ಬೆಂಗಳೂರು:
ವಿಶ್ವಾದಾದ್ಯಂತವೂ ಸೇರಿದಂತೆ ರಾಜ್ಯವನ್ನೂ ಕಾಡುತ್ತಿರುವ ಕೊರೊನಾ ಮಹಾಮಾರಿ ನಿವಾರಣೆಗೆ ಭಕ್ತರು ಅಣ್ಣಮ್ಮ ದೇವಿಯ ಮೊರೆ ಹೋಗಿದ್ದು,ದೇವಿಯ ಹೆಸರಿನಲ್ಲಿ ಕುರಿ,ಕೋಳಿ ಬಲಿ ನೀಡಿದ್ದಾರೆ.
ನಗರದ ಕೆ.ಪಿ ಅಗ್ರಹಾರ ಬಡಾವಣೆಯ ಕೆಲವು ಕಡೆಗಳಲ್ಲಿ ನಗರ ದೇವತೆ ಅಣ್ಣಮ್ಮ ಹೆಸರಿನಲ್ಲಿ ಕಲ್ಲು ಮೂರ್ತಿ ಸ್ಥಾಪನೆ ಮಾಡಿ ಬಡಾವಣೆಯ ಬೀದಿಗಳಲ್ಲಿ ರಂಗೋಲಿ ಬಿಟ್ಟು ಬಲಿ ನೀಡಿ ಗಲ್ಲಿಯ ಜನರು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.
ಕೆ.ಪಿ ಅಗ್ರಹಾರ ಬಡಾವಣೆಯ 16 ನೇ ಕ್ರಾಸ್, 6 ನೇ ಕ್ರಾಸ್, 17 ನೇ ಕ್ರಾಸ್,13 ನೇ ಕ್ರಾಸ್ ಸೇರಿ ಇಲ್ಲಿನ ಕೆಲವು ಕಡೆಗಳಲ್ಲಿ ಜನರು ಏಕಕಾಲಕ್ಕೆ ಪೂಜೆ ಸಲ್ಲಿಸಿದ್ದಾರೆ. ಗಲ್ಲಿಗಲ್ಲಿಯಲ್ಲಿ ನಗರ ದೇವತೆ ಅಣ್ಣಮ್ಮ ಹೆಸರಿನಲ್ಲಿ ಕಲ್ಲು ಮೂರ್ತಿ ಸ್ಥಾಪನೆ ಮಾಡಿದ್ದು, ತಮ್ಮ ಮನೆಗಳ ಮುಂದೆಯೂ ರಂಗೋಲಿ ಇಟ್ಟು ಪೂಜೆ ಮಾಡಿ ಅಣ್ಣಮ್ಮ ದೇವಿಗೆ ತೆಂಗಿನಕಾಯಿ ಒಡೆದು, ಮಂಗಳಾರತಿ ನೆರವೇರಿಸಿ ಕೋಳಿ ಮತ್ತು ಕುರಿ ಬಲಿ ನೀಡಿದ್ದಾರೆ. ಆ ಮೂಲಕ ಕೊರೊನಾ ತೊಲಗುವಂತೆ ಬಡಾವಣೆಯ ಜನರು ಪ್ರಾರ್ಥಿಸಿದ್ದಾರೆ.