Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • Siddaramaiah Vs Kumaraswamy | ಹೌದು, ಸಿದ್ದರಾಮಯ್ಯಗೆ ನಾನೇ ವಿಲನ್; ಅವರಿಗೆ ವಿಲನ್ ಆಗದೇ ಫ್ರೆಂಡ್ ಆಗಲು ಸಾಧ್ಯವೇ? ನನ್ನ ಸರಕಾರ ಬೀಳಿಸಿದ್ದ ಸಿದ್ದರಾಮಯ್ಯ: ಸಿಎಂಗೆ ತಿರುಗೇಟು ಕೊಟ್ಟ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
  • ಬೆಂಗಳೂರು ನಗರ

Siddaramaiah Vs Kumaraswamy | ಹೌದು, ಸಿದ್ದರಾಮಯ್ಯಗೆ ನಾನೇ ವಿಲನ್; ಅವರಿಗೆ ವಿಲನ್ ಆಗದೇ ಫ್ರೆಂಡ್ ಆಗಲು ಸಾಧ್ಯವೇ? ನನ್ನ ಸರಕಾರ ಬೀಳಿಸಿದ್ದ ಸಿದ್ದರಾಮಯ್ಯ: ಸಿಎಂಗೆ ತಿರುಗೇಟು ಕೊಟ್ಟ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

Vighnesh Pawar October 26, 2023 4:20 PM
Siddaramaiah Vs Kumaraswamy | Yes, I am villain for Siddaramaiah; Can I be his friend without being villain? Siddaramaiah brought down my government: HD Kumaraswamy

Siddaramaiah Vs Kumaraswamy | Yes, I am villain for Siddaramaiah; Can I be his friend without being villain? Siddaramaiah brought down my government: HD Kumaraswamy

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಹೌದು, ನಾನು ಸಿದ್ದರಾಮಯ್ಯಗೆ ರಾಜಕೀಯವಾಗಿ ವಿಲನ್. ಇಲ್ಲ ಎಂದವರು ಯಾರು? ಅವರಿಗೆ ನಾನು ವಿಲನ್ ಆಗದೇ ಸ್ನೇಹಿತ ಆಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಮಾತುಗಳಲ್ಲಿ ಹೇಳಿದರು.

ಅವರು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.

ತಾಜ್ ನಲ್ಲಿ ಇದ್ದೆ ಅಂತ ಪದೇ ಪದೇ ಹೇಳ್ತಾರೆ. ತಾಜ್ ನಲ್ಲಿ ನಾನು ಮೋಜು ಮಸ್ತಿ ಮಾಡ್ತಿರಲಿಲ್ಲ. ಅಭಿವೃದ್ಧಿ ಕೆಲಸದ ಚರ್ಚೆ ಮಾಡ್ತಿದ್ದೆ. ನನ್ನ ಬಳಿ ಎಲ್ಲಾ ದಾಖಲಾತಿ ಇದೆ ಎಂದು ಅವರು ಟಾಂಗ್ ನೀಡಿದರು.

ನನ್ನನ್ನು ಕಾಂಗ್ರೆಸ್ ನಾಯಕರು ಸಿಎಂ ಎನ್ನುವ ಗೌರವ ಇಲ್ಲದೆ ಪಪೇಟ್ ರೀತಿಯಲ್ಲಿ ನಡೆಸಿಕೊಂಡು ಅಪಮಾನ ಮಾಡಿದರು. ನಾನು ಸಿಎಂ ಆದಾಗ ಕಾಂಗ್ರೆಸ್ ಶಾಸಕರು ಇಸ್ಪೀಟ್ ಎಲೆ ಎಸೆದ ಹಾಗೆ ಅವರ ಅಹವಾಲುಗಳನ್ನು ನನ್ನ ಟೇಬಲ್ ಮೇಲೆ ಎಸೆಯುತ್ತಿದ್ದರು. ಅಂತಹವರು ನನ್ನ ಬಗ್ಗೆ ವಿಲನ್ ಎಂದು ಹೇಳುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು ಕುಮಾರಸ್ವಾಮಿ.

ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಅವರೇ. ಇದರಲ್ಲಿ ಎರಡು ಮಾತಿಲ್ಲ. ಬಿಜೆಪಿ‌ಯವರು ಸರ್ಕಾರ ಬೀಳಿಸಿದ್ದರು ಅಂತ ಹೇಳಿದ್ದೆ. ಆದರೆ ಅದಕ್ಕೆ ಬಿತ್ತನೆ ಹಾಕಿದ್ದು ಇದೇ ಸಿದ್ದರಾಮಯ್ಯ ಎಂದ ಅವರು ರಮೇಶ್ ಜಾರಕಿಹೋಳಿ ಯಾರು? ಅವರಿಗೂ ನನಗೂ ಯಾವ ಶತ್ರುತ್ವ ಇತ್ತಾ? ಬೆಳಗಾವಿ ರಾಜಕೀಯ ಸರಿ ಮಾಡಿ ಎಂದು ನಾನು ಇವರಿಗೆ ಹೇಳಿದೆ. ಇವರು ಸರಕಾರ ಬಿದ್ದು ಹೋಗಲಿ ಎಂದು ಸುಮ್ಮನಿದ್ದರು. ಆಗ ಬಿಜೆಪಿ‌ ಜತೆ ಕೈ ಜೋಡಿಸಿದ್ದು ಸಿದ್ದರಾಮಯ್ಯ. ಅದಕ್ಕೆ ‌ಸಮ್ಮಿಶ್ರ ಸರಕಾರ ಬಿದ್ದು ಹೋಯಿತು ಎಂದು ಅವರು ನೇರ ಆರೋಪ ಮಾಡಿದರು.

ಇಬ್ಬರು ಪಕ್ಷೇತರ ಶಾಸಕರನ್ನು ಮಂತ್ರಿ ಮಾಡಿಸಿದ್ದು ಸಿದ್ದರಾಮಯ್ಯ. ಬಿ.ಸಿ.ಪಾಟೀಲ್ ಅವರನ್ನು ಮಂತ್ರಿ ಮಾಡಲು ಹೇಳಿದ್ದೆ. ಆದರೆ‌ ಸಿದ್ದರಾಮಯ್ಯ ಮಾಡಲಿಲ್ಲ. ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಶ್ರೀಮಂತ ಪಾಟೀಲ್, ಆರ್.ಶಂಕರ್ ಅವರನ್ನು ರೆಸಾರ್ಟ್ ನಿಂದ ಕಳಿಸಿದ್ದು ಇದೇ ಸಿದ್ದರಾಮಯ್ಯ ಎಂದು ಟೀಕಾ ಪ್ರಹಾರ ನಡೆಸಿದ ಅವರು; ಅಪ್ಪ ನಿಮಗೊಂದು ನಮಸ್ಕಾರ. 14 ತಿಂಗಳು ನನ್ನನ್ನ ಅಧಿಕಾರದಲ್ಲಿ ಇಟ್ಟಿದ್ದಕ್ಕೆ ನಮೋ ನಮಃ. ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು ಅವರು.

ಗೃಹಲಕ್ಷ್ಮಿ ರಾಜಸ್ಥಾನದಲ್ಲಿ ಯಾಕೆ 10 ಸಾವಿರ‌ ಕೊಡ್ತಿದ್ದೀರಾ? ಎಲ್ಲಾ ಕಡೆ ಗ್ಯಾರಂಟಿಗಳನ್ನು ಕೊಡುತ್ತಿದೆ ಕಾಂಗ್ರೆಸ್. ಈ ಕಾರಣಕ್ಕೆ ಎಲ್ಲ ಯೋಜನೆಗಳು ಹಳ್ಳ ಹಿಡಿದು ಹೋಗಿವೆ. ನಿಮ್ಮ ಗ್ಯಾರಂಟಿಗಳ ಬಗ್ಗೆ ಜನ ಛೀ ಥೂ ಎಂದು ಉಗಿಯೋ ಕಾಲ ಬರುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

About the Author

Vighnesh Pawar

Subscriber

View All Posts

Post navigation

Previous: ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ, ಅಧಿವೇಶನದಲ್ಲಿ ಚರ್ಚೆಗೆ ಸಿದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಸವಾಲು
Next: President Draupadi Murmu | ನೈತಿಕ ಮೌಲ್ಯಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು: ರಾಷ್ಟ್ರಪತಿ ದ್ರೌಪದಿ ಮುರ್ಮು

Related Stories

ನಿಲ್ದಾಣದಲ್ಲಿ ಹೂಮಾಲೆ ಹಾಕಿದ ನಮ್ಮ ಮೆಟ್ರೋ ಪಿಂಕ್ ಲೈನ್ ರೈಲು; ಹಸಿರು ಬಾವುಟ ಬೀಸುತ್ತಿರುವ ಪ್ರಧಾನಿ ಮೋದಿ ಮತ್ತು ಸಿಎಂ ಶಿವಕುಮಾರ್
  • ಬೆಂಗಳೂರು ನಗರ

ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ, ಸಿಎಂ ಶಿವಕುಮಾರ್ ಚಾಲನೆ

The Bengaluru Live November 13, 2026 1:47 PM
ತ್ಯಾಜ್ಯ ತೆರವಿನ ನಂತರ ವಿದ್ಯಾರಣ್ಯಪುರದಲ್ಲಿ ಕಾಂಪೌಂಡ್ ಗೋಡೆ ಮತ್ತು ಮರಗಳಿರುವ ರಸ್ತೆಯ ಪಕ್ಕದ ಸ್ವಚ್ಛ ಪಾದಚಾರಿ ಮಾರ್ಗ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು

The Bengaluru Live November 13, 2026 1:23 PM
ರಸ್ತೆ ಬದಿಯ ಚರಂಡಿ ಮತ್ತು ಪಾದಚಾರಿ ಮಾರ್ಗದ ವಾರ್ಡ್ ಒನ್ ಕಾಮಗಾರಿಯ ಮೊದಲು-ನಂತರದ ಹೋಲಿಕೆ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್

The Bengaluru Live November 13, 2026 12:20 PM

Latest Post

ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ, ಸಿಎಂ ಶಿವಕುಮಾರ್ ಚಾಲನೆ ನಿಲ್ದಾಣದಲ್ಲಿ ಹೂಮಾಲೆ ಹಾಕಿದ ನಮ್ಮ ಮೆಟ್ರೋ ಪಿಂಕ್ ಲೈನ್ ರೈಲು; ಹಸಿರು ಬಾವುಟ ಬೀಸುತ್ತಿರುವ ಪ್ರಧಾನಿ ಮೋದಿ ಮತ್ತು ಸಿಎಂ ಶಿವಕುಮಾರ್
  • ಬೆಂಗಳೂರು ನಗರ

ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ, ಸಿಎಂ ಶಿವಕುಮಾರ್ ಚಾಲನೆ

November 13, 2026 1:47 PM
ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು ತ್ಯಾಜ್ಯ ತೆರವಿನ ನಂತರ ವಿದ್ಯಾರಣ್ಯಪುರದಲ್ಲಿ ಕಾಂಪೌಂಡ್ ಗೋಡೆ ಮತ್ತು ಮರಗಳಿರುವ ರಸ್ತೆಯ ಪಕ್ಕದ ಸ್ವಚ್ಛ ಪಾದಚಾರಿ ಮಾರ್ಗ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು

November 13, 2026 1:23 PM
ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ, 2 ಲಕ್ಷ ಸಸಿ ನೆಡುವ ಗುರಿ ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ಚಾಲನೆ ನೀಡುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆಟ್ಟ ಸಸಿಗೆ ನೀರು ಹಾಕುತ್ತಿರುವುದು
  • ಕರ್ನಾಟಕ

ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ, 2 ಲಕ್ಷ ಸಸಿ ನೆಡುವ ಗುರಿ

November 13, 2026 1:21 PM
ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್ ರಸ್ತೆ ಬದಿಯ ಚರಂಡಿ ಮತ್ತು ಪಾದಚಾರಿ ಮಾರ್ಗದ ವಾರ್ಡ್ ಒನ್ ಕಾಮಗಾರಿಯ ಮೊದಲು-ನಂತರದ ಹೋಲಿಕೆ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್

November 13, 2026 12:20 PM
ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ; ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಸಿಎಂ ಶಿವಕುಮಾರ್, ರಾಜ್ಯಪಾಲರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ರಾಜ್ಯಪಾಲರಾದ ಸುಧಾ ಯಾದವ್ ಉಪಸ್ಥಿತರಿದ್ದಾರೆ
  • ಬೆಂಗಳೂರು ನಗರ

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ; ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಸಿಎಂ ಶಿವಕುಮಾರ್, ರಾಜ್ಯಪಾಲರು

November 13, 2026 12:17 PM
ನವೆಂಬರ್ 14ರಂದು ಬೆಂಗಳೂರಿನ ಎಲ್ಲ 64 ಎಆರ್‌ಒ ಕಚೇರಿಗಳಲ್ಲಿ ಇ-ಖಾತಾ ಓಪನ್ ಹೌಸ್ ಬೆಂಗಳೂರು ಉತ್ತರದ ಇ-ಖಾತಾ ಸೇವಾ ಕೇಂದ್ರದಲ್ಲಿ ನಾಗರಿಕರು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ನವೆಂಬರ್ 14ರಂದು ಬೆಂಗಳೂರಿನ ಎಲ್ಲ 64 ಎಆರ್‌ಒ ಕಚೇರಿಗಳಲ್ಲಿ ಇ-ಖಾತಾ ಓಪನ್ ಹೌಸ್

November 13, 2026 8:24 AM

ನೀವು ತಪ್ಪಿಸಿಕೊಂಡಿರಬಹುದು

ನಿಲ್ದಾಣದಲ್ಲಿ ಹೂಮಾಲೆ ಹಾಕಿದ ನಮ್ಮ ಮೆಟ್ರೋ ಪಿಂಕ್ ಲೈನ್ ರೈಲು; ಹಸಿರು ಬಾವುಟ ಬೀಸುತ್ತಿರುವ ಪ್ರಧಾನಿ ಮೋದಿ ಮತ್ತು ಸಿಎಂ ಶಿವಕುಮಾರ್
  • ಬೆಂಗಳೂರು ನಗರ

ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ, ಸಿಎಂ ಶಿವಕುಮಾರ್ ಚಾಲನೆ

The Bengaluru Live November 13, 2026 1:47 PM
ತ್ಯಾಜ್ಯ ತೆರವಿನ ನಂತರ ವಿದ್ಯಾರಣ್ಯಪುರದಲ್ಲಿ ಕಾಂಪೌಂಡ್ ಗೋಡೆ ಮತ್ತು ಮರಗಳಿರುವ ರಸ್ತೆಯ ಪಕ್ಕದ ಸ್ವಚ್ಛ ಪಾದಚಾರಿ ಮಾರ್ಗ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು

The Bengaluru Live November 13, 2026 1:23 PM
ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ಚಾಲನೆ ನೀಡುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆಟ್ಟ ಸಸಿಗೆ ನೀರು ಹಾಕುತ್ತಿರುವುದು
  • ಕರ್ನಾಟಕ

ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ, 2 ಲಕ್ಷ ಸಸಿ ನೆಡುವ ಗುರಿ

The Bengaluru Live November 13, 2026 1:21 PM
ರಸ್ತೆ ಬದಿಯ ಚರಂಡಿ ಮತ್ತು ಪಾದಚಾರಿ ಮಾರ್ಗದ ವಾರ್ಡ್ ಒನ್ ಕಾಮಗಾರಿಯ ಮೊದಲು-ನಂತರದ ಹೋಲಿಕೆ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್

The Bengaluru Live November 13, 2026 12:20 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ, ಸಿಎಂ ಶಿವಕುಮಾರ್ ಚಾಲನೆ
  • ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು
  • ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ, 2 ಲಕ್ಷ ಸಸಿ ನೆಡುವ ಗುರಿ
  • ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್
©Copyright 2025 The Bengaluru Live All rights reserved. | MoreNews by AF themes.