಿ ‘AskSRK’ ಎಂದು ಅಭಿಮಾನಿಗಳ ಜೊತೆ 15 ಮಿನಿಷಗಳ ಕಾಲ ಶಾರುಖ್​ ಖಾನ್​ ಪ್ರಶ್ನೋತ್ತರ ನಡೆಸಿದ್ದಾರೆ. ಆಗ ಅವರಿಗೆ ಬಗೆಬಗೆಯ ಪ್ರಶ್ನೆಗಳು ಎದುರಾಗಿವೆ.

ಇದನ್ನೂ ಓದಿ: Pathaan: ಬಾಯ್ಕಾಟ್​ ಎಂದವರಿಗೆ, ಕೇಸರಿ ಬಿಕಿನಿಗೂ ಕಿರಿಕ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾರುಖ್​ ಖಾನ್​

‘ಸರ್​, ನಾನು ಜನವರಿ 25ರಂದು ಮದುವೆ ಆಗುತ್ತಿದೇನೆ. ನೀವು ದಯವಿಟ್ಟು ಪಠಾಣ್​ ಚಿತ್ರದ ಬಿಡುಗಡೆ ದಿನಾಂಕವನ್ನು ಜನವರಿ 26ಕ್ಕೆ ಮುಂದೂಡಬಹುದೇ? ಆಗ ತುಂಬ ಒಳ್ಳೆಯದಾಗುತ್ತದೆ. ಧನ್ಯವಾದಗಳು’ ಎಂದು ಅಭಿಮಾನಿಯೊಬ್ಬರು ಶಾರುಖ್​ ಖಾನ್​ಗೆ ಹೇಳಿದ್ದಾರೆ. ‘ನೀವು ಜನವರಿ 26ರಂದು ಗಣರಾಜ್ಯೋತ್ಸವದ ಪರೇಡ್​ ಬಳಿಕ ಮದುವೆ ಮಾಡಿಕೊಳ್ಳಿ. ಅಂದು ರಜೆ ಕೂಡ ಇದೆ’ ಎಂದು ಶಾರುಖ್ ಉತ್ತರಿಸಿದ್ದಾರೆ. ಈ ಟ್ವೀಟ್​ ವೈರಲ್​ ಆಗಿದೆ.

bengaluru

ಇದನ್ನೂ ಓದಿ: ​Aryan Khan: ಚಿತ್ರರಂಗಕ್ಕೆ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಎಂಟ್ರಿ; ಬ್ರೇಕಿಂಗ್​ ನ್ಯೂಸ್​ ನೀಡಿದ ಸ್ಟಾರ್​ ಕಿಡ್​

‘ಪಠಾಣ್​’ ಸಿನಿಮಾದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಮಾತ್ರವಲ್ಲದೇ ಜಾನ್​ ಅಬ್ರಾಹಂ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದು, ಯಶ್​ ರಾಜ್​ ಫಿಲ್ಮ್ಸ್​ ಬ್ಯಾನರ್​ ಮೂಲಕ ನಿರ್ಮಾಣ ಆಗಿದೆ. ವಿರೋಧದ ನಡುವೆಯೂ ಈ ಚಿತ್ರದ ‘ಬೇಷರಂ ರಂಗ್​..’ ಹಾಡು ಸೂಪರ್​ ಹಿಟ್​ ಆಗಿದೆ. ದಿನದಿಂದ ದಿನಕ್ಕೆ ಈ ಹಾಡಿನ ಕ್ರೇಜ್​ ಹೆಚ್ಚಾಗುತ್ತಿದೆ.

Tum shaadi 26 ko karlo ( Republic Day parade ke baad ) chutti bhi hai us din….#Pathaan https://t.co/XmoUdSYa29

— Shah Rukh Khan (@iamsrk) December 17, 2022

ಶಾರುಖ್​ ಖಾನ್​ ಅವರು ಗಲ್ಲಾಪೆಟ್ಟಿಗೆಯಲ್ಲಿ ಗೆಲುವು ಕಾಣದೇ ಬಹಳ ವರ್ಷಗಳಾಗಿವೆ. 2018ರಲ್ಲಿ ಬಂದ ‘ಜೀರೋ’ ಸಿನಿಮಾ ಹೀನಾಯವಾಗಿ ಸೋತ ಬಳಿಕ ಅವರು ನಾಲ್ಕು ವರ್ಷ ಬ್ರೇಕ್​ ತೆಗೆದುಕೊಂಡರು. ಈಗ ‘ಪಠಾಣ್​’ ಮೂಲಕ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾದ ಗೆಲುವು ಅವರಿಗೆ ಬಹಳ ಮುಖ್ಯವಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

bengaluru

LEAVE A REPLY

Please enter your comment!
Please enter your name here