Home ರಾಜಕೀಯ ಸಿದ್ದರಾಮಯ್ಯ, ಡಿಕೆಶಿಗೆ ಉದ್ಯೋಗ ಇಲ್ಲ: ಸಚಿವ ಆರ್.ಅಶೋಕ್

ಸಿದ್ದರಾಮಯ್ಯ, ಡಿಕೆಶಿಗೆ ಉದ್ಯೋಗ ಇಲ್ಲ: ಸಚಿವ ಆರ್.ಅಶೋಕ್

43
0

ಬೆಂಗಳೂರು:

ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯನವರಿ ಗಾಗಲಿ, ಡಿಕೆ ಶಿವಕುಮಾರ್ ಗಾಗಲಿ ಉದ್ಯೋಗ ಇಲ್ಲ. ನಿರುದ್ಯೋಗಿಗಳಾಗಿದ್ದಾರೆ. ಅದಕ್ಕಾಗಿ ಇವಾಗ ಉದ್ಯೋಗ ಹುಡುಕಿಕೊಂಡು ಅಲೆಯುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್‌. ಅಶೋಕ್ ಕಿಡಿ ಕಾರಿದರು.

ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೃಷಿ ಕಾಯ್ದೆಗಳ ಸುಧಾರಣೆಗಳ ಬಗ್ಗೆ ಹಿಂದೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ಇದ್ದಾಗಲೇ ಪ್ರಾರಂಭ ಆಗಿದ್ದು. ಆದರೆ ಇದರ ಬಗ್ಗೆ ದೇಶದಲ್ಲಿ ಎಲ್ಲೂ ದೊಡ್ಡ ಹೋರಾಟ ಆಗಿಲ್ಲ. ಕಾಂಗ್ರೆಸ್ ನವರಿಗೆ ಏನು ಕೆಲಸ ಇಲ್ಲ. ಕಳೆದ ಆರು ವರ್ಷದಲ್ಲಿ ನರೇಂದ್ರ ಮೋದಿಗೆ ಬಗ್ಗೆ ಆರೋಪ ಮಾಡಲು ಏನು ಸಿಕ್ಕಿಲ್ಲ. ಈಗ ಈ ವಿಷಯದ ಮೂಲಕ ಹೋರಾಟ ಮಾಡುತ್ತಿದ್ದಾರೆ. ಬರೀ ಪ್ರತಿಭಟನೆ ಮಾಡುವ ಉದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದಾರೆಯೇ ಹೊರತು. ಇದರಲ್ಲಿ ಯಾವುದೇ ಹುರಳಿಲ್ಲ ಎಂದು ವಾಗ್ದಾಳಿ ನಡೆಸಿದರು.

LEAVE A REPLY

Please enter your comment!
Please enter your name here